ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಸೇರ್ಪಡೆಗೆ ಯತ್ನಿಸುವೆ- ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್
ಮುಳ್ಳೇರಿಯ: ತುಳು ಭಾಷಿಗರ ಹಲವು ಕಾಲದ ಬೇಡಿಕೆಯಾದ ಸಂವಿಧಾನದ ೮ನೇ ಪರಿಚ್ಛೇಧದ ಸೇರ್ಪಡೆಗೆ ಪಾರ್ಲಿಮೆಂಟ್‌ನಲ್ಲಿ ಪ್ರಸ್ತಾಪ ನಡೆಸಿದ್ದು, ಮುಂದೆಯೂ ಅದಕ್ಕಾಗಿ ತೀವ್ರ ಯತ್ನ ನಡೆಸುವೆನೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನುಡಿದರು. ಅವರು ಮುಂಡೋಳು ಕ್ಷೇತ್ರದ ಸಭಾ ಭವನದಲ್ಲಿ ನಡೆದ ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಶಿಷ್ಯರ ರಂಗಪ್ರವೇಶ, ಗುರುವಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪುರಾಣ ಕತೆಗಳ ಮೂಲಕ ಭಕ್ತಿ ಪ್ರಧಾನ ಸಂಸ್ಕೃತಿ ಬೆಳೆಸುವ ಯಕ್ಷಗಾನ ಕಲೆಯನ್ನು ತಲೆಮಾರುಗಳಿಗೆ ಹಸ್ತಾಂತರಿಸಲು ಕಾರಡ್ಕ …