ಕುಂಬಳೆ ಟೋಲ್ ಬೂತ್‌ನ ಕ್ಯಾಮರಾ, ಗೇಟ್ ನಾಶ: ವಾಹನಗಳನ್ನು ತಡೆಯುವ ಹ್ಯಾಂಡಲ್‌ಗೆ ಹಾನಿ; 500 ಮಂದಿ ವಿರುದ್ಧ ಕೇಸು ದಾಖಲು, ಚಳವಳಿ ನಿರತ ಶಾಸಕ ಸಹಿತ 15  ಮಂದಿ ಬಂಧನ: ಚಪ್ಪರ ತೆರವು

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧ  ಇಂದು ಬೆಳಿಗ್ಗೆ ಚಳವಳಿ ಪುನರಾರಂಭಿಸಿದ ಶಾಸಕ  ಸಹಿತ ೧೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  ಚಳವಳಿಗಾಗಿ ನಿರ್ಮಿಸಿದ ಚಪ್ಪರವನ್ನು ಪೊಲೀಸರು ಮುರಿದು ತೆರವುಗೊಳಿಸಿದರು.  ಶಾಸಕ ಎಕೆಎಂ ಅಶ್ರಫ್, ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ.ಸುಬೈರ್, ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ಮೊದಲಾದವರನ್ನು ಪೊಲೀಸರು …

ಶಬರಿಮಲೆ ದೇಗುಲದಿಂದ ಚಿನ್ನ ಕಳವು ಪ್ರಕರಣ: ಕೆ.ಪಿ. ಶಂಕರ್‌ದಾಸ್ ಸೆರೆ ನ್ಯಾಯಾಂಗ ಬಂಧನ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ೧೧ನೇ ಆರೋಪಿಯಾಗಿರುವ ತಿರು ವಿದಾಂಕೂರ್ ಮುಜರಾಯಿ ಮಂ ಡಳಿಯ ಮಾಜಿ ಸದಸ್ಯ ಹಾಗೂ ಸಿಪಿಐ ಪ್ರತಿನಿಧಿಯೂ ಆಗಿದ್ದ ಕೆ.ಪಿ. ಶಂಕರ್ ದಾಸ್‌ರನ್ನು  ವಿಶೇಷ ತನಿಖಾ ತಂಡ (ಎಸ್‌ಐಟಿ) ಕೊನೆಗೂ ಬಂಧಿಸಿದೆ. ಶಬರಿಮಲೆಯಲ್ಲಿ ನಿನ್ನೆ ಮಕರ ಜ್ಯೋತಿ   ಬೆಳಗುವ ವೇಳೆಯಲ್ಲೇ ಇವರ ಬಂಧನ ನಡೆದಿದೆ. ಆಮೂಲಕ ಶಬರಿ ಮಲೆ ಚಿನ್ನ ಕಳವು ನಡೆದ ಸಮಯದಲ್ಲಿ  ಮುಜರಾಯಿ ಮಂಡಳಿಯ ಆಡಳಿತ ಸಮಿತಿಯಲ್ಲಿದ್ದ ಎಲ್ಲರೂ  ಬಂಧಿಸ ಲ್ಪಟ್ಟಂತಾಯಿತು.  ಅಂದು ಮಂಡಳಿಯ ಅಧ್ಯಕ್ಷರಾಗಿದ್ದ ಪದ್ಮಕುಮಾರ್ …

ಸಿಪಿಎಂ ನೇತಾರನ ವಿರುದ್ಧ ಅತ್ಯಾಚಾರ ಪ್ರಕರಣ : ದೂರುದಾತೆಯಿಂದ ನ್ಯಾಯಾಲಯ ಗುಪ್ತ ಮಾಹಿತಿ ಸಂಗ್ರಹ

