ಬದಿಯಡ್ಕ ಪಂಚಾಯತ್‌ನಲ್ಲಿ ಖಾಲಿ ಹುದ್ದೆ: ಭರ್ತಿಗೊಳಿಸಲು ಅಧ್ಯಕ್ಷರಿಂದ ಮನವಿ

ಬದಿಯಡ್ಕ: ಪಂಚಾಯತ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಆಗ್ರಹಿಸಿದ್ದಾರೆ. ಜಿಲ್ಲಾ ಅಸಿಸ್ಟೆಂಟ್ ಡೈರೆಕ್ಟರ್, ತಿರುವನಂತಪುರ ಪ್ರಿನ್ಸಿಪಲ್ ಡೈರೆಕ್ಟರ್ ಎಂಬಿವರಿಗೆ ನೀಡಿದ ಮನವಿಯಲ್ಲಿ ಇವರು ಈ ಆಗ್ರಹ ಮುಂದಿಟ್ಟಿದ್ದಾರೆ. ಅಕೌಂಟೆಂಟ್, ಸೀನಿಯರ್ ಕ್ಲರ್ಕ್, ಯುಡಿ ಕ್ಲರ್ಕ್, ಅಸಿಸ್ಟೆಂಟ್ ಇಂಜಿನಿ ಯರ್, ಓವರ್‌ಸಿಯರ್ (2) ಎಂಬಿವು ಖಾಲಿ ಇದ್ದು, ಇದರಿಂದಾಗಿ ಪಂಚಾ ಯತ್‌ಗೆ ತಲುಪುವ ಜನರಿಗೆ ಸಮಸ್ಯೆ ಯಾಗುತ್ತಿದೆ ಎಂದು ಅಧ್ಯಕ್ಷ ತಿಳಿಸಿದ್ದಾರೆ. ಮನವಿ ನೀಡುವ ವೇಳೆ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯ …

ಮಾನ್ಯ ಶ್ರೀ ಅಯ್ಯಪ್ಪ ಮಂದಿರದಿಂದ ಕಳವು ಪ್ರಕರಣ : ತನಿಖಾಧಿಕಾರಿಗಳಿಗೆ ನಮೋ ಬ್ರಿಗೇಡ್ ತಂಡದಿಂದ ಅಭಿನಂದನೆ

ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಮೋ ಬ್ರಿಗೇಡ್ ಮಾನ್ಯ ವತಿಯಿಂದ ವಿಶೇಷ ಭಜನಾ ಸೇವೆ ಜರಗಿತು. ಈ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಂದಿರದಿಂದ ಬೆಳ್ಳಿಯ ಛಾಯಾಚಿತ್ರ ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳ ಕಳವು ಪ್ರಕರಣವನ್ನು ಬೇಧಿಸಿ ಬೆಳ್ಳಿಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಿದ ತನಿಖಾಕಾಧಿರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಅದಿsಕಾರಿ ಪ್ರಸಾದ್ ಬಿ.ಕೆ. ಹಾಗೂ ಮೊಹಮ್ಮದ್ ಆರಿಫ್‌ರನ್ನು ಮಂದಿರದ ಕುಂಞಪ್ಪ ಗುರುಸ್ವಾಮಿ, ರಾಮ ಗುರುಸ್ವಾಮಿ ಗೌರವಿಸಿದರು.ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ …

ಬಜಕೂಡ್ಲು ಕ್ಲಬ್ ವತಿಯಿಂದ ಜನಪ್ರತಿನಿಧಿಗಳಿಗೆ ಗೌರವ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಜೇಶ್ವರ ಬ್ಲೋಕ್, ಎಣ್ಮಕಜೆ ಪಂಚಾಯತ್‌ಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ನಡೆಯಿತು. ಕ್ಲಬ್‌ನ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದರು. ಸಮಾಜಸೇವಕ ಸದಾಶಿವ ಭಟ್ ಹರಿನಿಲಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲೋಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ವಿದ್ಯಾ ಕುಮಾರಿ, ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಕೃಷ್ಣಪ್ಪ ಬಜಕೂಡ್ಲುರನ್ನು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಗೌರವಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಹಿರಿಯ ಸದಸ್ಯ ಮಹಾಬಲ ರೈ, ಚಂದ್ರಶೇಖರ …