ಹೊಯ್ಗೆ ದಂಧೆಕೋರರ ಪತ್ತೆಗೆ ಮಫ್ತಿ ವೇಷದಲ್ಲಿ ಪೊಲೀಸ್ ಕಾರ್ಯಾಚರಣೆ: 2 ದೋಣಿ ವಶ;  ಗಾಳ ಹಾಕುತ್ತಿದ್ದ ಪೊಲೀಸರನ್ನು ಕಂಡು ತಂಡ ಪರಾರಿ

ಕುಂಬಳೆ: ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ಸಂಗ್ರಹಿಸಿ ಸಾಗಾಟ ನಡೆಸಲು ದಂಧೆಕೋರರು ನಡೆಸುವ ತಂತ್ರಗಾರಿಕೆಯನ್ನು ಕುಂಬಳೆ ಪೊಲೀಸರು ಉಪಾಯ ದಿಂದ ಪತ್ತೆಹಚ್ಚಿದ್ದಾರೆ. ಈ ಮೂಲಕ ಮೊಗ್ರಾಲ್ ಅಳಿವೆ ಬಾಗಿಲಿನಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ೨ ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹಗಾರರು ಓಡಿ ಪರಾರಿಯಾಗಿದ್ದಾರೆ. ಈ ಹಿಂದೆ ದೋಣಿ ಮೂಲಕ ಸಂಗ್ರಹಿಸಿದ ಹೊಯ್ಗೆಯನ್ನು  ದಡಕ್ಕೆ ತಲುಪಿಸಿ ಅಲ್ಲಿಂದ ಟಿಪ್ಪರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಪೊಲೀಸರು ಅದರ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಹೊಯ್ಗೆಯನ್ನು …

ನಿವೃತ್ತ ತಹಶೀಲ್ದಾರ್, ಗುರುಸ್ವಾಮಿ ಶಂಕರ ದೇವಾಂಗ ನಿಧನ

ಕಾಸರಗೋಡು: ಅಣಂಗೂರು ಶಾರದಾನಗರ ನಿವಾಸಿಯೂ ನಿವೃತ್ತ ತಹಶೀಲ್ದಾರ್ ಬಿ. ಶಂಕರ ದೇವಾಂಗ (86) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. 51 ವರ್ಷಗಳ ಕಾಲ ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ ಇವರು ಗುರುಸ್ವಾಮಿಯಾಗಿ ದ್ದರು. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಯಾಗಿದ್ದರು. ಕಾಸರಗೋಡು ಶ್ರೀ ಅಯ್ಯಪ್ಪ ಸೇವಾ ಸಂಘದ ಸದಸ್ಯ, ಕುಂಬಳೆ ನಾಯ್ಕಾಪು ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರೂ ಆಗಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಪ್ರಶಾಂತ್ (ವ್ಯಾಪಾರಿ), ಪವಿತ್ರನ್ (ವ್ಯಾಪಾರಿ), …

ಯುವಕನಿಗೆ ಬೆದರಿಕೆಯೊಡ್ಡಿ ಹಣ ಲಪಟಾಯಿಸಿದ ಪ್ರಕರಣ: ನಾಲ್ವರ ಸೆರೆ

ಕಾಸರಗೋಡು: ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರನ್ನು  ಬೆದರಿಸಿ 1,01,000 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಉಳಿಯತ್ತಡ್ಕ ನೇಶನಲ್ ನಗರದ ಸುಲೈಮಾನ್ ಆದಿಲ್ (18), ಮಂಜತ್ತಡ್ಕದ ಅಹಮ್ಮದ್ ಕಬೀರ್ (26), ಉಳಿಯತ್ತಡ್ಕದ ರೈಯೀಸ್ ಅಹಮ್ಮದ್ (19) ಮತ್ತು ಪಳ್ಳಂ ನಿವಾಸಿಯಾಗಿರುವ 17ರ  ಅಪ್ರಾಪ್ತ ಬಾಲಕ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಈ ತಿಂಗಳ 24ರಂದು ರಾತ್ರಿ 9.30ಕ್ಕೆ ನಗರದ ನೆಲ್ಲಿಕುಂಜೆಯಲ್ಲಿ ದೂರುಗಾರ ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಅವರ  ಪರ್ಸ್‌ನ್ನು …

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರ ಕಾರ್ಪೋರೇಶನ್  ಮೇಯರ್ ಆಗಿ ವಿ.ವಿ. ರಾಜೇಶ್

