ರಾಜ್ಯ ಶಾಲಾ ಕಲೋತ್ಸವಕ್ಕೆ ದೀಪ ಪ್ರಜ್ವಲನೆ: 15,000ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ತೃಶೂರು: 64ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ತೇಕಿನ್‌ಕ್ಕಾಡ್ ಮೈದಾನದಲ್ಲಿರುವ ಪ್ರಧಾನ ವೇದಿಕೆ ಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲೋತ್ಸವವನ್ನು ಉದ್ಘಾಟಿ ಸಿದರು. ಶಿಕ್ಷಣ ಇಲಾಖೆ ಸಚಿವ ವಿ.ಎಸ್. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು. ಇಂದಿನಿಂದ ಈ ತಿಂಗಳ 18ರವರೆಗೆ ಶಾಲಾ ಕಲೋತ್ಸವ ಮುಂದು ವರಿಯಲಿದೆ. 25 ವೇದಿಕೆಗಳಲ್ಲಿಗಾಗಿ 249 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 15,000 ಕ್ಕೂ ಮಿಕ್ಕು ಕಲಾ ಪ್ರತಿಭೆಗಳು ಸ್ಪರ್ಧಿಸುವರು. ಬೆಳಿಗ್ಗೆ ಶಿಕ್ಷಣ ಇಲಾಖೆ ನಿರ್ದೇಶಕ ಎನ್.ಎಸ್.ಕೆ. ಉಮೇಶ್ ಧ್ವಜಾರೋಹಣಗೈದರು. …