ರಾ. ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ರದ್ದು: ಬಿಜೆಪಿ, ಕ್ರಿಯಾ ಸಮಿತಿಯಿಂದ ಹರ್ಷ ಮೆರವಣಿಗೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಆರಂಭಿಸಲಾ ಗಿದ್ದ ಟೋಲ್ ಬೂತ್‌ನ ಚಟುವಟಿಕೆ ಯನ್ನು ಕೇಂದ್ರ ಸರಕಾರ ನಿಲುಗಡೆಗೊಳಿ ಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಮಾಹಿತಿ ಲಭಿಸಿರುವು ದಾಗಿ ಬಿಜೆಪಿ ನೇತಾರರಾದ ಎಂ.ಎಲ್. ಅಶ್ವಿನಿ ಹಾಗೂ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಟೋಲ್ ಪ್ಲಾಜಾದ ವಿರುದ್ಧ ವ್ಯಾಪಕ ಪ್ರತಿಭಟನೆ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಿರಂತರ ಮಧ್ಯಪ್ರವೇಶಿಸಿ, ಸಂಬಂಧ ಪಟ್ಟವರಿಗೆಲ್ಲಾ ಹಲವು ಬಾರಿ ಮನವಿ ಸಲ್ಲಿಸಿ ಟೋಲ್ ಸಂಗ್ರಹ ನಿಲುಗಡೆ ಗೊಳಿಸಬೇಕೆಂದು ಒತ್ತಾಯಿಸಿತ್ತು. ಜಿಲ್ಲಾ ಸಮಿತಿಯ ಮನವಿಗೆ …

23.4 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ:  ಕರ್ನಾಟಕ ನಿರ್ಮಿತ ವಿದೇಶ ಮದ್ಯ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. (36) ಎಂಬಾತನನ್ನು ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟಿವ್ ಆಫೀಸರ್ ಜಿಜಿನ್ ಎಂ.ವಿ. ನೇತೃತ್ವದ ತಂಡ ಬಂಧಿಸಿದೆ. ಬಂಧಿತನ ಕೈಯಿಂದ 23.4 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪದಿಂದ 180 ಮಿಲ್ಲಿಯ 130 ಟೆಟ್ರಾಪ್ಯಾಕೆಟ್ ಮದ್ಯ ಸಹಿತ ಈತನನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ …

ಪೆರಿಯ ಬಳಿ ಚಿರತೆಯನ್ನು ಹೋಲುವ ಪ್ರಾಣಿ ಪತ್ತೆ

ಕಾಸರಗೋಡು : ಪೆರಿಯ ಬಳಿ ಯ ಆಯಂಬಾರ ಉರುಳಂಕೋಡಿ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ನಿನ್ನೆ ಸಂಜೆ ೫.೩೦ರ ವೇಳೆ ಉರುಳಂಕೋಡಿಯ ಕಂಗಿನ ತೋಟದಲ್ಲಿ ವನ್ಯಜೀವಿ ಪ್ರತ್ಯಕ್ಷಗೊಂಡಿದೆ.  ಈ ವೇಳೆ ಅಲ್ಲಿದ್ದ ತೋಟದ ಮಾಲಕ ಆ ಪ್ರಾಣಿಯ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಾಣಿ  ಯಾವುದೆಂದು ಖಚಿತಪಡಿಸಲು ವೀಡಿಯೋವನ್ನು ಅರಣ್ಯಇಲಾಖೆ ಅಧಿಕಾರಿಗಳಿಗೆ ಕಳುಹಿಸಿಕೊಡ ಲಾಗಿದೆ. ಅಡಿಕೆ ತೋಟ ಸಮೀಪದ ತೋಡಿನಿಂದ ಹತ್ತಿ ಬಂದ ಪ್ರಾಣಿ ತೋಟದ ಬದಿಯಲ್ಲಾಗಿ ನಡೆದು ಹೋಗಿದೆ.  ಇದೇ ವೇಳೆ  …

ಕೊರಿಯರ್ ಲವ್ ಗೇಮ್  ವಿರೋಧಿಸಿದ ಹೆತ್ತವರು: ಸಹೋದರಿಯರು  ಆತ್ಮಹತ್ಯೆ

ಘಾಸಿಯಾಬಾದ್: ಆನ್‌ಲೈನ್ ಮೂಲಕದ ಕೊರಿಯರ್ ಲವ್‌ಗೇಮ್ ವೀಕ್ಷಿಸುವುದನ್ನು ಹೆತ್ತವರು ವಿರೋಧಿಸಿ ದಾಗ ಮನನೊಂದು ಮೂವರು ಸಹೋದರಿಯರು 9 ಅಂತಸ್ತಿನ ಅಪಾರ್ಟ್ ಮೆಂಟ್‌ನಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಗೈದ ಘಟನೆ ಇಂದು ಮುಂಜಾನೆ ನಡೆದಿದೆ. ಉತ್ತರ ಪ್ರದೇಶದ ಘಾಸಿಯಾ ಬಾದ್‌ನ ಅಪಾರ್ಟ್‌ಮೆಂಟೊಂದರಲ್ಲಿ ವಾಸಿಸುತ್ತಿರುವ  ಫಖಿ (12), ಪ್ರಾಚಿ (14), ವಿಶಿಕ (19) ಎಂಬವರು ಆತ್ಮಹತ್ಯೆಗೈದ ಸಹೋದರಿಯರು. ಇವರು ಪ್ರತಿದಿನ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕೊರಿಯರ್ ಲವ್ ಗೇಮ್ ವೀಕ್ಷಿಸುತ್ತಿದ್ದರು. ಅದನ್ನು ಗಮನಿಸಿದ ಮನೆಯವರು  ಆಕ್ಷೇಪ ವ್ಯಕ್ತಪಡಿಸಿದಾಗ   ಆ ಮೂವರು …

ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ, ಸಂಬಂಧಿಕನ ಮೃತದೇಹ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ

ಮಂಜೇಶ್ವರ: ತೂಮಿನಾಡಿನಲ್ಲಿ ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ ಹಾಗೂ ಸಂಬಂಧಿಕನ ಮೃತದೇಹಗಳನ್ನು ನಿನ್ನೆ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು. ತೂಮಿನಾಡು ಹಿಲ್‌ಟಾಪ್ ನಗರದ ಶೇಕುಂಞಿ 63) ಹಾಗೂ ಇವರ ಪತ್ನಿಯ ಸಹೋದರಿಯ ಪುತ್ರಿ ಮರಿಯಂ ಜುಮೈಲ (18) ಎಂಬಿವರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಹಿಲ್‌ಟಾಪ್ ನಗರದ ಮನೆಗೆ ತಲುಪಿಸುವಾಗ ನಾಡಿನ ವಿವಿಧೆಡೆಗಳಿಂದ ಸಂಬಂಧಿಕರ ಸಹಿತ ನೂರಾರು ಮಂದಿ ಅಲ್ಲಿ ಸೇರಿದ್ದು ಪ್ರತಿಯೊಬ್ಬರ ಮುಖದಲ್ಲೂ ದುಃಖ ಉಮ್ಮಳಿಸುತ್ತಿತ್ತು.  …

ಟೋಲ್ ನಿಲುಗಡೆ: ಸಂಗ್ರಹಿಸಿದ ಟೋಲ್ ಹಿಂತಿರುಗಿಸಲು ಸಿಪಿಎಂ ಆಗ್ರಹ

ಕುಂಬಳೆ: ಆರಿಕ್ಕಾಡಿಯಲ್ಲಿ   ಟೋಲ್ ಸಂಗ್ರಹ ನಿಲುಗಡೆಗೊಳಿಸಲು ಕೇಂದ್ರ ಸರಕಾರ ಕೈಗೊಂಡ ತೀರ್ಮಾನದ ಹಿನ್ನೆಲೆಯಲ್ಲಿ ಇದುವರೆಗೆ ಇಲ್ಲಿ ಸಂಗ್ರಹಿಸಿದ ಟೋಲ್ ಹಿಂತಿರುಗಿಸಬೇಕೆಂದು ಸಿಪಿಎಂ ಆಗ್ರಹಿಸಿದೆ. ಸಿಪಿಎಂ ಹಾಗೂ ಜನಪರ ಹೋರಾಟ ಸಮಿತಿ ನಡೆಸಿದ ಆಂದೋಲನ ಕೇಂದ್ರಸರಕಾರಕ್ಕೆ ಬಿಸಿ ಮುಟ್ಟಿಸಿದ್ದು, ಈಗ ಟೋಲ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಹೋರಾಟ ನಡೆಸಿದ ಸ್ಥಳೀಯರ ಮೇಲೆ ದಾಖಲಿಸಿದ ಕೇಸು, ಆರ್ಥಿಕ ನಷ್ಟಗಳನ್ನು ಪರಿಹರಿಸಬೇಕೆಂದು ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಒತ್ತಾಯಿಸಿದ್ದಾರೆ.

