ಪೈವಳಿಕೆ, ಮೀಂಜ ಪಂಚಾಯತ್‌ನಲ್ಲಿ ಯುಡಿಎಫ್ ಅಧಿಕಾರಕ್ಕೆ: ಆಡಳಿತ ಸಮಿತಿ ಅಧಿಕಾರ ಸ್ವೀಕಾರ

ಪೈವಳಿಕೆ: ಪೈವಳಿಕೆ ಪಂಚಾಯತ್‌ನಲ್ಲಿ ಯುಡಿಎಫ್ ಅಧಿಕಾರಕ್ಕೇರಿದ್ದು, ಅಧ್ಯಕ್ಷರಾಗಿ 20ನೇ ವಾರ್ಡಿನ ಮುಸ್ಲಿಂಲೀಗ್ ಸದಸ್ಯೆ ಬದ್ರುನ್ನೀಸ ಸಲೀಮ್ ಹಾಗೂ ಉಪಾಧ್ಯಾಕ್ಷರಾಗಿ 9ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಭಟ್ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಒಟ್ಟು 21 ವಾರ್ಡ್ಗಳನ್ನು ಹೊಂದಿದೆ. ಯುಡಿಎಫ್-9, ಬಿಜೆಪಿ-5, ಎಡರಂಗ-6, ಸ್ವತಂತ್ರ-1 ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಾಕ್ಷರ ಚುನಾವಣೆಯಲ್ಲಿ ಬದ್ರುನ್ನೀಸ ಸಲೀಮ್‌ರಿಗೆ ಹಾಗೂ ರಾಘವೇಂದ್ರ ಭಟ್‌ರಿಗೆ ತಲಾ 9 ಮತಗಳು, ಬಿಜೆಪಿಯಿಂದ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಸುಮನ.ಜಿ ಭಟ್ ಹಾಗೂ ಉಪಾಧ್ಯಾಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ …

ಜಿಲ್ಲೆಯ 18 ಪಂಚಾಯತ್‌ಗಳಲ್ಲಿ ಯುಡಿಎಫ್, 14ರಲ್ಲಿ ಎಲ್‌ಡಿಎಫ್, 5ರಲ್ಲಿ ಬಿಜೆಪಿ

ಕಾಸರಗೋಡು: ಜಿಲ್ಲೆಯ ಒಟ್ಟು 38 ಗ್ರಾಮ ಪಂಚಾಯತ್‌ಗಳ ಪೈಕಿ 37ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶನಿವಾರ ನಡೆದಿದೆ. ಇದರಲ್ಲಿ 18 ಪಂಚಾಯತ್‌ಗಳಲ್ಲಿ ಯುಡಿಎಫ್, 14ರಲ್ಲಿ ಎಲ್‌ಡಿಎಫ್, ೫ರಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಯುಡಿಎಫ್‌ನಲ್ಲಿ 12 ಪಂಚಾಯತ್‌ಗಳಲ್ಲಿ ಅಧ್ಯಕ್ಷ ಸ್ಥಾನ ಮುಸ್ಲಿಂ ಲೀಗ್‌ಗೆ, 5 ಪಂ.ಗಳಲ್ಲಿ ಕಾಂಗ್ರೆಸ್‌ಗೆ ಲಭಿಸಿದೆ. ಇದೇ ವೇಳೆ ಯುಡಿಎಫ್‌ಗೆ ಬಹುಮತವುಳ್ಳ ದೇಲಂಪಾಡಿ ಪಂಚಾಯತ್‌ನಲ್ಲಿ ಸಿಪಿಎಂ ಬಂಡುಕೋರ ನೇತಾರ ಎ. ಮುಸ್ತಫ ಹಾಜಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಎಲ್‌ಡಿಎಫ್‌ಗೆ ಅಧಿಕಾರ ಲಭಿಸಿದ 14 ಪಂಚಾಯತ್‌ಗಳಲ್ಲೂ ಅಧ್ಯಕ್ಷ ಸ್ಥಾನ …

ಮೀಂಜದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಮೀಯಪದವು : ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ 141ನೇ ಸಂಸ್ಥಾಪನಾ ದಿನವನ್ನು ಆಚರಿಸ ಲಾಯಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೀಯಪದವಿನ ಪಕ್ಷದ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಕೇಕ್ ಕತ್ತರಿಸಿ ಚಾಲನೆ ನೀಡಿದರು. ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಕೆ, ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜಾ, ಪಂಚಾಯತ್ ಸದಸ್ಯೆ ಸೌಮ್ಯ ಕಳಿಯೂರು, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ …

ಡಾ. ಕೆ. ಗಣಪತಿ ಭಟ್‌ರಿಗೆ ಕ.ಸಾ.ಪ.ದಿಂದ ಗೌರವಾರ್ಪಣೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಪರಿಷತ್‌ನ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ದಂತವೈದ್ಯ ಡಾ. ಕುಳಮರ್ವ ಗಣಪತಿ ಭಟ್‌ರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಕೆ. ಗಣಪತಿ ಭಟ್- ದೇವಕಿ ಭಟ್ ದಂಪತಿಯನ್ನು ಗೌರವಿಸಿದರು. ಈ ವೇಳೆ ವೈ.ಕೆ. ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ‘ಬಿಚ್ಚಿಟ್ಟ ನನ್ನ ಬದುಕು’ ಕೃತಿಯ ಮೂಲಕ ಓರ್ವ ಉತ್ತಮ ಬರಹಗಾರ …