ಅಶ್ರಫ್ ಪಚ್ಲಂಪಾರೆ ಮನೆಗೆ ಆಕ್ರಮಣ : ಆರೋಪಿಗಳ ಬಂಧನಕ್ಕೆ ಕ್ರಿಯಾ ಸಮಿತಿ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಶ್ರಫ್ ಪಚ್ಲಂಪಾರೆಯವರ ಮನೆಗೆ ಆಕ್ರಮಣಗೈದು ನಾಲ್ಕು ತಿಂಗಳ ಗರ್ಭಿಣಿಯಾದ ಮಹಿಳೆಯನ್ನು, ಮಕ್ಕಳನ್ನು ಆಕ್ರಮಿಸಿ ದಾಂಧಲೆ ನಡೆಸಿದ ಅಕ್ರಮಿಗಳನ್ನು ರಕ್ಷಿಸಲಿರುವ ಪೊಲೀಸರ ಕ್ರಮವನ್ನು ಉಪೇಕ್ಷಿಸಬೇಕೆಂದು ಕ್ರಿಯಾ ಸಮಿತಿ ಆಗ್ರಹಿಸಿದೆ. ಎರಡುಮೂರು ಕಿಲೋಮೀಟರ್ ದೂರದಿಂದ ಬಂದ ಅಕ್ರಮಿಗಳು ಗೇಟ್‌ನ ಹೊರಗಿನಿಂದ ಮನೆಗೆ ಪಟಾಕಿಗಳನ್ನೆಸೆದು ಬಳಿಕ ಒಳಗೆ ನುಗ್ಗಿ ಆಕ್ರಮಿಸಿದ್ದು, ಗಾಯಗೊಂಡ ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಹಿಳೆಯರ ಮಾನಹಾನಿ ಹಾಗೂ ಮನೆಗೆ ನಷ್ಟ ಉಂಟುಮಾಡಿದ ಅಕ್ರಮಿಗಳ ವಿರುದ್ಧ ಕೌಂಟರ್ …

ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ಹೂವಿನ ಪೂಜೆ, ಸನ್ಮಾನ

ಉಪ್ಪಳ: ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ವಿಶೇಷ ಹೂವಿನ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಪಿ.ಕೃಷ್ಣ ಅಡ್ಕ ಅಧ್ಯಕ್ಷತೆ ವಹಿಸಿದರು.ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಿಕೆ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಧಾರ್ಮಿಕ ಭಾಷಣ ಮಾಡಿದರು. ತೀಯಾ ಸಮಾಜ ಬೆಂ ಗಳೂರು ಪ್ರಧಾನ ಕಾರ್ಯದರ್ಶಿ ಸದಾನಂದ.ಕೆ, ಮಮತಾ ಶಶಿಧರ ಶೆಟ್ಟಿ ಗ್ರಾಮಚಾವಡಿ ಶಿರಿಯ, ಮಹಿಳಾ ಸಂಘದ ಅಧ್ಯಕ್ಷೆ ಅಮಿತಾ ಆನಂದ …

ಮುಗು ಕ್ಷೇತ್ರದಲ್ಲಿ ಗರ್ಭಗುಡಿಗೆ ದಾರಂದ ಮುಹೂರ್ತ

ಮುಂಡಿತ್ತಡ್ಕ: ಶೇಣಿ- ಮುಗು ಉಭಯ ಗ್ರಾಮಗಳ ಪ್ರಸಿದ್ಧ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯದೇವ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿಯ ದಾರಂದ ಮುಹೂರ್ತ ಕಿರುಷಷ್ಠಿಯಾದ ನಿನ್ನೆ ಜರಗಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಗರ್ಭಗುಡಿ ನಿರ್ಮಾಣ ನಡೆಯುತ್ತಿದೆ. ಈ ವರ್ಷದ ಕಿರು ಷಷ್ಠಿ ಮಹೋತ್ಸವದಂಗವಾಗಿ ದೇವರಿಗೆ ನವಕಾಭಿಷೇಕ, ಪರಿವಾರ ದೈವಗಳಿಗೆ ಹಾಗೂ ನಾಗ ತಂಬಿಲ ಸೇವೆ, ಬಲಿವಾಡು ಕೂಟ ಜರಗಿತು.

ನಾಯ್ಕಾಪುನಲ್ಲಿ ಟೈಲರಿಂಗ್ ತರಬೇತಿ ಸಮಾರೋಪ

ಕುಂಬಳೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವನಿತ ಮಹಿಳಾ ಸಮಾಜ ನಾಯ್ಕಾಪು ಕುಂಬಳÉ ಇವರ ಜಂಟಿ ಆಶ್ರಯದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.  ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ತರಬೇತಿ ಪಡೆದ ಮಹಿಳೆಯರು  ಬ್ಯಾಂಕ್ ಸಾಲ ಸೌಲಭ್ಯ ಪಡೆದು ತಮ್ಮದೇ ವ್ಯಾಪಾರ ಮಾಡಿ ಬೇರೆ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ …