ಭಾಷಾ ಮಸೂದೆ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹೇಳಿಕೆ ವಾಸ್ತವ ವಿರುದ್ಧ-ಕೆ.ಆರ್. ಜಯಾನಂದ

ಮಂಜೇಶ್ವರ: ಕೇರಳ ಸರಕಾರ ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಯ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದು,  ಇದು ಕೇರಳ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆಯೆಂದು ಸಿಪಿಎಂ ಮಂಜೇಶ್ವರ  ಏರಿಯಾ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ವರ್ಷಗಳ ಹಿಂದೆ  ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೆ ಮರಳಿಸಿದ್ದರು.  ಆ ಬಳಿಕ ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳುಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಲೆಯಾಳಂ ಕಲಿಯಲು …

ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ ಕೆ. ಮಾಧವನ್ ನಾಯರ್ ನಿಧನ

ಕಾಸರಗೋಡು: ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ, ನಿವೃತ್ತ ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಪರವನಡ್ಕದ ಕೆ. ಮಾಧವನ್ ನಾಯರ್ (88) ನಿಧನ ಹೊಂದಿದರು. ಚೆಮ್ನಾಡ್ ಪಂಚಾಯತ್‌ನಲ್ಲಿ ಇವರು ನಾಲ್ಕು ಬಾರಿ ಸದಸ್ಯನಾಗಿದ್ದರು. ಪರವನಡ್ಕ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೋಟರುವಂ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದಾರೆ. ಎಕ್ಸಿಕ್ಯೂಟಿವ್ ಮಾಧವನ್ ನಾಯರ್ ಎಂದೇ ತಿಳಿಯಲ್ಪಡುತ್ತಿದ್ದ ಇವರು ಪರವನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಆರಂಭಿಸುವಲ್ಲಿ ನಿರ್ಣಾಯಕ …

ಮಂಜೇಶ್ವರ ಬ್ಲೋಕ್ ಪಂಚಾಯತ್ ವಾಹನ ಮಂಗಳೂರಿಗೆ ಸರ್ವೀಸ್: ವಿಜಿಲೆನ್ಸ್‌ಗೆ ದೂರು

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ವಾಹನ ಮಂಜೇಶ್ವರ- ಮಂಗಳೂರು ಮಧ್ಯೆ ಸರ್ವೀಸ್ ನಡೆಸುತ್ತಿದೆ ಎಂದು ಹೊಸಂಗಡಿ ಗೌಸಿಯಾ ನಗರದ ಎನ್. ಅಬ್ದುಲ್ ಹಮೀದ್ ವಿಜಿಲೆನ್ಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಕೆಎಲ್14ಎಲ್ 9926 ನಂಬ್ರದ ಸರಕಾರಿ ವಾಹನವನ್ನು ಈ ರೀತಿಯಲ್ಲಿ ಸರ್ವೀಸ್‌ಗೆ ಬಳಸಿಕೊಳ್ಳುತ್ತಿರುವುದಾಗಿ ದೂರಲಾಗಿದೆ.  ಈ ವಾಹನಕ್ಕೆ ಬೆಂಗಾವ ಲಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವಾಹನವೂ ಸಂಚರಿಸುತ್ತಿರುವುದಾಗಿ ಆರೋಪಿಸಲಾಗಿದೆ. ಈ ವಾಹನಗಳು ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮ ಸ್ಥಳಗಳಲ್ಲಿ,  ಊರಿನ ರಾಜಕೀಯ ಪಕ್ಷಗಳ ಸಭೆ ನಡೆಯುವಲ್ಲಿ, ಕೆಲವು …

ಸುಲ್ತಾನ್ ಗ್ರೂಪ್‌ನ 20ನೇ ಶೋರೂಂ ವಿಜಯಪುರದಲ್ಲಿ ಉದ್ಘಾಟನೆ

ಬೆಂಗಳೂರು: ಸುಲ್ತಾನ್ ಗ್ರೂಪ್‌ನ 20ನೇ ಡೈಮಂಡ್ಸ್ ಆಂಡ್ ಗೋಲ್ಡ್ ಶೋರೂಂ ಕರ್ನಾಟಕದ ವಿಜಯಪುರ ದಲ್ಲಿ ಕೃಷಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ವಿಜಯಪುರ ಮೇಯರ್ ಎಂ.ಎಸ್. ಕರಡಿ,  ಶ್ರೀ ಜ್ಞಾನಯಾನ ಯೋಗಾಶ್ರಮ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ಮಕ್ಬುಲ್ ಭಗವಾನ್, ದೇವಾನಂದ ಫುಲಸಿಂಗ್ ಚವಾನ್, ಶ್ರೀದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಗುಡ್ಡಾಪುರ ಇದರ ಅಧ್ಯಕ್ಷ ವಿಜುಗೌಡ ಎಸ್ ಪಾಟೀಲ್, ಅಂಜುಮಾನ್ ಇಸ್ಲಾಮ್ ಉಪಾಧ್ಯಕ್ಷ ಸೈನುಲಬದಿನ್ ಹಶ್ಮಿ, ಫಾರಿಶ್‌ಪ್ರಿಸ್ಟ್, ಸೈಂಟ್ ಆನ್‌ಚರ್ಚ್ ಫಾದರ್ ಜೋಸೆಫ್ ಎಸ್.ಜೆ …