ಬೇಲಿ ನಿರ್ಮಿಸಲು ಸ್ಥಾಪಿಸಿದ್ದ ಕಬ್ಬಿಣದ ಕಂಬಗಳು ಕುಸಿತ: ತಪ್ಪಿದ ಅಪಾಯ

ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಶಾಲಾ ಮೈದಾನದಲ್ಲಿ  ಶಾಲಾ ಗ್ರೌಂಡ್ ಇಂಪ್ರೂವ್‌ಮೆಂಟ್ ಯೋಜನೆ ಪ್ರಕಾರ  ಜಿಲ್ಲಾ ಪಂಚಾಯತ್ ಕಳೆದ ವರ್ಷ ಶಾಲಾ ಆವರಣಗೋಡೆಗೆ ಸೇರಿಕೊಂಡು  ವಾಲ್ ಸೇಫ್ಟಿ ನೆಟ್ ಹಾಕಲು ಸ್ಥಾಪಿಸಿದ ಕಬ್ಬಿಣದಬೇಲಿ  ಗಾಳಿಗೆ ಕುಸಿದಿದೆ. ಶಾಲೆಗೆ ರಜೆಯಾದ ಕಾರಣ ದೊಡ್ಡ ಮಟ್ಟಿನ ದುರಂತ ತಪ್ಪಿದೆ. 200 ಮೀಟರ್ ಉದ್ದದಲ್ಲೂ, 100 ಮೀಟರ್ ಎತ್ತರದಲ್ಲೂ  ಕಬ್ಬಿಣದ ಬೇಲಿ ಸ್ಥಾಪಿಸಲಾಗಿತ್ತು.  ಫುಟ್ಭಾಲ್ ಆಟದ ಮಧ್ಯೆ ಚೆಂಡು ಮೈದಾನದಿಂದ ಹೊರಗೆ ಹೋಗದಿರಲು ಬಲೆ ಸ್ಥಾಪಿಸಲು ಕಬ್ಬಿಣದ ಕಂಬಗಳನ್ನು ಸ್ಥಾಪಿಸಿ ಬೇಲಿ …

ವರ್ಕಾಡಿ ಸುಳ್ಯಮೆ ಶೆಡ್‌ನಿಂದ 116 ಕಿಲೋ ಗಾಂಜಾ ವಶಪಡಿಸಿದ ಪ್ರಕರಣ: ಮತ್ತೋರ್ವ ಸೆರೆ

ಮಂಜೇಶ್ವರ: ವರ್ಕಾಡಿ ಪಂಚಾ ಯತ್ ವ್ಯಾಪ್ತಿಯ ಕೊಡ್ಲಮೊಗರು ಸುಳ್ಯಮೆ ಎಂಬಲ್ಲಿ ಶೆಡ್ಡ್ವೊಂದರಿAದ 116 ಕಿಲೋ 200 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿ ಮತ್ತೋರ್ವನನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಹೊಸಬೆಟ್ಟು ಕಡಪುö್ಪರದ ಅಬೂಬಕ್ಕರ್ ಸಿದ್ದಿಕ್ ಯಾನೆ ಕಡಪುö್ಪರ ಹಾರೀಸ್ (36) ಬಂಧಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ವಾರಗಳ ರಿಮಾಂಡ್ ವಿಧಿಸಲÁಗಿದೆ. ಕಾಸರಗೋಡು ಎ.ಎಸ್.ಪಿ ನಂದಗೋಪನ್‌ರ ಸೂಚನೆಯಂತೆ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಅಜಿತ್ ಕುಮಾರ್.ಪಿ ಮತ್ತು ತಂಡ ಆರೋಪಿಯನ್ನು ಬಂದಿsಸಿದೆ. …

ಬದಿಯಡ್ಕ: ದಲಿತ್ ಕಾಂಗ್ರೆಸ್‌ನಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ

ಬದಿಯಡ್ಕ: ತ್ರಿಸ್ತರ  ಪಂಚಾಯತ್ ಚುನಾವಣೆಯಲ್ಲಿ ಬದಿಯಡ್ಕ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಜಯಗಳಿಸಿದ ಜನಪ್ರತಿನಿಧಿಗಳಿಗೆ ಭಾರತೀಯ ದಲಿತ್ ಕಾಂಗ್ರೆಸ್ ನೇತೃತ್ವ ದಲ್ಲಿ  ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ್ ಕಾಂಗ್ರೆಸ್ ಮಂಡಲ ಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಮುಖ್ಯ ಅತಿಥಿಯಾಗಿದ್ದರು. ದಲಿತ್ ಕಾಂಗ್ರೆಸ್ ಮಂಡಲ ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ರಾಮ ಪಟ್ಟಾಜೆ, ಮಂಡಲ …