ಕಾಸರಗೋಡು: ಸಿಪಿಎಂ ನೇತಾರನ ವಿರುದ್ಧ  ಕೇಳಿ ಬಂದ ಅತ್ಯಾಚಾರ ಪ್ರಕರಣದಲ್ಲಿ  ದೂರುದಾತೆಯಿಂದ ನ್ಯಾಯಾಲಯ ಗುಪ್ತ ಹೇಳಿಕೆ ದಾಖಲಿಸಿಕೊಂಡಿದೆ. ಕಾಸರಗೋಡು ಮಹಿಳಾ ಠಾಣೆಯ ಎಸ್‌ಐ ಕೆ. ಅಜಿತ ದೂರುದಾತೆ ಯಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಇದೇ ವೇಳೆ ವೈದ್ಯಕೀಯ ತಪಾಸಣೆಗೆ ವಿಧೇಯಗೊಳಿಸಬೇಕೆಂಬ ಪೊಲೀಸರ ಆಗ್ರಹಕ್ಕೆ ದೂರುದಾತೆಯಾದ ಗೃಹಿಣಿಯಿಂದ ಅನುಕೂಲ ಪ್ರತಿಕ್ರಿಯೆ  ಉಂಟಾಗಿಲ್ಲವೆಂಬ ಸೂಚನೆಯಿದೆ. ಸಿಪಿಎಂ ಮಾಜಿ ಕುಂಬಳೆ ಏರಿಯಾ ಸೆಕ್ರೆಟರಿಯೂ ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯನೂ, ಇಚ್ಲಂಪಾಡಿ ಶಾಲೆ ಅಧ್ಯಾಪಕನಾದ ಸುಧಾಕರ ಈ ಪ್ರಕರಣದಲ್ಲಿ …

ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ವಿದೇಶಿ ಕರೆನ್ಸಿ, ನಗದು, ವಾಚ್‌ಗಳು ಕಳವು

ಕುಂಬಳೆ: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ವಿದೇಶಿ ಕರೆನ್ಸಿ, ನಗದು ಹಾಗೂ ವಾಚ್‌ಗಳನ್ನು ಕಳವುಗೈದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕಯ್ಯಾರು ಕೊಕ್ಕೆಚ್ಚಾಲ್ ಉಬೈಸ್ ಮಂಜಿಲ್‌ನ ಉಮ್ಮರ್ ಉಸೈದ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.   ಈತಿಂಗಳ ೧೨ರಂದು ಮನೆಯವರು ಬೀಗ ಜಡಿದು ಕಲ್ಲಿಕೋಟೆಗೆ ಹೋಗಿದ್ದರು. ಆ ಬಳಿಕ ಮನೆ ಮನೆಗೆ ಬಂದಾಗ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಅದರಂತೆ ಉಮ್ಮರ್ ಉಸೈದ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ …

ನಡೆದು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಮಾಟೆಂಗುಳಿ ನಿವಾಸಿಯೂ ಆರಿ ಕ್ಕಾಡಿ ತಂಙಳ್‌ರ ಮನೆ  ಸಮೀಪ ವಾಸಿಸುವ ಕೆ.ಎಂ. ಅಬ್ಬಾಸ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಕುಂಬಳೆ ಪೇಟೆಯಲ್ಲಿ ಸ್ನೇಹಿತ ನೊಂದಿಗೆ ಮಾತನಾಡುತ್ತಿದ್ದಾಗ ಇವ ರಿಗೆ ಎದೆ ನೋವು ಉಂಟಾಗಿತ್ತೆನ್ನ ಲಾಗಿದೆ. ಈ ಬಗ್ಗೆ  ಸ್ನೇಹಿತನಿಗೆ ತಿಳಿಸಿ ಆಸ್ಪತ್ರೆಗೆ ನಡೆದು ಹೋಗುತ್ತಿ ದ್ದಾಗ ರಸ್ತೆ ಬದಿ ಕುಸಿದು ಬಿದ್ದಿದ್ದಾರೆ. ಕೂಡಲೇ ನಾಗರಿಕರು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ …

ಮನೆಗೆ ಬೆಂಕಿಗಾಹುತಿ: ಲಕ್ಷಾಂತರ ರೂ.ಗಳ ನಷ್ಟ

ಪೆರ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ಬೆದ್ರಂಪಳ್ಳ ನಡುಬಯಲ್‌ನಲ್ಲಿ ನಿನ್ನೆ ನಡೆದಿದೆ. ನಡುಬಯಲಿನ ರಮೇಶ್ಚಂದ್ರ ಎಂಬವರ ಮನೆಗೆ ನಿನ್ನೆ ಸಂಜೆ ಬೆಂಕಿ ತಗಲಿದೆ. ಇದರಿಂದ ಮನೆಯೊಳಗಿದ್ದ ಫ್ರಿಡ್ಜ್, ಟಿವಿ, ಪೀಠೋಪಕರಣಗಳು, ಕಪಾಟುಗಳು, ದಾಖಲೆಪತ್ರಗಳು  ಮೊದಲಾದವುಗಳು ಪೂರ್ಣವಾಗಿ ಉರಿದು ನಾಶಗೊಂಡಿದೆ.  ಮನೆಗೆ ಬೆಂಕಿ ತಗಲುವ ವೇಳೆ ಅಲ್ಲಿ ಯಾರೂ ಇರಲಿಲ್ಲ. ಮನೆಯವರು  ಮಡಿಕೇರಿಯ ದೇವಸ್ಥಾನವೊಂದಕ್ಕೆ  ಹೋಗಿದ್ದ ವೇಳೆ ಮನೆಗೆ ಬೆಂಕಿ ತಗಲಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬ …

ಶಬರಿಮಲೆ ಕ್ಷೇತ್ರ ಕಾಣಿಕೆ ಹುಂಡಿಯಿಂದ ವಿದೇಶಿ ಕರೆನ್ಸಿ, ಚಿನ್ನ ಬಾಯಿಯೊಳಗಿಟ್ಟು ಸಾಗಾಟ: ಇಬ್ಬರು ಸೆರೆ

ಶಬರಿಮಲೆ: ಕ್ಷೇತ್ರದಿಂದ ಚಿನ್ನ ಕಳವು ಪ್ರಕರಣ ತೀವ್ರಗತಿಯಲ್ಲಿ ತನಿಖೆ ಮುಂದುವರಿಯುತ್ತಿರುವ ಮಧ್ಯೆ ಕ್ಷೇತ್ರದ ಕಾಣಿಕೆ ಹುಂಡಿಯಿಂದ ವಿದೇಶಿ ಕರೆನ್ಸಿಗಳು ಹಾಗೂ ಚಿನ್ನವನ್ನು ಬಾಯಿಯೊಳಗಿಟ್ಟು ಸಾಗಿಸಿದ ಇಬ್ಬರು ದೇವಸ್ವಂ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ಕೊಡುಪ್ಪುನ ನಿವಾಸಿ ಎಂ.ಜಿ. ಗೋಪಕುಮಾರ್ (51), ಕೈನಕ್ಕರಿ ನಾಲ್‌ಪುರೈಕ್ಕಲ್ ಸುನಿಲ್ ಜಿ. ನಾಯರ್ (51) ಎಂಬಿವರನ್ನು ದೇವಸ್ವಂ ವಿಜಿಲೆನ್ಸ್ ಬಂಧಿಸಿದೆ. ಇವರನ್ನು ಸನ್ನಿಧಾನ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇವರಿಬ್ಬರು ತಾತ್ಕಾಲಿಕ ನೌಕರರಾಗಿದ್ದಾರೆ. ಕೆಲಸ ಮುಗಿಸಿ ಹೊರಗೆ ಹೋಗುವಾಗ ಇವರ ಬಾಯಿ ಉಬ್ಬಿದ ಸ್ಥಿತಿಯಲ್ಲಿ …

ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ವೃದ್ದನ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ

ಕಾಸರಗೋಡು: ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಿದ ವೃದ್ದನ ಮೃತದೇಹವನ್ನು ತಜ್ಞ ಪರೀಕ್ಷೆಗಾಗಿ ಕಾಸರಗೋಡಿನ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಚೋಯಾಂಗೋಟ್‌ನ ಹಿರಿಯ ಆಟೋ ಚಾಲಕ ಕೆ. ಕೃಷ್ಣನ್ (68) ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಇವರು ಕಳೆದೆರಡು ದಿನದಿಂದ ಹೊರ ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ನೋಡಿದಾಗ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ದೇಹಕ್ಕೆ ಎರಡು ದಿನಕ್ಕಿಂತಲೂ ಹೆಚ್ಚು ಹಳಮೆ ಇದೆ ಎಂದು ಶಂಕಿಸಲಾಗಿದೆ. ಹೃದಯಾಘಾತ ಮರಣಕ್ಕೆ ಕಾರಣ ವೆಂದು …

ವಿವಿಧೆಡೆ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ತಪಾಸಣೆ: 500 ಕಿಲೋ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಕಾನೂನು ಉಲ್ಲಂಘನೆಗಳನ್ನು ಪರಿಶೀಲಿಸುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಎರಡು ದಿನಗಳೊಳಗೆ 500 ಕಿಲೋಗಿಂತಲೂ ಹೆಚ್ಚು ನಿಷೇಧಿತ ತಟ್ಟೆಗಳು, ಗ್ಲಾಸ್‌ಗಳನ್ನು ಪತ್ತೆಹಚ್ಚಿ ದಂಡ ಹೇರಿದೆ. ಮೀಂಜ ಪಂ.ನ ಸೂಪರ್ ಮಾರ್ಕೆಟ್‌ನಿಂದ, ಅಂಗಡಿಗಳಿಂದ ಮಾರಾಟಕ್ಕಾಗಿ ಇರಿಸಿದ್ದ ೧೫೦ ಕಿಲೋ ಗ್ರಾಂ ನಿಷೇಧಿತ ಉತ್ಪನ್ನಗಳನ್ನು ಪತ್ತೆಹಚ್ಚಿ ಮಾಲಕರಿಗೆ 10,000 ರೂ.ನಂತೆ ದಂಡ ವಿಧಿಸಲಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಸೂಪರ್ ಮಾರ್ಕೆಟ್‌ನಿಂದ 50 ಕಿಲೋ ಗ್ರಾಂ ನಿಷೇಧಿತ ಉತ್ಪನ್ನಗಳನ್ನು ಪತ್ತೆಹಚ್ಚಿ …

ಪ್ರತಾಪನಗರ ಒಳರಸ್ತೆ ಚರಂಡಿ ನಿರ್ಮಾಣಕ್ಕೆ ಚಾಲನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದ ಒಳರಸ್ತೆಯಲ್ಲಿ ಚರಂಡಿ ನಿರ್ಮಾಣ ಕೆಲಸಕ್ಕೆ ನಿನ್ನೆ ಚಾಲನೆ ನೀಡಲಾಗಿದೆ. ಪಂಚಾಯತ್ ಪsಂಡ್‌ನಿAದ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಗೊಳ್ಳಲಿದೆ. ಚರಂಡಿಯ ಅವ್ಯವಸ್ಥೆಯಿಂದ ಮಳೆ ನೀರು ಪೂರ್ತಿ ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆಯಿಂದ ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ನಿರ್ಮಾಣದಿಂದ ಸಮಸ್ಯೆ ಬಗೆ ಹರಿಯಲಿದೆ. ಎರಡು ತಿಂಗಳ ಹಿಂದೆ ಚರಂಡಿ ನಿರ್ಮಾಣಕ್ಕೆ ಹೊಂಡ ತೋಡಿ ಮುಹೂರ್ತ ಮಾಡಲಾಗಿತ್ತು. ಕೆಲಸ ಆರಂಭ ವಿಳಂಬಗೊAಡಿರುವುದು ಸ್ಥಳೀಯರಿಗೆ ಸಮಸ್ಯೆಯÁಗಿತ್ತು. ಅಲ್ಲದೆ ಹೊಂಡ ತೋಡುವ …