ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆ ಮಾರಾಟ ಮಂಡ್ಯ ನಿವಾಸಿಗಳಾದ ನಾಲ್ವರ ಸೆರೆ; ಇಬ್ಬರು ಪರಾರಿ

ಕಾಸರಗೋಡು: ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಎಗರಿಸಲೆ ತ್ನಿಸುವ ತಂಡವೊಂದನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮಂಡ್ಯ ನಿವಾಸಿ ಗಳಾದ ಅರ್ಜುನ್ ಸೋಲಂಕಿ (30), ಗಣೇಶ್ ಸೋಲಂಕಿ (53), ಹರಿಲಾಲ್ (37) ಮತ್ತು  ಜೀವನ್‌ಲಾಲ್ (62) ಎಂಬವರು ಬಂಧಿತ ಆರೋಪಿಗಳು. ಇದೇ ತಂಡದ ಇಬ್ಬರು ಪೊಲೀಸ್ ಕಾರ್ಯಾಚರಣೆ ವೇಳೆ ತಪ್ಪಿಸಿ ಪರಾರಿಯಾಗಿದ್ದಾರೆ. ಬಂಧಿತರಿಂದ  6.5 ಕಿಲೋ ಗ್ರಾಂ ನಕಲಿ  ಒಡವೆ ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ತಾಮ್ರ ಮತ್ತು ಕಾಡ್ಮಿಯಾ ಉಪಯೋಗಿಸಿ ಈ …

ಮಣ್ಣಂಗುಳಿ ಅಂಗನವಾಡಿಯಿಂದ ಮಿಕ್ಸಿ, ಕುಕ್ಕರ್ ಸಹಿತ ಪಾತ್ರೆ ಸಾಮಗ್ರಿ ಕಳವು

ಉಪ್ಪಳ: ಉಪ್ಪಳ ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿದ ಕಳ್ಳ ಹಲವಾರು ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಕಳವು ನಡೆದ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಅಂಗನವಾಡಿ ಶಿಕ್ಷಕಿ ಭಾಗೀರಥಿ ದೂರು ನೀಡಿದ್ದಾರೆ. ಇಲ್ಲಿಂದ ಮಿಕ್ಸಿ, ಮೂರು ಜಾರು, ಎರಡು ಕುಕ್ಕರ್, ಒಂದು ಸೌಂಡ್ ಬಾಕ್ಸ್ ಹಾಗೂ ಇತರ ಪಾತ್ರೆ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ಮೊನ್ನೆ ಸಂಜೆ 3.30 ರ ವೇಳೆ ಸಹಾಯಕಿ ರಮಣಿ ಅಂಗನವಾಡಿ ಮುಚ್ಚಿ ತೆರಳಿದ್ದರು. ನಿನ್ನೆ ಬೆಳಿಗ್ಗೆ ತಲುಪುವಾಗ ಅಂಗನವಾಡಿಯ …

ಪಂಚಾಯತ್ ಚುನಾವಣೆಯ ಬಳಿಕ ನಾಲ್ಕು ಆಡಳಿತ ಸಮಿತಿ ಸಭೆಯಲ್ಲಿ ಭಾಗವಹಿಸದ ಪಂ. ಸದಸ್ಯ

ಕಾಸರಗೋಡು: ಪಂಚಾಯತ್ ಚುನಾವಣೆಯ ಬಳಿಕ ನಡೆದ ನಾಲ್ಕು ಪಂಚಾಯತ್ ಬೋರ್ಡ್ ಸಭೆಗಳಲ್ಲೂ ಭಾಗವಹಿಸದ ಓರ್ವ ಪಂಚಾಯತ್ ಸದಸ್ಯ! ಎಣ್ಮಕಜೆ ಪಂಚಾಯತ್‌ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪಂಚಾಯತ್‌ನ ಸಿಪಿಎಂ ಸದಸ್ಯ ಸುಧಾಕರ ಪಂಚಾಯತ್ ಸದಸ್ಯನಾದ ಬಳಿಕ ಕರ್ನಾಟಕದ ಓರ್ವ ವೈದ್ಯರ ಪ್ರಮಾಣಪತ್ರ ಹಾಜರುಪಡಿಸಿ ಸಭೆಯಲ್ಲಿ ಭಾಗವಹಿಸದೆ ವಿವಾದಗಳೆಡೆಯಲ್ಲಿ ಮುಳುಗಿರುವುದಾಗಿ ನಿನ್ನೆ ನಡೆದ ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ಆರೋಪಿಸಲಾಗಿದೆ. ಮಾತ್ರವಲ್ಲ ಸುಧಾಕರ  ನೀಡಿದ ವೈದ್ಯಕೀಯ ಪ್ರಮಾಣಪತ್ರ ಅನುಸಾರ ಆ ರೀತಿಯ ಓರ್ವ ಡಾಕ್ಟರ್ ಕರ್ನಾಟಕದಲ್ಲಿ ಇದ್ದಾರೆಯೋ ಎಂಬ …

