ಜಿಲ್ಲಾ ಶಾಲಾ ಕಲೋತ್ಸವ: ಮಡಲು ಹೆಣೆಯುವ ಸ್ಪರ್ಧೆ 26ರಂದು

ಮೊಗ್ರಾಲ್: ಕಂದಾಯ ಜಿಲ್ಲಾ  ಶಾಲಾ ಕಲೋತ್ಸವದಂಗವಾಗಿ ಇಂದು ಮೊಗ್ರಾಲ್ ಸರಕಾರಿ ವಿಎಚ್‌ಎಸ್‌ಎಸ್‌ನಲ್ಲಿ ಮಾತೃಸಂಗಮ ನಡೆಯಿತು. ಶಾಲೆಯ ಮಕ್ಕಳ ತಾಯಂದಿರು ಭಾಗವಹಿಸಿದ ಮಾತೃಸಂಗಮ ಇಂದು ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಕಲೋತ್ಸವ ನಗರದಲ್ಲಿ ಗ್ರೀನ್ ಪ್ರೊಟೋಕಾಲ್ ಸಮಿತಿ ಆಶ್ರಯದಲ್ಲಿ ಈ ತಿಂಗಳ 26ರಂದು ಬೆಳಿಗ್ಗೆ 10 ಗಂಟೆಗೆ ಮಡಲು ಹೆಣೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಪುಳಿಕುತ್ತಿ ಸ್ಮಶಾನದ ಅಭಿವೃದ್ಧಿ ಮರೀಚಿಕೆ: ಮೃತದೇಹಗಳ ಅಂತ್ಯಕ್ರಿಯೆಗೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ರುದ್ರಭೂಮಿ ಅಧಿಕಾರಿಗಳ ಅನಾಸ್ಥೆಯಿಂದ ಉಪಯೋಗಶೂನ್ಯಗೊಳ್ಳುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಇದರ ಅಭಿವೃದ್ಧಿಗೆ ಪಂಚಾಯತ್ 15 ಲಕ್ಷ ರೂ. ಹಾಗೂ ಬ್ಲೋಕ್ ಪಂಚಾಯತ್ 10 ಲಕ್ಷ ರೂ. ಮಂಜೂರು ಮಾಡಿದೆ ಎಂದು ಹೇಳಲಾಗುತ್ತಿದ್ದರೂ ಇದುವರೆಗೂ ಯಾವುದೇ ಕಾಮಗಾರಿ ಆರಂಭದ ಸೂಚನೆ ಲಭಿಸಿಲ್ಲ. ಪ್ರಸ್ತುತ ಈ ರುದ್ರಭೂಮಿಗೆ ತಲುಪಲು ಜನರು ಸಂಕಷ್ಟಪಡುತ್ತಿದ್ದು, ಇಲ್ಲಿ ಮೃತದೇಹವನ್ನು ದಹಿಸಲು ಸೂಕ್ತ ವ್ಯವಸ್ಥೆ ಇಲ್ಲವೆನ್ನಲಾಗಿದೆ. ಬೆಳಕು, ನೀರಿನ ವ್ಯವಸ್ಥೆಯೂ ಇಲ್ಲದೆ ಕಾಡು ಪೊದೆಗಳು ಆವರಿಸಿ ಹಂದಿ ಸಹಿತ ವಿವಿಧ ಪ್ರಾಣಿಗಳ …

ಕೇಂದ್ರ ಸರಕಾರಿ ನೌಕರರಿಂದ ಕ್ರಿಸ್ಮಸ್ ಆಚರಣೆ

ಕಾಸರಗೋಡು: ಕೇಂದ್ರ ಸರಕಾರಿ ನೌಕರರ ಕಾನ್ಫೆಡರೇಶನ್  ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ನೇಶನಲ್ ಫೆಡರೇ ಶನ್ ಆಫ್ ಪೋಸ್ಟಲ್ ಎಂಪ್ಲೋಯೀಸ್ ಕಾಸರಗೋಡು ಡಿವಿಶನ್‌ನ ಸಂಯು ಕ್ತಾಶ್ರಯದಲ್ಲಿ  ಕೋಮುವಾದ ರಾಜಕೀಯ ವಿರುದ್ಧ ಕ್ರಿಸ್ಮಸ್ ಹಾಡಿನೊಂದಿಗೆ  ಕ್ರಿಸ್ಮಸ್ ಆಚರಿಸಲಾಯಿತು.  ಕಾಸರಗೋಡು  ಪ್ರಧಾನ ಅಂಚೆ ಕಚೇರಿ ಮುಂದೆ ನಿನ್ನೆ ಸಂಜೆ ನಡೆದ ಕಾರ್ಯಕ್ರಮವನ್ನು ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ರಾಜ್ಯ ಕೋಶಾಧಿಕಾರಿ ಇ. ಪದ್ಮಾವತಿ ಉದ್ಘಾಟಿಸಿದರು. ಕೇಂದ್ರ ನೌಕರರ ಕೌನ್ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಪಿ.ವಿ. ಶರತ್ ಅಧ್ಯಕ್ಷತೆ ವಹಿಸಿದರು. ಸಿ. ರಾಘವನ್, ಕೆ. …

ಜಾಂಬ್ರಿ ಗುಹಾ ಪರಿಸರದಲ್ಲಿ ಬೆಂಕಿ ಆಕಸ್ಮಿಕ

ಬೆಳ್ಳೂರು: ಗಡಿ ಪ್ರದೇಶವಾದ ಬಂಟಾಜೆ ಚೆಂಡೆತ್ತಡ್ಕ ಬಯಲಿನಲ್ಲಿ ನಿನ್ನೆ ಸಂಜೆ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಒಣಹುಲ್ಲು ಉರಿದು ನಾಶಗೊಂಡಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರಿನಿಂದ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದ್ದು, ಸ್ಥಳೀಯರು ಸಹಕಾರ ನೀಡಿದರು. ಪ್ರಸಿದ್ಧ ಜಾಂಬ್ರಿ ಗುಹಾ ಪ್ರದೇಶವಿದಾಗಿದ್ದು, ಕರ್ನಾಟಕದ ಬಂಟಾಜೆ ಹಾಗೂ ಕೇರಳದ ಪರಪ್ಪ ರೇಂಜ್‌ಗೆ ಒಳಗೊಂಡ ರಕ್ಷಿ ತಾರಣ್ಯವಾಗಿದೆ. ಮರಗಿಡಗಳಿಗೆ ಬೆಂಕಿ ವ್ಯಾಪಿಸುವ ಮುನ್ನ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.

ಶ್ರೀ ಕ್ಷೇತ್ರ ಧ.ಗ್ರಾ.ಯೋ. ಒಕ್ಕೂಟಗಳ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು, ಬದಿಯಡ್ಕ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನೀರ್ಚಾಲು, ಕನ್ನೆಪ್ಪಾಡಿ, ಕಡಂಬಳ, ಮಾನ್ಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೀರ್ಚಾಲು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ …