ಕಾಮ ಹುಚ್ಚ ಯಾರಪ್ಪ? ಬೀಜದ ಹೋರಿಗಳೇನಪ್ಪ?

ಕಾಸರಗೋಡು: ಕಿರುಕುಳಕ್ಕೊಳ ಗಾಗುವವರೊಂದಿಗೆ ಸರಕಾರ ಹಾಗೂ ಕಾಮ್ರೇಡ್‌ಗಳು ಇದ್ದಾರೆಂದು ಪದೇ ಪದೇ ತಿಳಿಸುತ್ತಿರುವಾಗ ವಿವಾಹಿ ತೆಯೂ ಪ್ರಬುದ್ಧರಾದ ಮಕ್ಕಳಿರುವ  50ರ ಹರೆಯದ ಗೃಹಿಣಿಯನ್ನು ಓರ್ವ ಕಾಮ್ರೇಡ್ 30 ವರ್ಷಗಳಿಂದ  ಹಿಂಬಾಲಿಸಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಿರುವುದಾಗಿ ಕಾಸರಗೋಡಿನ ಗೃಹಿಣಿ ರಾಜ್ಯ ಪೊಲೀಸ್ ಡೈರೆಕ್ಟರ್ ಜನರಲ್‌ಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಎದುರು ಕಕ್ಷಿಯ  ಲೈಂಗಿಕ ಚೇಷ್ಠೆಗಳು ಒಳಗೊಂಡ ವೀಡಿಯೋ ಹಾಗೂ ಶಬ್ದ ಸಂದೇಶ ಒಳಗೊಂಡ  ಪೆನ್‌ಡ್ರೈವ್ ನೀಡಿರುವುದಾಗಿ  ತಿಳಿಸಲಾಗಿದೆ. 2025 ಡಿಸೆಂಬರ್ 31ರಂದು ತಿರುವನಂತಪುರ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಅಧಿಕಾರಿಗಳು …

ಎಡನೀರು ಮಕ್ಕಾಕೋಡನ್ ತರವಾಡಿನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಒಡವೆ ಕಳವು: ಬೆರಳಚ್ಚು ಲಭ್ಯ; ಜೈಲಿನಿಂದ ಹೊರಬಂದ ಕಳ್ಳರ ಕೇಂದ್ರೀಕರಿಸಿ ತನಿಖೆ

ಎಡನೀರು: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೈವದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳು ಹಾಗೂ ಹಣವನ್ನು ದೋಚಿದ್ದಾರೆ. ಇದು ಮಾತ್ರವಲ್ಲದೆ ಮೂರು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕದ್ದು ಸಾಗಿಸಿದ್ದಾರೆ. ಜನವರಿ 6ರಂದು ಬೆಳಿಗ್ಗೆ 7 ಗಂಟೆ ಮತ್ತು ನಿನ್ನೆ ಬೆಳಿಗ್ಗೆ 7 ಗಂಟೆಯೊಳಗಿನ ಸಮಯದಲ್ಲಿ ಈ ಕಳವು ನಡೆದಿದೆ. 1,70,000 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ …

ಮುಳ್ಳೇರಿಯ ರಸ್ತೆಯಲ್ಲಿ ಚಿರತೆಬೆಕ್ಕು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ರಸ್ತೆಯಲ್ಲಿ ಚಿರತೆ ಬೆಕ್ಕೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಾಹನ ಢಿಕ್ಕಿಹೊಡೆದು ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆಗೆ ಮುಳ್ಳೇರಿಯದಿಂದ ಆದೂರಿನತ್ತ ತೆರಳುವ ರಸ್ತೆಯಲ್ಲಿ ಚಿರತೆಬೆಕ್ಕಿನ (ಪುಲಿಪೂಚ) ಮರಿಯ ಮೃತದೇಹ ಪತ್ತೆಯಾಗಿದೆ. ತಾಯಿಯ ಜೊತೆ ರಸ್ತೆ ದಾಟುವಾಗ ಯಾವುದೋ ವಾಹನ ಢಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗುತ್ತಿದೆ. ಮಾಹಿತಿ ತಿಳಿದು ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್, ಆರ್‌ಆರ್‌ಪಿಯ ಸತ್ಯನ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿಗೆ ಸ್ಥಳಾಂತರಿಸಿದ್ದಾರೆ. ಇಂದು ಬೆಳಿಗ್ಗೆ ಮುಳ್ಳೇರಿಯ ವೆಟರ್ನರಿ …

ಯುವತಿ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೂಡ್ಲುನಲ್ಲಿ ಯುವತಿಯನ್ನು ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವೀವರ್ಸ್ ಕಾಲನಿಯ ಅನಿಲ್ ಹೌಸ್ ನಿವಾಸಿ ಸತೀಶ್‌ರ ಪತ್ನಿ ರವೀಣ (30) ಮೃತಪಟ್ಟ ಯುವತಿ. ನಿನ್ನೆ ಸಂಜೆ ರವೀಣ ಸ್ನಾನದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾ ಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಜನರಲ್ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಕಾಸರಗೋಡು ನಗರ ಠಾಣೆ ಪೊಲೀಸರು …

ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಪೊಲೀಸರು ನೋಟೀಸು ನೀಡಿ ಬಿಡುಗಡೆಗೊಳಿಸಿದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ  ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಉಪ್ಪಳ  ಮಣ್ಣಂಗುಳಿ ಪುದುಕುಡಿ ನಿವಾಸಿ ಹಮೀದ್ ಅಲಿ (65) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಇವರು ಫ್ಲಾಟ್‌ನಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮ ವಾರ ರಾತ್ರಿ ತಲಪ್ಪಾಡಿಯಲ್ಲಿ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗೆ  ಕಲ್ಲೆಸೆದು ಹಿಂಬದಿ ಗಾಜು ನಾಶಗೊಳಿಸಿದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ಹಮೀದ್ ಅಲಿಯನ್ನು ಬಂಧಿಸಿದ್ದರು. ಬಳಿಕ ನೋಟೀಸು ನೀಡಿ ಇವರನ್ನು ಬಿಡುಗಡೆಗೊಳಿಸಲಾಗಿತ್ತು.  ಮಂಗಳ …

ಕಾಸರಗೋಡಿನಲ್ಲಿ ಕನ್ನಡಿಗರಿಗೆ ಸಮಸ್ಯೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ

ಕಾಸರಗೋಡು: ಗಡಿನಾಡು ಕನ್ನಡಿಗರ ಸಮಸ್ಯೆಗಳು ಹಾಗೂ ಕೇರಳ ಸರಕಾರದ ಮಲೆಯಾಳ ಭಾಷಾಬಿಲ್ -2025 ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಸರಗೋಡಿಗೆ ತಲುಪಿದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕೇರಳ ಸರಕಾರದ ಪ್ರಸ್ತಾಪಿತ ಬಿಲ್ ಸಂಪೂರ್ಣ ಅಸಂವಿಧಾನಿಕವಾ ಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಾಸಕ್ತಿಗೆ ಮಾರಕವಾಗಿದೆ. ಭಾರತ ಸರಕಾರದ ಅಲ್ಪ ಸಂಖ್ಯಾತ ಸಚಿವಾಲಯ ಕೇರಳ ಸರಕಾರಕ್ಕೆ ಹಲವಾರು ಬಾರಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಿಸಬೇಕೆಂದು ಸೂಚನೆ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. …

ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಛಯಕ್ಕೆ ಬಾಂಬ್ ಬೆದರಿಕೆ: ಬಾಂಬ್ ಸ್ಕ್ವಾಡ್ ತನಿಖೆ

ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು  ನ್ಯಾಯಾಲಯ ಸಮುಚ್ಛಯಕ್ಕೆ ಬಾಂಬ್ ಬೆದರಿಕೆ ಉಂಟಾಗಿದ್ದು, ಆ ಬಗ್ಗೆ ಮಾಹಿತಿ ಲಭಿಸಿದ   ವಿದ್ಯಾನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳವನ್ನು ಬಳಸಲಾಗುತ್ತಿದೆ. ನ್ಯಾಯಾಲಯಕ್ಕೆ ಇಂದು ಬೆಳಿಗ್ಗೆ ಇಮೇಲ್ ಸಂದೇಶದ ಮೂಲಕ ಯಾರೋ ಬಾಂಬ್ ಬೆದರಿಕೆ ಒಡ್ಡಿದ್ದಾರೆ. ನ್ಯಾಯಾಲಯದೊಳಗೆ ರಿಮೋಟ್ ಕಂಟ್ರೋಲ್ ಚಾಲಿತ ಐಇಡಿ ಬಾಂಬ್ ಇರಿಸಲಾಗಿದೆ ಎಂದೂ, ಇಂದು ಮಧ್ಯಾಹ್ನ 1ರಿಂದ 2 ಗಂಟೆಯೊಳಗಾಗಿ ಅದು ಸ್ಫೋಟಿಸಲಿದೆ ಎಂದು ಇಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ. …

