ಮಂಜೇಶ್ವರ ಮಂಡಲದಲ್ಲಿ ಯುಡಿಎಫ್ ಆಕ್ರಮಣ: ನಿಲ್ಲಿಸದಿದ್ದರೆ ಪ್ರತಿಭಟನೆಗೆ ಮುಂದಾಗುವುದಾಗಿ ಎಲ್‌ಡಿಎಫ್

ಮಂಜೇಶ್ವರ: ಚುನಾವಣೆ ಕಳೆದ ಬಳಿಕ ಮಂಜೇಶ್ವರ ಮಂಡಲದ ವಿವಿಧ ಪ್ರದೇಶಗಳಲ್ಲಿ ಐಕ್ಯರಂಗದ ನೇತೃತ್ವದಲ್ಲಿ ಎಡರಂಗ ಕಾರ್ಯಕರ್ತರ ವಿರುದ್ಧ ಆಕ್ರಮಣ ನಡೆಸಲಾಗುತ್ತಿರುವುದಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ಮಂಜೇಶ್ವರದ ಶಾಸಕರ ಬೆಂಬಲದೊಂದಿಗೆ ಈ ತಂಡ ವಿನಾಕಾರಣ ಆಕ್ರಮಣ ನಡೆಸುತ್ತಿರು ವುದಾಗಿ ಅವರು ದೂರಿದ್ದು, ಜನಪ್ರತಿನಿಧಿ ಗಳು ಈ ರೀತಿಯ ಆಕ್ರಮಣಗಳಿಗೆ ನೇತೃತ್ವ ನೀಡುತ್ತಿರುವುದು ಈ ಪರಿಸರದ ಜನರ ನೆಮ್ಮದಿಯನ್ನು ಹಾಳುಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರದೇಶದಲ್ಲಿ ಗೂಂಡಾ ರಾಜ್ಯ ಸ್ಥಾಪಿಸಲು ಮುಸ್ಲಿಂ ಲೀಗ್ …

ನಿಧನ

ಕಾಸರಗೋಡು: ಆನೆಬಾಗಿಲು ನಿವಾಸಿ ಗಣೇಶ ಆಚಾರ್ಯ (62) ನಿನ್ನೆ ನಿಧನ ಹೊಂದಿದರು. ಇವರು ವಿಶ್ವಕರ್ಮ ಯುವಕಸಂಘದ ಕಾರ್ಯ ದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡಿನಲ್ಲಿ ಭಜನಾಮಂದಿರ, ಕಲ್ಯಾಣ ಮಂಟಪ ಯೋಜನೆಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶ್ರೀವಳ್ಳಿ (ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದ ಮುಖ್ಯೋಪಾ ಧ್ಯಾಯಿನಿ), ಮಕ್ಕಳಾದ ಶ್ರೇಷ್ಠ, ವರ್ಷ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಶ್ರೀ ವಿಶ್ವಬ್ರಾಹ್ಮಣ ಸಮಾಜಸೇವಾಸಂಘ, ಶ್ರೀ ವಿಶ್ವಕರ್ಮ ಯುವಕಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಸಂತಾಪ …

ನಿವೃತ್ತ ಅಧ್ಯಾಪಕ ನಿಧನ

ಬದಿಯಡ್ಕ: ನಿವೃತ್ತ ಅಧ್ಯಾಪಕ ಉಪ್ಪಂಗಳ ಭಸ್ಮಾಜೆ ಪಿ. ಗೋಪಾಲ ಕೃಷ್ಣ ಭಟ್ (86) ನಿಧನಹೊಂದಿ ದರು. ಇವರು ಪೈಕ ಎಯುಪಿ ಶಾಲೆ ಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ  ವಿಜಯಲಕ್ಷ್ಮಿ, ಭಾರತಿ, ರಂಜಿನಿ, ಅಳಿಯಂದಿರಾದ ಸುಬ್ರಹ್ಮ ಣ್ಯ ಮುಂಡುಗಾರು, ವೆಂಕಟ್ರಮಣ ಭಟ್ ವಡ್ಯದಗಯ, ಶ್ರೀಪತಿ ಸೂರ್ಡೇಲು ಹಾಗೂ  ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

