ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಬೆಂಕಿ ತಗಲಿ ಗಾಯಗೊಂಡ ಅಡುಗೆ ಕಾರ್ಮಿಕೆ ಮೃತ್ಯು
ಉಪ್ಪಳ: ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಸ್ಟವ್‌ನಿಂದ ದೇಹಕ್ಕೆ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯಗೊಂಡ ಅಡುಗೆ ಕಾರ್ಮಿಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಬಂಗ್ರಮಂಜೇಶ್ವರ ಸರಕಾರಿ ಶಾಲೆಯ ಅಡುಗೆ ಕಾರ್ಮಿಕೆಯಾದ ಉದ್ಯಾವರ ಮಾಡ ನಿವಾಸಿ ಜಯ (56) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆ ವೇಳೆ ದುರ್ಘಟನೆ ಸಂಭವಿಸಿತ್ತು. ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸು ತ್ತಿದ್ದಾಗ ಗ್ಯಾಸ್ ಸ್ಟವ್‌ನಿಂದ ಸೀರೆಗೆ …
Read more “ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಬೆಂಕಿ ತಗಲಿ ಗಾಯಗೊಂಡ ಅಡುಗೆ ಕಾರ್ಮಿಕೆ ಮೃತ್ಯು”