ಅಸೌಖ್ಯ: ಕಾಂಗ್ರೆಸ್ ಕಾರ್ಯಕರ್ತ ಮೃತ್ಯು

ನೀರ್ಚಾಲು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ ಪಟ್ಟರು. ಮಾನ್ಯ ಲಕ್ಷ್ಯಂವೀಡು ನಿವಾಸಿ ದಿವಂಗತರಾದ ಗುರುವ -ಮಾಣಿಕ್ಕ ದಂಪತಿ ಪುತ್ರ ವಿಶ್ವನಾಥ (46) ಮೃತಪಟ್ಟ ಯುವಕ. ಕೆಮ್ಮು ಹಾಗೂ ಉಸಿರಾಟ ತೊಂದರೆಯಿಂ ದಾಗಿ ಹಲವು ತಿಂಗಳುಗಳ ಕಾಲ ಚಿಕಿತ್ಸೆಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಸಾವು ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತನಾದ ವಿಶ್ವನಾಥ ಅವಿವಾಹಿತನಾಗಿದ್ದಾರೆ. ಮೃತರು ಸಹೋದರರಾದ ರಾಮಚಂದ್ರ, ಆನಂದ, ಶಂಕರ, ಸಂಜೀವ, ಸಹೋ ದರಿಯರಾದ ಕಮಲ, ಲೀಲಾವತಿ ಹಾಗೂ …

ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಂಟ್ವಾಳ ನಿವಾಸಿ ಸೆರೆ: ಬಂಧಿತ ಹಲವು ಪ್ರಕರಣಗಳ ಆರೋಪಿ

ಕುಂಬಳೆ:  ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಂಟ್ವಾಳ ನಿವಾಸಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ನಾಫಿಕೊಂಬ ಬಂಟ್ವಾಳ ಜೈನರಪೇಟೆ ನಿವಾಸಿ ಮೊಹಮ್ಮದ್ ಬಶೀರ್ ಎ.ಜೆ(38) ಬಂಧಿತ ವ್ಯಕ್ತಿ. ನಿನ್ನೆ ಶಿರಿಯಾ ಗ್ರಾಮದ ಮುಟ್ಟಂ  ರೈಲ್ವೇ ಗೇಟ್ ಬಳಿ ಶಂಕಾಸ್ಪದ ರೀತಿಯಲ್ಲಿ ಈತ ಪತ್ತೆಯಾಗಿದ್ದಾನೆಂದೂ ಅದರಂತೆ ಆತನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನು  ಬಂಟ್ವಾಳದಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನಲ್ಲದೆ ಕಣ್ಣೂರಿನಲ್ಲಿ ಇತ್ತೀಚೆಗೆ ಸೆರೆಗೀಡಾದ ಕಳವು ಆರೋಪಿಗಳ ತಂಡದಲ್ಲಿ ಒಳಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ವಸತಿಗೃಹದಲ್ಲಿ ಯುವತಿ ಕೊಲೆಗೀಡಾದ ಸ್ಥಿತಿಯಲ್ಲಿ ಜೊತೆಗಾರ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪಯ್ಯನ್ನೂರು: ಪರಶ್ಶಿನಿಕಡವು ವಸತಿಗೃಹದಲ್ಲಿ ಯುವತಿ ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಚೆರುಕುನ್ನ್ ಅಯ್ಯೋತ್ ಕೊವ್ವುಮ್ಮಲ್ ಹೌಸ್‌ನ ದಿ| ಕೆ. ಸುರೇಶ್‌ರ ಪತ್ನಿ ಕೆ. ಸೀಮ (45) ಕೊಲೆಗೀಡಾದ ಯುವತಿ. ಇವರ ಜೊತೆಯಲ್ಲಿ ಕೊಠಡಿ ಪಡೆದ ಅಯ್ಯೋತ್ ಕಡೆಲ್‌ಪರಂಬಿಲ್ ಹೌಸ್‌ನ ವಿಜಯನ್‌ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಇಂದು ಬೆಳಿಗ್ಗೆ ಮಾಟುಲ್ ಟೆನ್ತ್ ಸ್ಟ್ರೀಟ್ ಬಳಿಯ ಮರದಲ್ಲಿ ಮೃತದೇಹ ಕಂಡು ಬಂದಿದೆ.  ವಸತಿಗೃಹದಲ್ಲಿ ಕೊಲೆಗೈದ ಬಳಿಕ ಹೊರಗಿನಿಂದ ಬಾಗಿಲನ್ನು ಮುಚ್ಚಿ ಈತ ಪರಾರಿಯಾಗಿರ ಬೇಕೆಂದು ಶಂಕಿಸಲಾಗಿದ್ದು, ಈತನ …

ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಜನಪರ ಹೋರಾಟ ಕಾರಣ- ಎಕೆಎಂ ಅಶ್ರಫ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಬೂತ್ ಮುಚ್ಚುಗಡೆಗೊಳಿಸಿದ್ದು ಜನಪರ ಹೋರಾಟದ ಫಲವಾಗಿ ಎಂದು ಶಾಸಕ ಎಕೆಎಂ ಅಶ್ರಫ್ ಸುದ್ಧಿಗೋಷ್ಠಿಯಲ್ಲಿ ಹಕ್ಕು ಮಂಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು ಎಲ್ಲಾ ರೀತಿಯಲ್ಲೂ ಕಾಸರಗೋಡಿನ ಜನರು ಸ್ವಾಗತಿಸಿದ್ದರು. ಟೋಲ್ ಸಂಗ್ರಹಕ್ಕೆ ಯಾರೂ ವಿರೋಧಿಗಳಲ್ಲ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹವನ್ನು ಎದುರಿಸಲಾಗಿದೆ. ಈ ಬಗ್ಗೆ ಎಲ್ಲಾ ಬಾಗಿಲುಗಳನ್ನು ಬಡಿಯಲಾಗಿದೆ. ಯಾವುದೇ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಜನಪರ ಕ್ರಿಯಾ ಸಮಿತಿ ರೂಪೀಕರಿಸಲಾಗಿದೆ. ಸಮಿತಿಯ ಪ್ರಥಮ ಸಭೆಯಲ್ಲಿ ಬಿಜೆಪಿ ಸಹಿತದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು …

ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಬಿಜೆಪಿ ಕಾರಣ- ಎಂ.ಎಲ್. ಅಶ್ವಿನಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಪ್ಲಾಜಾವನ್ನು ಮುಚ್ಚುಗಡೆಗೊಳಿಸಿದ್ದು ಬಿಜೆಪಿ ನಡೆಸಿದ ನಿಶ್ಯಬ್ದ ಚಟುವಟಿಕೆಗಳ ಫಲವಾಗಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹಕ್ಕು ಮಂಡಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಿನ್ನೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಶ್ವಿನಿ ನಿಲುವು ಸ್ಪಷ್ಟಪಡಿಸಿದ್ದಾರೆ. ಮಂಡಲ ಅಧ್ಯಕ್ಷರಿಂದ ಆರಂಭಿಸಿ ಬಿಜೆಪಿಯ ರಾಷ್ಟ್ರೀಯ ನಾಯಕತ್ವದವರೆಗಿರು ವವರು ಮಧ್ಯ ಪ್ರವೇಶಿಸಿದ ಫಲವಾಗಿ ಟೋಲ್ ಪ್ಲಾಜಾವನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಮುಷ್ಕರ ನಡೆಸಿಯೋ, ಕೇಸು ದಾಖಲಿಸಿಯಲ್ಲ ಈ ವಿಷಯದಲ್ಲಿ ವ್ಯವಹರಿಸಬೇಕಾಗಿರುವುದು. ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದರ …

ಕಾಂಗ್ರೆಸ್ ಹಿರಿಯ ಕಾರ್ಯಕರ್ತ ನಿಧನ

ಉಪ್ಪಳ: ಜೋಡುಕಲ್ಲು ಪಟ್ಲ ನಿವಾಸಿ, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಮೊಹಮ್ಮದ್ ಪಟ್ಲ (68) ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಕಯ್ಯಾರು ವಾರ್ಡ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಹಸೀನಾ, ಶಸೀನಾ, ನೌಶಾದ್ (ಪೈವಳಿಕೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ), ನೌಫಲ್, ರೆಹಾನಾ, ರಂಸೀನ, ಶಂಸೀನ, ರಿಶಾನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ ರೈ …

ನಾಗರಿಕರಿಗೆ ಕಿರಿಕಿರಿ ರಾತ್ರಿ 10ರ ಬಳಿಕ ಧ್ವನಿವರ್ದಕ ಬಳಕೆ ವಿರುದ್ಧ ಪೊಲೀಸರಿಂದ ಕ್ರಮಕ್ಕೆ ಚಾಲನೆ

ಮಂಜೇಶ್ವರ: ಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಕ್ರಮಕೈಗೊಳ್ಳಲು ಪೊಲೀಸರು üತೀರ್ಮಾನಿಸಿದ್ದಾರೆ. ಈ ಹಿಂದೆಯೇ ಈ ಆದೇಶವಿದ್ದರೂ ಯಾರೂ ಪಾಲಿಸು ತ್ತಿರಲಿಲ್ಲ. ಆದರೆ ಅಪರಿಮಿತ ಶಬ್ದದಿಂದ ಕಿರಿ ಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೂರು ವ್ಯಾಪಕಗೊಂಡಿರುವುದರಿAದ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಅದನ್ನು ವಶಪಡಿಸಿ ಅವರ ವಿರುದ್ದ ಕ್ರಮಕೈಗೊಳ್ಳಲು ಎಲ್ಲಾ ಠಾಣೆಗಳಿಗೆ ಆದೇಶ ನೀಡಲಾಗಿದೆ. ಇದರಂತೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, …