ನಗರಸಭೆಗೆ ಆಯ್ಕೆ: 33ನೇ ವಾರ್ಡ್ ಪ್ರತಿನಿಧಿಯಿಂದ ವಿಜಯೋತ್ಸವ ಮೆರವಣಿಗೆ

ಕಾಸರಗೋಡು: ಕಾಸರಗೋಡು ನಗರಸಭೆಗೆ 33ನೇ ವಾರ್ಡ್‌ನಿಂದ  ಸ್ಪರ್ಧಿಸಿ ಜಯಗಳಿಸಿದ ಕೆ.ಎನ್. ರಾಮಕೃಷ್ಣ ಹೊಳ್ಳರ ವಿಜಯೋತ್ಸವ ಮೆರವಣಿಗೆ ನಗರದಲ್ಲಿ ನಡೆಯಿತು. ಮತದಾರರ ಮನೆಗೆ ತೆರಳಿ ಸಿಹಿ ಹಂಚಲಾಯಿತು. ಕೆ.ಎನ್. ವೆಂಕಟ್ರ ಮಣ ಹೊಳ್ಳ, ನಗರಸಭಾ ಮಾಜಿ ಸದಸ್ಯೆ ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಕೆ.ವಿ. ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್, ಸಂತೋಷ್ ಭಂಡಾರಿ, ವಸಂತ್ ಕೆರೆಮನೆ, ಜಿತಿನ್‌ರಾಜ್ ಶೆಟ್ಟಿ, ಭರತ್‌ರಾಜ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದರು. ಕೆ.ವಿ. ತಿರುಮಲೇಶ ಹೊಳ್ಳ, ಕೆ.ವಿ. ಶೇಷಾದ್ರಿ ಹೊಳ್ಳ, ಪ್ರಜ್ವಲ್, …

ನೂತನ ಪಂಚಾಯತ್ ಜನಪ್ರತಿನಿಧಿಗಳಿಗೆ ಎಲ್‌ಡಿಎಫ್‌ನಿಂದ ಸ್ವಾಗತ

ನೀರ್ಚಾಲು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಬದಿಯಡ್ಕ ಪಂಚಾ ಯತ್‌ನ ನಾಲ್ಕನೇ ವಾರ್ಡ್‌ನಲ್ಲಿ  ಎಡರಂಗದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಸಿಪಿಎಂನ ಅನ್ನತ್ ಬೀವಿ,  ಪುತ್ತಿಗೆ ಪಂಚಾಯತ್ ಉರ್ಮಿ ವಾರ್ಡ್‌ನಿಂದ ಗೆಲುವು ಸಾಧಿಸಿದ ಅಬ್ದುಲ್ ಮಜೀದ್ ಎಂ.ಎಚ್., ಮುಂಡಿತ್ತಡ್ಕ ವಾರ್ಡ್‌ನಿಂದ ಗೆಲುವು ಸಾಧಿಸಿದ ಲಲಿತಾ ಸಂತೋಷ್ ಎಂಬಿವರಿಗೆ  ದೇವರಮೆಟ್ಟು ಎಲ್‌ಡಿಎಫ್ ವಾರ್ಡ್ ಕಮಿಟಿ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು.  ಚೆನ್ನೆಗುಳಿ ಉನ್ನತಿಯಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಕಾರ್ಯದರ್ಶಿ ಸುಬ್ಬಣ್ಣ ರೈ ಅಧ್ಯಕ್ಷತೆ ವಹಿಸಿದರು.  ಸೀಸನ್ ಅಬ್ದುಲ್ಲ ಕುಂಞಿ, ಪ್ರಕಾಶ್ ಅಮ್ಮಣ್ಣಾಯ, ಸಂತೋಷ್ ಪಳ್ಳಂ, …

