ಕಾಸರಗೋಡು ನಗರದಿಂದ ಯುವಕನನ್ನು ಅಪಹರಿಸಿದ ಪ್ರಕರಣದ ಹಿಂದೆ ಅಮಾನ್ಯ ನೋಟು ವ್ಯವಹಾರ: ಎರಡು ಪ್ರಕರಣ ದಾಖಲು ; 8 ಮಂದಿ ಸೆರೆ
ಕಾಸರಗೋಡು: ನಗರದ ಕರಂದಕ್ಕಾಡ್ ಅಶ್ವಿನಿ ನಗರದ ಹೋಟೆಲ್‌ವೊಂದರ ಸಮೀಪದಿಂದ ತಂಡವೊಂದು ಕಾರಿನಲ್ಲಿ ಮೊನ್ನೆ ಮಧ್ಯಾಹ್ನ ಮೇಲ್ಪರಂಬ ನಿವಾಸಿ ಹನೀಫ ಎಂಬವರನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿ ದೂರುದಾತ ಹಾಗೂ ಆರೋಪಿಗಳ ಸಹಿತ 8 ಮಂದಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಹಳೆಯ 2೦೦೦ ರೂ. ಮುಖಬೆಲೆಯ ನೋಟು ವ್ಯವಹಾರವೇ ಯುವಕನ ಅಪಹರಣಕ್ಕೆ ಕಾರಣವೆಂದು ಇದುವರೆಗೆ ನಡೆದ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶ ತಂಡದ ಓರ್ವನನ್ನು ತಡೆದು ನಿಲ್ಲಿಸಿ ಏಳೂವರೆ ಲಕ್ಷ ರೂ. ಅಪಹರಿಸಿದ ದ್ವೇಷದಿಂದ ಮೇಲ್ಪರಂಬ ನಿವಾಸಿ …