ನೀರ್ಚಾಲಿನಲ್ಲಿ ಸ್ಕೂಟರ್-ಕಾರು ಢಿಕ್ಕಿ : ಪೆಟ್ರೋಲ್ ಬಂಕ್ ನೌಕರ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಇಂದು ಬೆಳಿಗ್ಗೆ ಉಂಟಾದ ವಾಹನ ಅಪಘಾತದಲ್ಲಿ ಪೆಟ್ರೋಲ್ ಬಂಕ್ ನೌಕರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕ ನಿವಾಸಿ ಯೂ ಸೀತಾಂಗೋಳಿ ಪೆಟ್ರೋಲ್ ಬಂಕ್ ನೌಕರನಾದ ಮುಹಮ್ಮದ್ ಸೈನುದ್ದೀನ್ (29) ಮೃತಪಟ್ಟ ದುರ್ದೈವಿ. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಎಸ್‌ಬಿಐ ನೀರ್ಚಾಲು ಶಾಖೆಯ ಮುಂಭಾಗದ ರಸ್ತೆಯಲ್ಲಿ ಇಂದು ಬೆಳಿಗ್ಗೆ ೬.೧೫ರ ವೇಳೆ ಈ ಅಪಘಾತವುಂಟಾಗಿದೆ. ಮುಹಮ್ಮದ್ ಸೈನುದ್ದೀನ್ ಪೆಟ್ರೋಲ್ ಬಂಕ್‌ನ ಕೆಲಸಕ್ಕಾಗಿ …

ಹೊಸ ವರ್ಷಾಚರಣೆ : ಪೊಲೀಸರಿಂದ ಕಠಿಣ ನಿರ್ದೇಶ

ಕಾಸರಗೋಡು: ಹೊಸ ವರ್ಷಾಚರಣೆ ಅತಿರೇಖಕ್ಕೆ ಹೋಗದಿರುವಂತೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಆಚರಣೆಗಳು ಯಾವ ವಿಧದಲ್ಲಿರಬೇಕೆಂಬ ಬಗ್ಗೆ ಪೊಲೀಸರು ರಾಜ್ಯಮಟ್ಟದಲ್ಲಿಯೇ ರೂಪುರೇಷೆ ಹೊರಡಿಸಿದ್ದಾರೆ. ಆಚರಣೆಯ ಮರೆಯಲ್ಲಿ ಸಮಾಜದ್ರೋಹ ಚಟುವಟಿಕೆಗಳನ್ನು ನಡೆಸಬಾರದು. ಸಾಕಷ್ಟು ಬೆಳಕು ಸೌಕರ್ಯ ಇರುವ ಸ್ಥಳಗಳಲ್ಲಿ ಮಾತ್ರವೇ ಆಚರಣೆ ನಡೆಸಬೇಕು. ಬಾರ್ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ, ಇತರ ಸಂಬಂಧಿತ ಸಂಸ್ಥೆಗಳಲ್ಲಿ, ಡಿಜೆ ಪಾರ್ಟಿಗಳನ್ನು ನಡೆಸುವಾಗ ಭಾಗವಹಿಸುವವರ ಮಾಹಿತಿಗಳನ್ನು ಮುಂದಾಗಿಯೇ ತಿಳಿಸಬೇಕು, ಕಾರ್ಯಕ್ರಮದಲ್ಲಿ ಮದ್ಯಪಾನದ ವ್ಯವಸ್ಥೆ ಇದ್ದರೆ ಪ್ರತ್ಯೇಕ ಪರವಾನಗಿ ಪಡೆಯಬೇಕು, ಕಾರು, ಬೈಕ್ ರೇಸಿಂಗ್‌ಗೆ ಅವಕಾಶವಿಲ್ಲ, …

ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ಜ್ವರ ಬಾಧಿಸಿ ಮಂಗ ಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಕುಂಜತ್ತೂರು ಉದ್ಯಾವರ ನಿವಾಸಿ ಉಮ್ಮರ್ ಫಾರೂಕ್ (26) ಎಂಬವರು ಮೃತಪಟ್ಟ ವ್ಯಕ್ತಿ. ಇವರಿಗೆ  ಕಳೆದ ಶನಿವಾರದಿಂದ ಜ್ವರ ಬಾಧಿಸಿತ್ತೆನ್ನ ಲಾಗಿದೆ. ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಉಮ್ಮರ್ ಫಾರೂಕ್ ಹೊಸಂಗಡಿಯ ಮಟನ್‌ಸ್ಟಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೊಹಮ್ಮದ್-ಬೀಫಾತಿಮ ದಂಪತಿಯ ಪುತ್ರನಾದ ಮೃತರು ಸಹೋದರರಾದ ಹಾಶಿರ್, ಹಸನ್,ಸಹೋದರಿ ಹಸೀನ …

ಹೊಸವರ್ಷ: ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಕಾರ್ಯಾಚರಣೆ; ಎಂಡಿಎಂಎ ಸಹಿತ ಯುವತಿ ಸೇರಿ ಐವರ ಸೆರೆ

ಕಾಸರಗೋಡು: ಹೊಸ ವರ್ಷ ಜಿಲ್ಲೆಗೆ ಮಾದಕದ್ರವ್ಯ, ಅಕ್ರಮ ಮದ್ಯ ಇತ್ಯಾದಿಗಳು ಹರಿದು ಬರುತ್ತಿರು ವುದನ್ನು ತಡೆಗಟ್ಟಲು ಪೊಲೀಸರು ಜಿಲ್ಲೆಯಾದ್ಯಂತವಾಗಿ  ಸ್ಪೆಷಲ್ ಡ್ರೈವ್ ಎಂಬ ಹೆಸರಲ್ಲಿ  ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ಮಾದಕ ದ್ರವ್ಯವಾದ 5.18  ಗ್ರಾಂ ಎಂಡಿಎಂಎ ಸಹಿತ ಓರ್ವ  ಯುವತಿ ಸೇರಿದಂತೆ ಐದು ಮಂದಿಯನ್ನು ಆದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪಟ್ಲ ನಿವಾಸಿ ಅಬ್ದುಲ್ ರೌಫ್, ಶಿರಿಬಾಗಿಲು ನಿವಾಸಿ ಅಬೂಬಕರ್ ಸಿದ್ದೀಕ್, ಅಡ್ಕತ್ತಬೈಲು ನಿವಾಸಿ ಅಮೀರ್ ಮೊಹಮ್ಮದ್ ಮುಹತ್ತಾಸಿಂ  ಮತ್ತು ಅಣಂಗೂರು ನಿವಾಸಿ …

ಪೋಕ್ಸೋ ಪ್ರಕರಣ: ಮದ್ರಸಾ ಅಧ್ಯಾಪಕನಿಗೆ 14 ವರ್ಷ ಕಠಿಣ ಸಜೆ

ಕಾಸರಗೋಡು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಮದ್ರಸಾ ಅಧ್ಯಾಪಕನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ ೧೪ ವರ್ಷ ಕಠಿಣ ಸಜೆ ಮತ್ತು 4೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಕಿದೂರು ಬಜಪ್ಪೆಕಡವು ಹೌಸ್‌ನ ಎ. ಅಬ್ದುಲ್ ಹಮೀದ್ (46) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮೂರು ತಿಂಗಳು ಹೆಚ್ಚು ವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕುಂಬಳೆ ಪೊಲೀಸ್ ಠಾಣೆ  ವ್ಯಾಪ್ತಿಗೊಳಪಟ್ಟ ಪ್ರದೇಶದ …

ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರಿ ಚೇಟುಕುಂಡ್‌ನಲ್ಲಿ ಯುವಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಇಂದು ಮುಂಜಾನೆ ಕಣ್ಣೂರು ಭಾಗಕ್ಕೆ ತೆರಳಿದ ರೈಲಿನ ಲೋಕೊ ಪೈಲೆಟ್ ನೀಡಿದ ಮಾಹಿ ತಿಯ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಹುಡುಕಾಟ ನಡೆಸಿದರಾದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕತ್ತಲೆ ಹಾಗೂ ಮಂಜು ಮುಸುಕಿದ ಕಾರಣ ಹುಡುಕಾಟದಲ್ಲಿ ಆ ವೇಳೆಗೆ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಬಂದು ನಡೆಸಿದ ಹುಡುಕಾಟದಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಯಿತಾದರೂ ಗುರುತಿಸಲು ಸಾಧ್ಯವಾಗಲಿಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ …

16ರ ಬಾಲಕಿಯನ್ನು ಫ್ಲಾಟ್‌ಗೆ ತಲುಪಿಸಿ ಕಿರುಕುಳ ನೀಡಿದ ಪ್ರಕರಣ: ಬಂಧಿತ ನೆಕ್ರಾಜೆಯ ಇಬ್ಬರ ಸಹಿತ ನಾಲ್ಕು ಮಂದಿ  ಆರೋಪಿಗಳಿಗೆ ರಿಮಾಂಡ್

ಕಲ್ಲಿಕೋಟೆ: 16ರ ಹರೆಯದ ಬಾಲಕಿಯನ್ನು ಫ್ಲಾಟ್‌ಗೆ ತಲುಪಿಸಿ  ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ದಲ್ಲಿ  ಸೆರೆಗೀಡಾದ ಬದಿಯಡ್ಕ ಬಳಿಯ ನೆಕ್ರಾಜೆ ನಿವಾಸಿಗಳಾದ ಇಬ್ಬರ ಸಹಿತ ನಾಲ್ಕು  ಮಂದಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ನೆಕ್ರಾಜೆ ಚರ್ಲಡ್ಕ ಪಾಂಡಿ ಮೂಲೆ ನಿವಾಸಿ ಪಿ.ಎ. ಮುಹಮ್ಮದ್ ಸಮಿ (19), ನೆಕ್ರಾಜೆ ನಿವಾಸಿ ಆಲಂಕೋಲ್ ವೀಟಿಲ್ ಎನ್.ಎ. ಮುಹಮ್ಮದ್ ರಯೀಸ್(18), ಪುದುಪ್ಪಾಡಿ ಕೈದಪ್ಪೊಯಿಲ್ ಚೀನಿಪರಂಬಿಲ್ ಮುಹಮ್ಮದ್ ಸಾಲಿಹ್ (45), ಪುದುಪ್ಪಾಡಿ ವರುವಿನ್ ಕಾಲದ ವಿ.ಕೆ. ಶಬೀರ್‌ಅಲಿ (41) ಎಂಬಿವರು ರಿಮಾಂಡ್‌ನಲ್ಲಿರುವ ಆರೋಪಿಗಳಾಗಿದ್ದಾರೆ. ಈ ತಿಂಗಳ …

ಹೋಟೆಲ್ ನೌಕರ ನಿಧನ

ಉಪ್ಪಳ: ಪುತ್ತೂರು ಬೆಳ್ಳಾರೆ ನಿವಾಸಿ ಉಪ್ಪಳದಲ್ಲಿ ಹೋಟೆಲ್ ನೌಕರನಾಗಿದ್ದ ಜಯೇಂದ್ರ ಕಾಮತ್ (65) ನಿಧನ ಹೊಂದಿದರು. ಇವರು ಉಪ್ಪಳದ ತ್ರಿಭುವನ್ ಹೋಟೆಲ್‌ನಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ಸೋಮವಾರ ಮಧ್ಯಾಹ್ನ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಆದರೆ ರಾತ್ರಿ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ನಿನ್ನೆ ಸಂಜೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಸಿದರು. ಈ ವೇಳೆ ಮೃತರ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ಉಪಜಿಲ್ಲೆ ಹಾಗೂ ಶಾಲಾ ಮಟ್ಟದಲ್ಲಿ ಗಳಿಸಿದ ಅಂಕಗಳು

ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವಿವಿಧ ಸ್ಪರ್ಧೆಗಳು ಮುಂದುವರಿಯುತ್ತಿದ್ದು ಇಂದು ಸಮಾಪ್ತಿಯಾಗಲಿದೆ. ನಿನ್ನೆ ರಾತ್ರಿವರೆಗೆ ನಡೆದ ಸ್ಪರ್ಧೆಗಳಲ್ಲಿ ಕಾಸರಗೋಡು ಉಪಜಿಲ್ಲೆ ೭೫೮ ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. ಹೊಸದುರ್ಗ ಉಪಜಿಲ್ಲೆ ೭೨೭, ಚೆರುವತ್ತೂರು 682 ಅಂಕ ಪಡೆದು ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದೆ. ಕುಂಬಳೆ ಉಪಜಿಲ್ಲೆ, ಬೇಕಲ, ಚಿತ್ತಾರಿಕಲ್, ಮಂಜೇಶ್ವರ ಉಪಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ಶಾಲಾ ಮಟ್ಟದಲ್ಲಿ ಅರೆಬಿಕ್‌ನಲ್ಲಿ ಯುಪಿ ವಿಭಾಗ- ಅಲ್‌ಬುಕಾರಿಯ ಇ.ಎಂ. ಸ್ಕೂಲ್ ಕುನ್ನುಂಗೈ 30 ಅಂಕ ಪಡೆದಿದೆ. ಎಚ್‌ಎಸ್ ವಿಭಾಗದಲ್ಲಿ ಕಾಞಂಗಾಡ್ …

ಮಂಜೇಶ್ವರ ಪಂಚಾಯತ್ ಯುಡಿಎಫ್ ಆಡಳಿತ ಸಮಸ್ಯೆ ಪರಿಶೀಲಿಸಿ ಪರಿಹಾರಕ್ಕೆ ಆದ್ಯತೆ- ನೂತನ ಅಧ್ಯಕ್ಷ

ಮಂಜೇಶ್ವರ: ಪಂಚಾಯತ್‌ನಲ್ಲಿ ಯುಡಿಎಫ್ ಆಡಳಿತಕ್ಕೇರಿದೆ. ಅಧ್ಯಕ್ಷರಾಗಿ 12ನೇ ವಾರ್ಡ್ನ ಲೀಗ್ ಸದಸ್ಯ ಬಶೀರ್ ಕನಿಲ, ಉಪಾಧ್ಯಾಕ್ಷರಾಗಿ 8ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಫಾತಿಮ್ಮತ್ ಜೌರ ಆಯ್ಕೆಯಾಗಿದ್ದಾರೆ. ಪಂಚಾಯತ್ ಒಟ್ಟು 24 ವಾರ್ಡ್ ಹೊಂದಿದೆ. 14 ಯುಡಿಎಫ್, 6 ಬಿಜೆಪಿ, 1 ಪಿಡಿಪಿ, 2 ಎಸ್.ಡಿ.ಪಿ.ಐ, 1 ಸ್ವತಂತ್ರ ಸದಸ್ಯರನ್ನು ಹೊಂದಿದೆ. ಬಿಜೆಪಿಯಿಂದ ಅಧ್ಯಕ್ಷರ ಸ್ಥಾನಕ್ಕೆ ಪ್ರಕಾಶ್ ಹಾಗೂ ಉಪಾಧ್ಯಾಕ್ಷರ ಸ್ಥಾನಕ್ಕೆ ಬೇಬಿಲತಾ ಸ್ಪರ್ಧಿಸಿದ್ದು, ಪಿಡಿಪಿ, ಎಸ್.ಡಿ.ಪಿ.ಐ ಸದಸ್ಯರು ತಟಸ್ಥಗೊಂಡಿದ್ದರು. ಪಂಚಾಯತ್ ವ್ಯಾಪ್ತಿಯಲ್ಲಿ, ಶುಚೀಕರಣ, ಕುಡಿಯುವ ನೀರಿನ ಸಮಸ್ಯೆಗೆ …