ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ, ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಕಾಸರಗೋಡು:  ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿ ಯನ್ ಕಚೇರಿಯ ಉದ್ಘಾಟನೆ ಹಾಗೂ ಜನಪ್ರತಿನಿಧಿ ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.  ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ಕ್ಷೇತ್ರ ಸಮೀಪ ಯೂನಿಯನ್ ಕಚೇರಿಯನ್ನು ಯೋಗಂ ಇನ್‌ಸ್ಪೆಕ್ಟಿಂಗ್ ಆಫೀಸರ್ ಪಿ.ಟಿ. ಲಾಲು ಉದ್ಘಾಟಿಸಿ ಮಾತನಾಡಿದರು. ತಳಂಗರೆ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದ ಮಂಜು ಕಾರ್ನವರ್ ದೀಪ ಬೆಳಗಿಸಿದರು. ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಅಧ್ಯಕ್ಷ ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ …

ನಿರ್ಮಾಣ ಕಾರ್ಮಿಕರ ನಿವೃತ್ತಿ ಸವಲತ್ತು, ಪಿಂಚಣಿ ಲಭ್ಯಗೊಳಿಸಲು ಎಐಟಿಯುಸಿ ಒತ್ತಾಯ

ಮಂಜೇಶ್ವರ: ನಿರ್ಮಾಣ ಕಾರ್ಮಿಕರ ಒಕ್ಕೂಟ ಮಂಜೇಶ್ವರ ಮಂಡಲ ಸಮಾವೇಶ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗ ಣದಲ್ಲಿ ನಡೆಯಿತು. ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ ನಿಂದ 2025 ಎಪ್ರಿಲ್‌ನಿಂದ ಕಾರ್ಮಿ ಕರಿಗೆ ಲಭಿಸದ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾ ಯಿತು. ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಚಂದ್ರಶೇಖರ ಸಿಂತಾಜೆ ಅಧ್ಯಕ್ಷತೆ ವಹಿಸಿದರು. ಹಿರಿಯ ನಾಯಕ ಸಂಜೀವ ಶೆಟ್ಟಿಯವರನ್ನು ಒಕ್ಕೂಟದ ಜಿಲ್ಲಾ …