ಶಬರಿಮಲೆ ಮಾತ್ರವಲ್ಲ ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆದಿತ್ತು- ಸ್ಪೋಟಕ ಹೇಳಿಕೆ
ತಿರುವನಂತಪುರ: ಶಬರಿಮಲೆ ದೇಗುಲದ ನಾಲ್ಕು ಪಂಚಲೋಹ ವಿಗ್ರಹಗಳನ್ನು ಸಾಗಿಸಲು ಯತ್ನಿಸಿದ ಅಂತಾರಾಷ್ಟ್ರೀಯ ವಿಗ್ರಹ ಸಾಗಾಟ ಮಾಫಿಯಾ ತಂಡ ಅತೀವ ಶ್ರೀಮಂತ ದೇಗುಲವೆಂದೇ ಖ್ಯಾತಿ ಹೊಂದಿರುವ ತಿರುವನಂತಪುರದ ಶ್ರೀ ಪದ್ಮನಾಭ ಕ್ಷೇತ್ರದ ಪಂಚಲೋಹ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆಸಿತ್ತೆಂದೂ ಇದಕ್ಕಾಗಿ ಆ ತಂಡದವರು ಹಣದೊಂದಿಗೆ ಈಗಲೂ ತಿರುವನಂತಪುರದಲ್ಲಿ ಸುತ್ತಾಡುತ್ತಿದ್ದಾರೆಂದು ದುಬೈಯ ಉದ್ಯಮಿ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ. ಶಬರಿಮಲೆ ಕ್ಷೇತ್ರದ ಚಿನ್ನ ಮಾತ್ರವಲ್ಲ ಅಲ್ಲಿನ ನಾಲ್ಕು ಪಂಚಲೋಹ …