ಬಾಡೂರಿನಲ್ಲಿ ಅಕ್ಷಯ ಸೆಂಟರ್, ಹೋಟೆಲ್, 3 ಅಂಗಡಿಗಳಿಂದ ಕಳವು: ತನಿಖೆ ಆರಂಭ

ಪುತ್ತಿಗೆ: ಪುತ್ತಿಗೆ ಬಾಡೂರಿನಲ್ಲಿ ವ್ಯಾಪಕ ಕಳವು ನಡೆದ ಬಗ್ಗೆ ದೂರಲಾ ಗಿದೆ. ಇಲ್ಲಿನ ಅಕ್ಷಯ ಸೆಂಟರ್, ಹೋಟೆಲ್ ಹಾಗೂ ಮೂರು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು 1 ಲಕ್ಷ ರೂಪಾಯಿಯಷ್ಟು ಮೊತ್ತ ವನ್ನು ದೋಚಿದ್ದಾರೆ. ನಿನ್ನೆ ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಬಾಲಕೃಷ್ಣ ಶೆಟ್ಟಿ ಎಂಬವರ ‘ಅಮ್ಮ’ ಹೋಟೆಲ್, ಸುರೇಶ್ ಬಾಡೂರು ಅವರ ಶಿವದುರ್ಗ ಸ್ಟೋರ್, ರಾಜೇಶ್ ಶೆಟ್ಟಿಯವರ ದುರ್ಗಾಲಕ್ಷ್ಮಿ ಸ್ಟೋರ್, ಇಬ್ರಾಹಿಂರ ಅಕ್ಷಯ ಸೆಂಟರ್, ಕೊರಗಪ್ಪರ ಬಿ.ಕೆ. …

ಕಾಸರಗೋಡಿನ ಕನ್ನಡ ಭಾಷಿಗರ ಹಕ್ಕು ಸಂರಕ್ಷಿಸಲು ಸರಕಾರ ಬದ್ದ- ಮುಖ್ಯಮಂತ್ರಿ

ತಿರುವನಂತಪುರ: ಕಾಸರಗೋಡಿನ ಕನ್ನಡಿಗರು ಸೇರಿದಂತೆ  ರಾಜ್ಯದಲ್ಲಿರುವ ಭಾಷಾ ಅಲ್ಪ ಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಭಾಷಾ ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕೇರಳದ ಕನ್ನಡ ಮತ್ತು ತಮಿಳು ಭಾಷಿಗರ ಹಕ್ಕುಗಳನ್ನು ಸಂರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ  ಕೇರಳ ಸರಕಾರದ ಮಲಯಾಳಂ ಭಾಷಾ- ವಿಧೇಯಕ 2025 ವನ್ನು ವಿರೋಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳ ಸರಕಾರಕ್ಕೆ ಬರೆದ ಪತ್ರಕ್ಕೆ, ಮುಖ್ಯಮಂತ್ರಿ ಪಿಣರಾಯಿ …

ಆಟೋರಿಕ್ಷಾದಿಂದ ಚಿನ್ನಾಭರಣ ಕಳವುಗೈದ ಇಬ್ಬರ ಸೆರೆ

ಕಾಸರಗೋಡು: ಮಾವುಂಗಾಲ್‌ನಲ್ಲಿ  ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಿಂದ 7 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಾರ್ ಒಕ್ಲಾವ್ ನಿವಾಸಿ ಸುಬೈರ್ (23), ಕಾಞಂಗಾಡ್ ವಡಗರಮುಖ್‌ನ ಆಶಿಕ್ (28) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಕಲ್ಲಂಜಿರ ನಿವಾಸಿ ಅಶ್ರಫ್‌ರ ಆಟೋ ರಿಕ್ಷಾದಿಂದ ಚಿನ್ನಾಭರಣವನ್ನು ಆರೋಪಿಗಳು ಕಳವುಗೈದಿದ್ದರೆನ್ನಲಾಗಿದೆ.