49 ಗ್ರಾಂ ಎಂಡಿಎಂಎ ಪತ್ತೆ: ಕಾರು ಸಹಿತ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 49.14 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ  ಯುವಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಳ ಕೊಲ್ಲಂಗಾನದ ಮೊಹ ಮ್ಮದ್ ರಫೀಕ್.ಬಿ (39) ಬಂಧಿತ ಆರೋಪಿ.  ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಸಿ.ಆರ್. ಮೌಶಿಮ್ ನೇತೃತ್ವದ ಪೊಲೀಸರ ತಂಡ ವಿದ್ಯಾನಗರ ಸರಕಾರಿ ಕಾಲೇಜು ಬಳಿ   ನಿನ್ನೆ ಸಂಜೆ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ   ಸ್ವಿಫ್ಟ್ ಕಾರನ್ನು ತಡೆದು …

ಎರಿಯಾಕೋಟ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವಕ್ಕೆ ವ್ಯಾಪಾರಿ ವ್ಯವಸಾಯಿ ಸಮಿತಿಯಿಂದ ಹಸಿರುವಾಣಿ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಾಕೋಟ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ  ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ   ಸಮಿತಿ  ಮೊಗ್ರಾಲ್ ಪುತ್ತೂರು ಘಟಕ ತರಕಾರಿ ಹಾಗೂ ಧಾನ್ಯಗಳನ್ನು ನೀಡಿತು.  ಕ್ಷೇತ್ರ ಪದಾಧಿಕಾರಿಗಳು ವ್ಯಾಪಾರಿಗಳಿಗೆ ಸ್ವಾಗತ ನೀಡಿದರು. ವ್ಯಾಪಾರಿ ವ್ಯವಸಾಯಿ ಸಮಿತಿ ಜಿಲ್ಲಾ ಜೊತೆ ಕಾರ್ಯದರ್ಶಿ ರಿಯಾಸ್ ಚೌಕಿ, ಲೇಬರ್ ಡಿಪಾರ್ಟ್‌ಮೆಂಟ್ ಆಫೀಸರ್ ಅಬ್ದುಲ್ ಸಲಾಂ, ಏರಿಯಾ ಕಾರ್ಯದರ್ಶಿ  ಪ್ರಕಾಶನ್,  ಮರ್ಕಂಟೈಲ್ ಸೊಸೈಟಿ ಕಾರ್ಯದರ್ಶಿ ಕುಂಞಿರಾಮನ್,ವ್ಯಾಪಾರಿ ವ್ಯವಸಾಯಿ ಸಮಿತಿ ಘಟಕ ಅಧ್ಯಕ್ಷ ವಿಜಯನ್, ಮಹಿಳಾ ವಿಂಗ್ ಕಾರ್ಯದರ್ಶಿ ಜಾನಕಿ, …

ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರ

ಮಾನ್ಯ: ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ ನಡೆಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು, ಇಂಡ್ಯನ್ ಕ್ಯಾನ್ಸರ್ ಸೊಸೈಟಿ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಡಾ| ಕುಮಾರ್ ಎಸ್. ವಶಿಷ್ಠ, ಡಾ| ಆಯಿಷಾ ರೋಗಿಗಳ ತಪಾಸಣೆ ನಡೆಸಿದರು. ವಿಷ್ಣುಪ್ರಸಾದ್ ಐ, ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪ ಸ್ಥಿತರಿದ್ದರು. ಫಾ| ರಿತೇಶ್ ಎ.ಎಲ್. ರೋಡ್ರಿಗಸ್ ಮಾತನಾಡಿದರು.