ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್ ಚಿನ್ನುಪಾಪು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ ; ಪೊಲೀಸ್ ತನಿಖೆ ಆರಂಭ
ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಆಗಿದ್ದ ಚಿನ್ನು ಪಾಪು ಯಾನೆ ಕೆ. ರೇಷ್ಮ (25)ರ ಅಕಾಲಿಕ ಅಗಲುವಿಕೆ ಯಿಂದ ಆಕೆಯ ಸಂಬಂಧಿಕರು, ಅಭಿಮಾನಿ ಗಳು ಹಾಗೂ ಹಿಂಬಾಲಕರಲ್ಲಿ ತೀವ್ರ ಶೋಕಸಾಗರ ಸೃಷ್ಟಿಯಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕಾಸರಗೋಡು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಚಿನ್ನುಪಾಪು ಯಾನೆ ರೇಷ್ಮ ನೇಣುಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಡಿಗೆ ಮನೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿತ್ತೆಂದು ಹೇಳಲಾಗುತ್ತಿದೆ. ಇದೇ ವೇಳೆ ರೇಷ್ಮಾರ ಸ್ನೇಹಿತ ಮಧೂರು ನಿವಾಸಿ ಸಂದೇಶ್ ತಲುಪಿ ಆಕೆಯನ್ನು …