ರಾಜ್ಯ ಬಜೆಟ್ ಮಂಡನೆ: ಕಾಸರಗೋಡು ಪ್ಯಾಕೇಜ್‌ಗೆ 80 ಕೋಟಿ ರೂ. ಮೀಸಲು ; 12ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ವಿಮೆ ಯೋಜನೆ
ತಿರುವನಂತಪುರ: ಪಿಣರಾಯಿ ವಿಜಂiiನ್ ನೇತೃತ್ವದ ಎರಡನೇ ಎಡರಂಗ ಸರಕಾರದ ಕೊನೆಯ ಹಾಗೂ 2026-27 ನೇ ಹಣಕಾಸು ವರ್ಷದ ಮುಂಗಡಪತ್ರವನ್ನು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸುವ 6ನೇ ರಾಜ್ಯ ಬಜೆಟ್ ಆಗಿದೆ. ಹಿರಿಯ ನಾಗರಿಕರ ಸಮಗ್ರ ಕಲ್ಯಾಣಕ್ಕಾಗಿರುವ ‘ಎಲ್ಡರ್ಲಿ’ ಬಜೆಟ್ ಇದಾಗಿದೆಯೆಂದು ಸಚಿವ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ತಿಳಿಸಿದ್ದಾರೆ. ನಿರೀಕ್ಷೆಯಂತೆಯೇ ವಿವಿಧ ವಲಯಗಳಿಗೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‌ನಲ್ಲಿ ಕಲ್ಪಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಯೋಜನೆಗಾಗಿ ಬಜೆಟ್‌ನಲ್ಲಿ 80 ಕೋಟಿ …