ತಂದೆಯ ಇರಿತದಿಂದ ಮುದ್ದಿನ ಮಗಳು ಬಲಿ; ಗಾಯಗೊಂಡಿದ್ದ ಸಂಬಂಧಿಕನೂ ಮೃತ್ಯು, ಅವಳಿ ಕೊಲೆಯಿಂದ ಶೋಕ ಸಾಗರವಾದ ತೂಮಿನಾಡು
ಉಪ್ಪಳ: ತಂದೆಯ ಇರಿತದಿಂದ ಮುದ್ದಿನ ಮಗಳು ಸಾವಿಗೀಡಾದ ಘಟನೆಯಿಂದ ನಾಡು ಶೋಕಸಾಗರದಲ್ಲಿ ಮುಳುಗಿರುವಂತೆಯೇ ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಬಂಧಿಕನೂ ಮೃತಪಟ್ಟ ಘಟನೆ ನಡೆದಿದೆ. ಒಟ್ಟಾರೆಯಾಗಿ ಅವಳಿ ಕೊಲೆ ನಡೆದ ತೂಮಿನಾಡು ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಘಟನೆ ಸ್ಥಳಕ್ಕೆ ಸಂಬಂಧಿಕರು, ನಾಗರಿಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪುತ್ತಿದ್ದು ಇಡೀ ನಾಡೇ ದುಃಖದಲ್ಲಿ ಮುಳುಗಿದೆ. ಮಂಜೇಶ್ವರ ತೂಮಿನಾಡು ಹಿಲ್‌ಟಾಪ್ ನಗರದಲ್ಲಿ ನಿನ್ನೆ ಸಂಜೆ ಈ ಭೀಕರ ಘಟನೆ ನಡೆದಿದೆ. ಈ ಸಂಬಂಧ ಮೂಲತಃ …