ಪುಲ್ಲೂರು ಪೆರಿಯ ಪಂಚಾಯತ್‌ನಲ್ಲಿ ಸಿಪಿಎಂ, ಕಾಂಗ್ರೆಸ್‌ನಿಂದ ಆಡಳಿತ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಂiiತ್‌ನ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ವೇಳೆ  ಎಲ್‌ಡಿಎಫ್ ಸದಸ್ಯನ  ಮತ ಅಸಿಂಧುಗೊಂಡಿದೆ. ಇದರಿಂದ ಕಲ್ಯೋಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಎಂ.ಕೆ.ಬಾಬುರಾಜ್ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿ ದ್ದಾರೆ. ಅಧ್ಯಕ್ಷ ಸ್ಥಾನ ನಿನ್ನೆ ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಸಿಪಿಎಂಗೆ ಲಭಿಸಿತ್ತು. 19 ಮಂದಿ ಸದಸ್ಯರುಳ್ಳ ಪಂಚಾಯತ್ ಆಡಳಿತ ಸಮಿತಿಯಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್‌ಗೆ ತಲಾ 9 ಮಂದಿ ಸದಸ್ಯರು, ಬಿಜೆಪಿಗೆ ಓರ್ವ ಸದಸ್ಯರಿದ್ದಾರೆ. ನಿನ್ನೆ ಬೆಳಿಗ್ಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ …

ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ ರಾಜ್‌ಮೋಹನ್ ಉಣ್ಣಿತ್ತಾನ್‌ರ ಹೇಳಿಕೆಯಿಂದ ಪ್ರಕಟ- ಎಂ.ಎಲ್. ಅಶ್ವಿನಿ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಚುನಾವಣೆಯ ಮೊದಲ ಅವಕಾಶದಲ್ಲಿ ೪ ಐಕ್ಯರಂಗದ ಜನಪ್ರತಿನಿಧಿಗಳು ದೂರವುಳಿದಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಮತೀಯ ಧೋರಣೆಯ ಮುಖವೆಂದು ಇದನ್ನು ಬಿಜೆಪಿಯ ತಲೆಗೆ ಕಟ್ಟಿಕೊಡಲು ಸಂಸದ ರಾಜ್‌ಮೋಹನ್ ಯತ್ನಿಸುತ್ತಿರುವು ದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಯಲ್ಲಿ ಲೀಗ್ ಕಾಂಗ್ರೆಸ್‌ನ್ನು ನುಂ ಗಿದ್ದು, ರಾಜ್‌ಮೋಹನ್ ಉಣ್ಣಿತ್ತಾನ್‌ರ ನಿಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದೊಡ್ಡ ಮಟ್ಟಿನ ಅಸ್ವಸ್ಥತೆ ಇದೆ. ಇದನ್ನು ಮರೆಮಾಚಲು ರಾಜ್ ಮೋಹನ್ ಉಣ್ಣಿತ್ತಾನ್ ಸ್ವಂತ ಪಕ್ಷದ ಜನಪ್ರತಿನಿಧಿಗಳು, ಬಿಜೆಪಿಯೊಂದಿಗೆ ಆಂತರಿಕ …

ಬದಿಯಡ್ಕ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

ಬದಿಯಡ್ಕ: ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ನಿನ್ನೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. 2ನೇ ವಾರ್ಡ್‌ನಿಂದ ಆಯ್ಕೆಯಾದ ಶಂಕರ ಡಿ. ಅಧ್ಯಕ್ಷರಾಗಿಯೂ, 13ನೇ ವಾರ್ಡ್‌ನಿಂದ ಆಯ್ಕೆಯಾದ ಅಶ್ವಿನಿ ಕೆ.ಎಂ. ಉಪಾಧ್ಯಕ್ಷೆಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇರಳ ಯಾತ್ರೆ ಉದ್ಘಾಟನೆ ನಗರದಲ್ಲಿ ಧ್ವಜಾರೋಹಣ