ತಿರುವನಂತಪುರ: ಕೇರಳ ಮಾತ್ರ ವಲ್ಲದೆ ಭಾರತದ ಗಮನ ಸೆಳೆಯಲ್ಪಟ್ಟ ತಿರುವನಂತಪುರ ಕಾರ್ಪೋರೇಶನ್ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ್ ಆಯ್ಕೆಗೊಂಡಿದ್ದಾರೆ.  ತಿರುವನಂತಪುರ ಕಾರ್ಪೋರೇ ಶನ್‌ನ ಕಣ್ಣಾಮೂಲ ವಾರ್ಡ್‌ನಿಂದ ಪಕ್ಷೇತರರಾಗಿ ಗೆದ್ದು ಬಂದ ಪಾಟೂರು ರಾಧಾಕೃಷ್ಣನ್ ಕೂಡಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಆ ಮೂಲಕ ತಿರುವನಂತಪುರ  ಕಾರ್ಪೋರೇಶನ್‌ನ ಒಟ್ಟು ೩ ಸದಸ್ಯರ ಬಲದಲ್ಲಿ ಬಿಜೆಪಿ  51 ಸದಸ್ಯರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ 50 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಗೆದ್ದಿದೆ.  ಕೇರಳದ ಕಾರ್ಪೋರೇಶನ್ ಒಂದರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ  …

ಬೆಳ್ಳೂರು: ಕೆ. ಗೀತಾ, ನರೇಂದ್ರ ಗೌಡ ಮರಳಿ ಬಿಜೆಪಿಗೆ ಸೇರ್ಪಡೆ

ಬೆಳ್ಳೂರು: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೆ. ಗೀತಾ ಮತ್ತು ನರೇಂದ್ರ ಗೌಡ ಅವರ ಮೇಲಿನ ಸಂಘಟನಾ ಕ್ರಮವನ್ನು  ಪಕ್ಷ ಹಿಂತೆಗೆದುಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಕೆ. ಗೀತಾ ಬೆಳ್ಳೂರು ಪಂಚಾಯತ್‌ನ 5ನೇ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಚುನಾವಣಾ ಸಮಯದಲ್ಲಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೀತಾರನ್ನು ಹಾಗೂ ನರೇಂದ್ರ ಗೌಡ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಬಳಿಕ ಪಕ್ಷದ …

ಕಳಾಯಿ ಹೊಳೆಯಿಂದ ಹೊಯ್ಗೆ ಕಳವು ಜೆಸಿಬಿ ವಶ; ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಳಾಯಿ ಹೊಳೆಯಿಂ ದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ಜೆಸಿಬಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದು, ಅಲ್ಲದೆ ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಹೊಳೆಯಿಂದ ಹೊಯ್ಗೆ ಸಂಗ್ರಹ ನಡೆಯುತ್ತಿರುವ  ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್, ಉಮೇಶ್ ಕೆ.ಆರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹೊಯ್ಗೆ ಸಂಗ್ರಹಕ್ಕೆ ಬಳಲುತ್ತಿದ್ದ ಜೆಸಿಬಿ ವಶಪಡಿಸಲಾಗಿದೆ. ಇದರಂತೆ ಹೊಯ್ಗೆ  ಸಾಗಾಟ ನಡೆಸುವ ಆರೋಪದಂತೆ ಕುಂಜತ್ತೂರು ಮಾಸ್ಕೋ ಹಾಲ್ ಬಳಿಯ …

ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ, ಬೆಳ್ಳಿ ಕಳವು

ಕಾಸರಗೋಡು: ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ- ಬೆಳ್ಳಿ ಆಭರಣಗಳು ಹಾಗೂ ದಾಖಲೆಗಳನ್ನು ಕಳವುಗೈಯ್ಯಲಾಗಿದೆ ಎಂದು ದೂರಲಾಗಿದೆ. ಕಾಞಂಗಾಡ್, ಪಡನ್ನಕ್ಕಾಡ್ ಕುರುಂದೂರುನ ಪಿ.ಕೆ. ಜೋಜಿಯವರ ಮನೆಯಿಂದ ಕಳವು ನಡೆಸಲಾಗಿದೆ. ಬುಧವಾರ ರಾತ್ರಿ 12 ಗಂಟೆ ಹಾಗೂ ಗುರುವಾರ ಮುಂಜಾನೆ 2.30ರ ಮಧ್ಯೆ ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿ ಕಳ್ಳರು ಕಪಾಟಿನಲ್ಲಿರಿಸಿದ್ದ ೨ ಪವನ್ ಚಿನ್ನಾಭರಣ ಹಾಗೂ ಬೆಳ್ಳಿಯ ಸೊಂಟಪಟ್ಟಿ ಇತರ ದಾಖಲೆಗಳನ್ನು ಕಳವುಗೈದಿರುವುದಾಗಿ ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಎಸ್‌ಐ …

