ವಿ.ಡಿ. ಸತೀಶನ್ ನೇತೃತ್ವದ ನವಯುಗ ಯಾತ್ರೆಗೆ ಕುಂಬಳಯಿಂದ ನಾಳೆ ಚಾಲನೆ

ಕಾಸರಗೋಡು: ಕೇರಳವನ್ನು ಮರುಗಳಿಸಿ ಎಂಬ ಸಂದೇಶದೊಂದಿಗೆ ಯುಡಿಎಫ್ ನೇತೃತ್ವದಲ್ಲಿ ವಿರೋಧಪಕ್ಷ ನಾಯಕ ವಿ.ಡಿ.ಸತೀಶನ್ ನಾಯಕತ್ವದಲ್ಲಿ ನಡೆಯುವ ನವಯುಗ ಯಾತ್ರೆಗೆ  ನಾಳೆ ಸಂಜೆ 4 ಗಂಟೆಗೆ ಕುಂಬಳೆ ಪೇಟೆಯಿಂದ ಚಾಲನೆ ದೊರಕಲಿದೆ. ಈ ಯಾತ್ರೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣುಗೋಪಾಲ್ ಉದ್ಘಾಟಿಸುವರು. ಯುಡಿಎಫ್‌ನ ಎಲ್ಲಾ ಘಟಕ ಪಕ್ಷಗಳ ನೇತಾರರು ಇದರಲ್ಲಿ ಭಾಗವಹಿಸುವರೆಂದು ಈ ಪ್ರಯುಕ್ತ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಸಂಚಾಲಕ ಗೋವಿಂದನ್ ನಾಯರ್ ಮೊದಲಾದವರು …

ಟೋಲ್ ಬೂತ್ ಹೋರಾಟಕ್ಕೆ ಸಂದ ಜಯ: ಯೂತ್ ಲೀಗ್‌ನಿಂದ ನಗರದಲ್ಲಿ ಮೆರವಣಿಗೆ

ಕಾಸರಗೋಡು: ಆರಿಕ್ಕಾಡಿಯ ಟೋಲ್ ಬೂತ್ ನಿಲುಗಡೆಗೊಳಿಸು ವುದಕ್ಕೆ ಬೇಕಾಗಿ ಹೋರಾಟ ನಡೆಸಿದ ಶಾಸಕ ಎಕೆಎಂ ಅಶ್ರಫ್, ಮುಷ್ಕರ ಸಮಿತಿಗೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ನಗರಸಭಾ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ನಗರಸಭಾ ಅಧ್ಯಕ್ಷ ಮುಸಾಮಿಲ್ ಫಿರ್ದೋಸ್‌ನಗರ್, ಪ್ರಧಾನ ಕಾರ್ಯದರ್ಶಿ ಅನಸ್ ಕಂಡತ್ತಿಲ್, ಕೋಶಾಧಿಕಾರಿ ಸಫ್ವಾನ್ ಅಣಂಗೂರು, ಕಾರ್ಯದರ್ಶಿ ತಾಜು, ಎಂಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ನಾಫಿ …

ಇಲಿ ವಿಷಬಿದ್ದ ಲೋಟದಲ್ಲಿ ನೀರು ಕುಡಿದ ಗೃಹಿಣಿ ದಾರುಣ ಸಾವು

ಹೊಸದುರ್ಗ: ಇಲಿಯನ್ನು ಕೊಲ್ಲಲು ವಿಷ ಇರಿಸುವ ಮದ್ಯೆ ಅಚಾತುರ್ಯದಿಂದ ವಿಷ ಬಿದ್ದ ಲೋಟೆಯಲ್ಲಿ ನೀರು ಕುಡಿದ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ. ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪನತ್ತಡಿ, ಕೋಳಿಚ್ಚಾಲ್ ಮೊಟ್ಟಂಕೊಚ್ಚಿ ನಿವಾಸಿ ಬಿ.ಪಿ. ಶೋಭನ (53) ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜನವರಿ ೨೮ರಂದು ರಾತ್ರಿ ೯.೩೦ರ ವೇಳೆ ಇಲಿಯನ್ನು ಕೊಲ್ಲಲೆಂದು ವಿಷ ಇರಿಸಿದ್ದರು. ಈ ಮಧ್ಯೆ ಅಲ್ಪ ವಿಷ ಅಲ್ಲಿದ್ದ ಲೋಟೆಯೊಳಗ್ಗೆ ಬಿದ್ದಿತ್ತೆನ್ನಲಾಗಿದೆ. ಈ ವಿಷಯ ತಿಳಿಯದೆ ಶೋಭನಾ ಅದೇ ಗ್ಲಾಸ್‌ನಲ್ಲಿ ನೀರು ಸೇವಿಸಿರುವುದಾಗಿ …