ಕಾಂಗ್ರೆಸ್ ನೇತಾರ ನಿಧನ

ನೀರ್ಚಾಲು: ಹಿರಿಯ ಕಾಂಗ್ರೆಸ್ ನೇತಾರ ಕಿಳಿಂಗಾರು ಬೇರಿಕೆಯ  ನಾರಾಯಣ ರೈ (75) ನಿಧನ ಹೊಂದಿದರು. ಮೃತರು ಪತ್ನಿ ಭಾಗೀರಥಿ, ಮಕ್ಕಳಾದ ಮಂಜುನಾಥ (ಲಾಟರಿ ಏಜೆಂಟ್), ನವೀನ ಕುಮಾರಿ, ಪುಷ್ಪಲತಾ, ಅಳಿಯಂದಿರಾದ ಶೇಖರ, ರಾಧಾಕೃಷ್ಣ, ಸೊಸೆ ಸುಜಾತ, ಸಹೋದರ ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶೀನ ರೈ, ಸಹೋದರಿ ಲಲಿತಾ ಈ ಹಿಂದೆ ನಿಧನ ಹೊಂದಿದ್ದಾರೆ.

ಬದಿಯಡ್ಕ: ಕುಟುಂಬಶ್ರೀ ವತಿಯಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ

ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಜನಪ್ರತಿನಿಧಿಗಳನ್ನು ಅಭಿನಂದಿಸಲಾ ಯಿತು. ಸಿಡಿಎಸ್ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸ್ನೇಹವೀಡ್ ಯೋಜನೆ ಯನ್ನು ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡಿ ದರು.  ಕುಟುಂಬಶ್ರೀ ಜಿಲ್ಲಾಧಿಕಾರಿ ಯಧುರಾಜ್ ಸ್ನೇಹವೀಡ್ ಯೋಜನೆಯ ಮಾಹಿತಿ ನೀಡಿದರು. ಕುಟುಂಬಶ್ರೀ ನೇತೃತ್ವದಲ್ಲಿ ನಡೆಯುವ ಈ ಯೋಜನೆಗೆ ಉಪಾಧ್ಯಕ್ಷೆ ಧನಸಹಾಯ ಹಸ್ತಾಂತರಿಸಿದರು. ಸಿಡಿಎಸ್ ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ಸ್ವಾಗತಿಸಿ, ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ವಂದಿಸಿದರು.

ಸ್ವದೇಶಿ ವಿಜ್ಞಾನ ಪುರಸ್ಕಾರ ರಾಜ್ಯಪಾಲರಿಂದ ಪ್ರದಾನ

ಕಾಸರಗೋಡು: ವಿಜ್ಞಾನ ತಾಂತ್ರಿಕ ಅಧ್ಯಯನ ವಲಯದಲ್ಲಿ ಉತ್ತಮ ಕೊಡುಗೆಗಳನ್ನು ನೀಡುವ ಕೇರಳೀಯ ವಿಜ್ಞಾನಿಗಳಿಗಿರುವ ಸ್ವದೇಶಿ ಶಾಸ್ತ್ರ ಪುರಸ್ಕಾರವನ್ನು ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನೋ ಲಜಿಯ ಮಾಜಿ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ, ಇಂಡ್ಯನ್ ನ್ಯಾಶನಲ್ ಸೆಂಟರ್ ಫಾರ್ ಓಷ್ಯನ್ ಇನ್‌ಫರ್ಮೇಶನ್ ಸರ್ವೀಸ್ ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಎಂಬಿವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಖರ್ ಪ್ರದಾನ ಮಾಡಿದರು. ಕಂಡೆನ್ಸ್‌ಡ್ ಫಿಸಿಕ್ಸ್, ಭೌತಿಕ- ಜೈವಿಕ ವಿಜ್ಞಾನ ಶಾಖೆಯ ಸಮನ್ವಯಕ್ಕೆ ಆದ್ಯತೆ ನೀಡಿದ ಅಧ್ಯಯನ ಚಟುವಟಿಕೆಗಳು, ಸ್ವದೇಶಿಯತೆಯನ್ನು …