ಕಾಸರಗೋಡು: ಕೇರಳ ಮುಸ್ಲಿಂ ಜಮಾಯತ್ ಆಶ್ರಯದಲ್ಲಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್  ಮುನ್ನಡೆಸುವ ಕೇರಳ ಯಾತ್ರೆಯ ಉದ್ಘಾಟನೆ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಉಲಮಾ ನಗರದಲ್ಲಿ ಸಮಸ್ತ ದಿಂದ ಧ್ವಜಾರೋಹಣ ನಡೆಸಲಾಯಿತು.  ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ಹಾಜಿ ಕಳನಾಡು  ಧ್ವಜಾರೋಹಣಗೈದರು. ತಳಂಗರೆ ಮಾಲಿಕ್ ದೀನಾರ್ ನಲ್ಲಿ ನಡೆದ ಮಖಾಂ ಸಿಯಾರತ್ ಬಳಿಕ ಗಾರ್ಡ್ ಫ್ಲಾಗ್ ಮಾರ್ಚ್ ನಡೆಸಿ ಧ್ವಜವನ್ನು ನಗರಕ್ಕೆ ತಲುಪಿಸಲಾಗಿತ್ತು. ಹಲವು ಗಣ್ಯರು ಭಾಗವಹಿಸಿದರು. ಕೇರಳ ಯಾತ್ರೆಯ ಉದ್ಘಾಟನೆ ಜನವರಿ ೧ರಂದು ಸಂಜೆ ೪.೩೦ಕ್ಕೆ …

ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಧಾನದಲ್ಲಿ ಜೀರ್ಣೋದ್ಧಾರ ಸಮಿತಿ ಪದಗ್ರಹಣ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುಡಾಲುಮೇರ್ಕಳ ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಆ ಪ್ರಯುಕ್ತ ನೂತನ ಜೀರ್ಣೋದ್ಧಾರ ಸಮಿತಿಯ ಪದಾದಿಕಾರಿಗಳ, ಸದಸ್ಯರ ಪದಗ್ರಹಣ ಸಮಾರಂಭ, ವಿಜ್ಞಾಪನಾ ಪತ್ರದ ರೂಪುರೇಷೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.ಆಡಳಿತ ಮೊಕ್ತೇಸರ ಕೆ.ಎಂ. ನಾರಾಯಣ ಭಟ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎಂ.ಕೇಶವ ಭಟ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ರಘು ಕಲ್ಕಾರ್ ಮಾಣಿ ಮತ್ತು ಉಪಾಧ್ಯಕ್ಷ ದಾಸಪ್ಪ ಸಾಮಾನಿ ಕುಡಾಲುಗುತ್ತು ವಿವಿಧ ಕಾರ್ಯಯೋಜನೆ ಕುರಿತು …

ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ರೋಡಿಕ್ಸ್ ಉದ್ಘಾಟನೆ

ಕಣ್ಣೂರು: ವಿಸ್ಮಯ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಚಟುವಟಿಕೆ ಆರಂಭಗೊಂಡಿದ್ದು, ಸ್ಪೀಕರ್ ಎ.ಎನ್. ಶಂಸೀರ್ ಇದನ್ನು ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ೧೫ ಕೋಟಿ ರೂ.ಗಳಷ್ಟು ವೆಚ್ಚದ ಈ ರೈಡನ್ನು ಇಟಾಲಿಯನ್ ಕಂಪೆನಿಯಾದ ಮೊಸಾರ್ ನಿರ್ಮಿಸಿದೆ. ಇಟೆಲಿಯಿಂದ ತಲುಪಿದ  ತಜ್ಞರು ಇದನ್ನು ಜೋಡಿಸಿದ್ದಾರೆ. ಸಹಕಾರಿ ವಲಯದ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಿಸ್ಮಯ ದೇಶದ ಬೃಹತ್ ಪಾರ್ಕ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಮಕ್ಕಳು, ಹಿರಿಯರೆಂಬ ಭೇದ ಭಾವವಿಲ್ಲದೆ ಯಾವುದೇ ಪ್ರಾಯದವರಿಗೂ ಇದನ್ನು …