ಜತೆಗೆ ವಾಸಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು: ಜತೆಗೆ ವಾಸಿಸುತ್ತಿದ್ದ ಯುವತಿ ಮೇಲೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. 39ರ ಹರೆಯದ, ವಿವಾಹ ವಿಚ್ಛೇದನಗೊಂಡ ಯುವತಿ ನೀಡಿದ ದೂರಿನಂತೆ ತೃಕರಿಪುರದ ಮುಹಮ್ಮದ್ ಅಲಿ ಎಂಬಾತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. 2019ರಿಂದ ಯುವತಿ ಹಾಗೂ ಮುಹಮ್ಮದ್ ಅಲಿ ಜತೆಗೆ ವಾಸಿಸುತ್ತಿದ್ದರು. ಈ ವೇಳೆ ಆರೋಪಿ ತನಗೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದೂ ಭಾರೀ ಮೊತ್ತವನ್ನೂ ಪಡೆದು ವಂಚಿಸಿದ್ದಾನೆಂದು ಯುವತಿ ಪೊಲೀಸರಿಗೆ ನೀಡಿದ ದೂರಿ ನಲ್ಲಿ ತಿಳಿಸಿದ್ದಾಳೆ. ಮುಹಮ್ಮದ್ ಅಲಿ ಯನ್ನು ಪತ್ತೆಹಚ್ಚಲು …

ಬದಿಯಡ್ಕ ಪಂ. ಅಧ್ಯಕ್ಷಸ್ಥಾನ: ಬಿಜೆಪಿಯಿಂದ ಡಿ. ಶಂಕರ ಸ್ಪರ್ಧೆಗೆ: ಯುಡಿಎಫ್‌ನಲ್ಲಿ ಚರ್ಚೆ ಮುಂದುವರಿಕೆ; ಮತದಾನ ವೇಳೆ ಸಿಪಿಎಂ ನಿಲುವು ನಿರ್ಣಾಯಕ

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮ ಪಂಚಾಯ ತ್‌ಗಳಲ್ಲಿ ಚುನಾಯಿತರಾದವರ ಪೈಕಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ನಾಳೆ ನಡೆಯಲಿರುವಂತೆಯೇ ಬಹುತೇಕ ಮಂದಿಯ ಗಮನ ಬದಿಯಡ್ಕ ಗ್ರಾಮ ಪಂಚಾಯತ್‌ನತ್ತ ಹರಿದಿದೆ. ಪ್ರಸ್ತುತ ಪಂಚಾಯತ್‌ನಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವ ಪಕ್ಷದಿಂದ ಆಯ್ಕೆಗೊ ಳ್ಳುವರು ಎಂದು ತಿಳಿಯಲು ಮತದಾರರು ಕಾತರದಿಂದ  ಕಾದು ನಿಂತಿದ್ದಾರೆ. ಒಟ್ಟು ೨೧ ವಾರ್ಡ್‌ಗಳಿರುವ ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಯುಡಿಎಫ್‌ಗೆ ತಲಾ 10 ಸೀಟುಗಳು, ಸಿಪಿಎಂಗೆ ಒಂದು ಸೀಟು ಲಭಿಸಿದೆ. ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೇರಬೇಕಾದರೆ …

ಕೆಎಸ್‌ಆರ್‌ಟಿಸಿ- ಬೈಕ್ ಢಿಕ್ಕಿ: ಹೊಡೆದು ಖಾಸಗಿ ಬಸ್ ಚಾಲಕ ಮೃತ್ಯು

ಹೊಸದುರ್ಗ: ಚಿತ್ತಾರಿಕಲ್ ಕುನ್ನುಂಗೈಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಕಾಞಂಗಾಡ್ ಚೆರುವತ್ತೂರು- ಚೀಮೇನಿ ರೂಟ್ ನಲ್ಲಿ ಸಾಗುವ ಖಾಸಗಿ ಬಸ್‌ನ ಚಾಲಕನಾಗಿರುವ ಕುನ್ನುಂಗೈ ಮುಳ್ಳಿಕ್ಕಾಡ್ ನಿವಾಸಿ ಪ್ರವೀಣ್ (28) ಮೃತಪಟ್ಟ ಯುವಕ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.