18ರಿಂದ 30ರ ಮಧ್ಯೆ ಪ್ರಾಯದವರಿಗೆ ಸ್ಕಾಲರ್‌ಶಿಪ್ ‘ಕನೆಕ್ಟ್ ಟು ವರ್ಕ್’ ಯೋಜನೆಯ ರೂಪುರೇಷೆಗೆ ಅಂಗೀಕಾರ

ತಿರುವನಂತಪುರ: ಮುಖ್ಯಮಂತ್ರಿಯ ಕನೆಕ್ಟ್ ಟು ವರ್ಕ್ ಯೋಜನೆಯ ನವೀಕೃತ ರೂಪುರೇಷೆಗೆ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉದ್ಯೋಗ ಸಾಧ್ಯತೆಗಳನ್ನು ಉತ್ತಮ ಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಾಗ ಬಾರದು. ಅರ್ಜಿದಾರ ಕೇರಳದಲ್ಲೇ ಖಾಯಂ ವಾಸವಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷ ಪೂರ್ತಿಯಾಗಿದ್ದು, 30 ವರ್ಷಕ್ಕಿಂತ ಹೆಚ್ಚಾಗಬಾರದು. ಕೇಂದ್ರ, ರಾಜ್ಯ ಸರಕಾರಿ ಇಲಾಖೆಗಳು, ಕೇಂದ್ರ, ರಾಜ್ಯ ಸಾರ್ವಜನಿಕ ಸಂಸ್ಥೆಗಳು, ಅಂಗೀಕೃತ ವಿ.ವಿ.ಗಳು, ಅಂಗೀಕೃತ ಖಾಸಗಿ …

ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದಲ್ಲಿ ವಿಶೇಷ ದೀಪೋತ್ಸವದೊಂದಿಗೆ ಧನುರ್ಮಾಸ ಪೂಜೆ ಸಮಾಪ್ತಿ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ದಲ್ಲಿ ಧನುರ್ಮಾಸ ಪೂಜಾ ಮಹೋ ತ್ಸವ ನಿನ್ನೆ ವಿಶೇಷ ದೀಪೋತ್ಸವದೊಂ ದಿಗೆ ಸಮಾಪ್ತಿಗೊಂಡಿತು. ಶ್ರೀ ಕಾಳಿಕಾ ಪರಮೇಶ್ವರೀ ದೇವಿ, ಶ್ರೀ ಮಹಾಗಣ ಪತಿ, ಶ್ರೀ ವಿಶ್ವಕರ್ಮ ದೇವರಿಗೆ ಪೂಜೆ ನೆರವೇರಿತು. ಶ್ರೀ ದೇವರಿಗೆ ಪಂಚಾ ಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ಬಳಿಕ ಕಾಸರಗೋಡು ಉಳಿಯತಡ್ಕ ಶ್ರೀ ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ ನಡೆಯಿತು. ಈ ವೇಳೆ ಮಾತೆಯರು, ಮಕ್ಕಳು ಸೇರಿ ಕ್ಷೇತ್ರ ವಠಾರದಲ್ಲಿ …

ಪೈವಳಿಕೆ ಪಂ. ನಲ್ಲಿ ಕೋ-ಲೀ-ಬಿ ಮೈತ್ರಿ ಪ್ರತಿಭಟಿಸಿ ಸಿಪಿಎಂನಿಂದ ವಾಹನ ಪ್ರಚಾರ ಜಾಥಾ

ಪೈವಳಿಕೆ: ಪಂಚಾಯತ್‌ನಲ್ಲಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ  ಸದಸ್ಯರಿಗೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೀಗ್ ಸದಸ್ಯೆ ಹಾಗೂ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಮತ ನೀಡಿರುವುದನ್ನು ಪ್ರತಿಭಟಿಸಿ ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ವಾಹನ ಜಾಥಾ ನಡೆಸಲಾಯಿತು. ಕಯ್ಯಾರ್‌ನಲ್ಲಿ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಜಾಥಾ ಉದ್ಘಾಟಿಸಿ ಮಾತನಾಡಿದರು. ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಾಥಾ ಲೀಡರ್ ಅಬ್ದುಲ್ ರಜಾಕ್ ಚಿಪ್ಪಾರು, ಜಾಥಾ ನಾಯಕ ಪುರುಷೋತ್ತಮ ಬಳ್ಳೂರು, ಸದಸ್ಯ ಚಂದ್ರ ನಾಯ್ಕ್ …

ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿಯಿಂದ ವಿವೇಕಾನಂದ ಜಯಂತಿ ಆಚರಣೆ

ಮುಳ್ಳೇರಿಯ: ದೇಶೀಯ ಅಧ್ಯಾ ಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿ ವತಿಯಿಂದ ಸ್ವಾಮಿ ವಿವೇಕಾ ನಂದ ಜಯಂತಿ  ಆಚರಿಸಲಾಯಿತು. ಮವ್ವಾರ್ ಗೌರಿಯಡ್ಕ ಶ್ಯಾಮಲಾ ರವಿರಾಜ್‌ರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಜಿಲ್ಲಾ ಸಮಿತಿ ಅಧ್ಯಕ್ಷ ರಾಮಚಂದ್ರ ಕಾರಡ್ಕ ಅಧ್ಯಕ್ಷತೆ ವಹಿಸಿದರು. ವಿಷ್ಣು ಭಟ್ ಎಡಪ್ಪಾಡಿ ಉದ್ಘಾಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರ ಶುಭ ಕೋರಿದರು. ಪುಷ್ಪ, ರವಿರಾಜ್, ಪುರುಷೋತ್ತಮ ಕುಲಾಲ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಶ್ಯಾಮಲಾ ಕುಮಾರಿ ಸ್ವಾಗತಿಸಿ, ದಿನೇಶ್ ವಂದಿಸಿದರು.