ಮಂಜೇಶ್ವರ ಬ್ಲೋಕ್ ಪಂಚಾಯತ್‌ಗೆ ಸೈಫುಲ್ಲ ತಂಙಳ್ ಅಧ್ಯಕ್ಷ, ಕಮಲಾಕ್ಷಿ ಕೆ. ಉಪಾಧ್ಯಕ್ಷೆ

ಮಂಜೇಶ್ವರ: ಮಂಜೇ ಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸೈಫುಲ್ಲ ತಂಙಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ ಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು ೧೬ ವಾರ್ಡ್ ಇದ್ದು, ೧೧ರಲ್ಲಿ ಯುಡಿಎಫ್, ೩ರಲ್ಲಿ ಬಿಜೆಪಿ, ೨ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

ಮನೆ ನಿರ್ಮಾಣಕ್ಕೆ ಅಧಿಕಾರಿಗಳ ಅಡಚಣೆ: ಬದಿಯಡ್ಕ ಪಂ.ಅಧ್ಯಕ್ಷರಿಗೆ ದೂರು

ಬದಿಯಡ್ಕ: ಪಂಚಾಯತ್‌ನಿಂದ ಮಂಜೂರುಗೊಂಡ ಮನೆ ನಿರ್ಮಾಣ ಕಾಮಗಾರಿಗೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಿವಿಧ ಕಾರಣಗಳನ್ನು ತಿಳಿಸಿ  ತಡೆಯೊಡ್ಡಿ ಫಲಾನುಭವಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದು, ಅಧಿಕಾರಿಗಳ ಇಂತಹ ಕ್ರಮಕ್ಕೆ ಕಡಿವಾಣ  ಹಾಕಬೇಕೆಂದು ನೀರ್ಚಾಲು ಸಿಂಧೂರ ಯುವಕ ವೃಂದ ಒತ್ತಾಯಿಸಿದೆ. ಈ ಬೇಡಿಕೆಯನ್ನು ಮುಂದಿರಿಸಿ ಸಿಂಧೂರ ಯುವಕ ವೃಂದದ ಪದಾಧಿಕಾರಿಗಳು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ.ಶಂಕರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನೆ ನಿರ್ಮಾಣ ಕಾಮಗಾರಿ  ವೇಳೆ  ಅಧಿಕಾರಿಗಳು ಅಲ್ಲಿಗೆ ತಲುಪಿ ವಿವಿಧ ಕಾರಣಗಳನ್ನು ತಿಳಿಸಿ ದಂಡ ವಿಧಿಸುತ್ತಿದ್ದು, ಇದರಿಂದ …

ಎಕೆಪಿಎ ಈಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್ ಈಸ್ಟ್ ಘಟಕದ ಆಶ್ರಯದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ, ಆಟೋ ಚಾಲಕರೊಂದಿಗೆ ಹೊಸ ವರ್ಷವನ್ನು ಆಚರಿಸಲಾಯಿತು.  ಕಾಸರಗೋಡು ನಗರಠಾಣೆಯ ಮಹಿಳಾ ಎಸ್‌ಐ ಅಜಿತ ಕೇಕ್ ಕತ್ತರಿಸಿ ಆಚರಣೆಗೆ ಚಾಲನೆ ನೀಡಿದರು. ಘಟಕ ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್, ಜಿಲ್ಲಾ ಸಮಿತಿ ಸದಸ್ಯ ದಿನೇಶ್, ವಲಯ ಅಧ್ಯಕ್ಷ ವಾಮನ್ ಕುಮಾರ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಮಣಿ, ಸುರೇಶ್ ಬಿ.ಜೆ, ಪಿಆರ್‌ಒ …