ಟೋಲ್ ಪ್ರತಿಭಟನೆ: ತಂಡದ ವಿರುದ್ಧ ಕೇಸು; ಇಬ್ಬರು ಸೆರೆ
ಕುಂಬಳೆ: ಆರಿಕ್ಕಾಡಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸಂಗ್ರಹಿಸಲಾ ಗುತ್ತಿರುವ ಟೋಲ್ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಹೆದ್ದಾರಿ ಪ್ರಾಧಿಕಾರದ ಸಾಮಗ್ರಿಗಳಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ದಾಖಲಿಸಿದ ಪ್ರಕರಣದಲ್ಲಿ ಇಬ್ಬರನ್ನು ಸೆರೆ ಹಿಡಿದು ಓರ್ವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಂತೆ ಸಂಘರ್ಷ ವೇಳೆ 10 ಲಕ್ಷ ರೂ.ಗಳ ನಾಶನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ. ಇದರಲ್ಲಿ ಉಜಾರು ಕೊಡ್ಯಮ್ಮೆ ನಿವಾಸಿ ಫೈಸಲ್ ಅಬ್ದುಲ್ ರಹ್ಮಾನ್ (28), ವಾಮಂಜೂರು ಚೆಕ್‌ಪೋಸ್ಟ್ ನಿವಾಸಿ …