ಆರಿಕ್ಕಾಡಿ ಟೋಲ್ ಸಂಗ್ರಹ ನಿಲುಗಡೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ಅಭಿನಂದನೆ

ಕುಂಬಳೆ: ಆರಿಕ್ಕಾಡಿ ಟೋಲ್ ನಿಲುಗಡೆಗೊಳಿಸುವಂತೆ ಹೆದ್ದಾರಿ ಇಲಾಖೆಗೆ ಆದೇಶ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಇದಕ್ಕಾಗಿ ನಿರಂತರ ಪ್ರಯತ್ನ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಸಮಿತಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ. ಟೋಲ್ ವಿಚಾರದಲ್ಲಿ ಬೀದಿ ನಾಟಕ ಮಾಡಿ ರಾಜಕೀಯ ಲಾಭ ಪಡೆಯಲು ಶಾಸಕರು ನಡೆಸಿದ ನಾಟಕ ಜನತೆಗೆ ತಿಳಿದಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ. ಬಿಜೆಪಿ ಕೇಂದ್ರ ಸಚಿವರಲ್ಲಿ ಈ ವಿಷಯದಲ್ಲಿ ಪ್ರಾಮಾಣಿಕವಾಗಿ ಮಾತನಾಡಿ …

ಆರಿಕ್ಕಾಡಿಯ ಟೋಲ್ ಮುಚ್ಚಲಿರುವ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟಕ್ಕೆ ಸಂದಜಯ- ಶಾಸಕ ಎಕೆಎಂ ಅಶ್ರಫ್

ಕುಂಬಳೆ: ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಜನವಿರುದ್ಧ ಟೋಲ್ ಬೂತ್ ನಿಲುಗಡೆಗೊಳಿಸಿದ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟದ ಜಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ನಾಡು ಒಂದಾಗಿ ನಡೆಸಿದ ಜನಪರ ಹೋರಾಟದ ಮುಂದೆ ಮಣಿಯದ ಯಾವುದೇ ಅಧಿಕಾರ ಕೇಂದ್ರಗಳಿಲ್ಲ ವೆಂದು, ಹೈಕೋರ್ಟ್‌ನಲ್ಲಿ ಉಂಟಾದ ಪರಾಮರ್ಶೆಗಳು ಕೇಂದ್ರ ಸರಕಾರದ ನಿಲುವು ತಿದ್ದಲು ಸಹಾಯಕವಾಯಿತೆಂದು ಶಾಸಕರು ನುಡಿದರು. ಜನಪರ ಹೋರಾಟದ ಹೆಸರಲ್ಲಿ ಹಲವಾರು ಮಂದಿ ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆಯಲಾಗಿದ್ದು, ಕೇಸಿನಲ್ಲಿ ಸಿಲುಕಿಸಿ ಈಗಲೂ ಜೈಲಿನಲ್ಲಿದ್ದಾರೆ. ಇವರಿಗೂ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೂ, ಜಿಲ್ಲೆಯ …

ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ

ಕುಂಬಳೆ: ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಮೋಟಾರು ಯೂನಿಟ್ ಜಿಲ್ಲಾಧ್ಯಕ್ಷ ಶಿವರಾಮ ಪೆರ್ಲ, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಭಾಗವಹಿಸಿದರು. ಕುಂಬಳೆ ಘಟಕ ಅಧ್ಯಕ್ಷ ಕೃಷ್ಣ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಸದಸ್ಯ  ಕಮಲಾಕ್ಷ ಕಡಪ್ಪುರ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ರೈ ಉಜಾರು ವಂದಿಸಿದರು. ಹಳೆಯ ಸಮಿತಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲು ತೀರ್ಮಾನಿಸಲಾಯಿತು.

ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದಲ್ಲಿ ಅಪಾಯಕರ ರೀತಿಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ಲೈಸನ್ಸ್ ರದ್ದು ಶಿಫಾರಸು

ಹೊಸದುರ್ಗ: ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದಲ್ಲಿ ಅಪಾಯಕರ ವಾದ ರೀತಿಯಲ್ಲಿ ಕಾರು ಚಲಾಯಿಸಿದ ಘಟನೆಯಲ್ಲಿ ಮೋಟಾರುವಾಹನ ಇಲಾಖೆ ಚಾಲಕನ ಲೈಸನ್ಸ್ ರದ್ದು ಗೊಳಿಸಲು ಶಿಫಾರಸು ಮಾಡಿದೆ. ಚೆರುವತ್ತೂರು ನಿವಾಸಿ ಶಾಹಿದ್ ಶಾಹುಲ್ ವಿರುದ್ಧ ಮೋಟಾರು ವಾಹನ ಇಲಾಖೆ ಈ ಕ್ರಮ ಕೈಗೊಂಡಿದೆ. ಮಲಪ್ಪುರಂ ಎಡಪ್ಪಾಲ್‌ನ ಚಾಲನಾ ತರಬೇತಿ ಕೇಂದ್ರದಲ್ಲಿ ಐದು ದಿನದ ಕಡ್ಡಾಯ ತರಬೇತಿಗೂ, ನ್ಯಾಯಾಲಯ ದಲ್ಲಿ ದಂಡ ಪಾವತಿಸಲು ಮೋಟಾರು ವಾಹನ ಇಲಾಖೆ ಶಿಫಾರಸು ಮಾಡಿದೆ. ಕೆಎಸ್‌ಆರ್‌ಟಿಸಿ ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಾಞಂಗಾಡ್ ಅಸಿಸ್ಟೆಂಟ್ …