ಜಿಲ್ಲಾ ಶಾಲಾ ಕಲೋತ್ಸವ: ಮೊಗ್ರಾಲ್‌ನಲ್ಲಿ ಪೊಲೀಸ್ ಕಾವಲು; ಶಾಂತಿಗೆ ಭಂಗವುಂಟುಮಾಡಿದರೆ ಕಠಿಣ ಕ್ರಮ-ಮುನ್ನೆಚ್ಚರಿಕೆ

ಕುಂಬಳೆ: ಜಿಲ್ಲಾ ಶಾಲಾ ಕಲೋತ್ಸ ವಕ್ಕೆ ಮೊಗ್ರಾಲ್‌ನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ತಿಂಗಳ 29ರಿಂದ ಮೊಗ್ರಾಲ್ ಜಿವಿಎಚ್‌ಎಸ್ ಎಸ್‌ನಲ್ಲಿ  ಕಲೋತ್ಸವ ನಡೆಯಲಿದೆ. ಕಲೋತ್ಸವ ವನ್ನು ಅದ್ದೂರಿಯಿಂದ ನಡೆಸಲು ಒಂದೆಡೆ ಸಂಘಾಟಕ ಸಮಿತಿ  ತಯಾರಿ ಯಲ್ಲಿ ನಿರತಗೊಂ ಡಿದ್ದು, ಇದರ ಜತೆಗೆ ಕಲೋತ್ಸವ ಯಶಸ್ವಿಯಾಗಿ, ಶಾಂತಿ ಯುತವಾಗಿ ನಡೆಯುವಂತಾ ಗಲು ಪೊಲೀಸರು ಈಗಾಗಲೇ ಅಗತ್ಯದ ಕ್ರಮ ಕೈಗೊಂಡಿದ್ದಾರೆ.  ಶಾಲೆಯಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.  ಕಲೋ ತ್ಸವ ದಿನಗಳಂದು ೨೦೦ರಷ್ಟು ಪೊಲೀ ಸನ್ನು ಶಾಲೆಯ ಸುತ್ತಮುತ್ತ ನೇಮಿಸಲಾ ಗುವುದು. …

ಬೇಕಲ ಬೀಚ್ ಫೆಸ್ಟ್‌ಗೆ ಇಂದು ಚಾಲನೆ

ಕಾಸರಗೋಡು: ರಾಜ್ಯ ಲೋಕೋ ಪಯೋಗಿ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಇಂದು ಸಂಜೆ ಜಿಲ್ಲೆಗೆ ತಲುಪುವರು. ಬೇಕಲ ಬೀಚ್ ಪಾರ್ಕ್‌ನಲ್ಲಿ  ಈ ತಿಂಗಳ 31ರವರೆಗೆ ನಡೆಯಲಿರುವ ಬೇಕಲ್ ಇಂಟರ್ ನ್ಯಾಶನಲ್ ಬೀಚ್ ಫೆಸ್ಟಿವ ಲ್‌ನ್ನು ಅವರ ಉದ್ಘಾಟಿಸುವರು. ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸುವರು. ಬೇಕಲಕೋಟೆಯನ್ನು ಹಿನ್ನೆಲೆಯಾಗಿ ಚಿತ್ರೀಕರಿಸಿ ನಿರ್ಮಿಸಿದ ಬಾಂಬೆ ಸಿನಿಮಾದ ನಿರ್ದೇಶಕ ಮಣಿರತ್ನ, ಸಿನಿಮಾ ನಟಿ ಮನಿಷಾ ಕೊಯಿರಾಲ, ಛಾಯಾಗ್ರಾಹಕ ರಾಜೀವ್ ಮೆನೊನ್ ಎಂಬಿವರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದು, ಇವರು ಈಗಾಗಲೇ ಬೇಕಲಕೋಟೆಗೆ …