ತೂಮಿನಾಡು ಕೊಲೆ ಪ್ರಕರಣ:  ಆರೋಪಿಯನ್ನು ಕತ್ತಿ ಖರೀದಿಸಿದ ಅಂಗಡಿ, ಮನೆಗೆ ತಂದು ಮಾಹಿತಿ ಸಂಗ್ರಹ; ಮಹಿಳೆಯರಿಂದ ಪ್ರತಿಭಟನೆ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಪುತ್ರಿ ಹಾಗೂ ಪತ್ನಿಯ ಸಹೋದರಿಯ ಪತಿಯನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಉಮ್ಮರ್ ಫಾರೂಕ್‌ನನ್ನು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದ್ದು, ಆತನನ್ನು ಘಟನೆ ನಡೆದ ಸ್ಥಳಕ್ಕೆ ತಂದು ಹೇಳಿಕೆ ಸಂಗ್ರಹ ಪೂರ್ತಿಗೊಂಡಿತು. ಇಂದು ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದೆಂದು ತನಿಖಾ ಅಧಿಕಾರಿ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಿಳಿಸಿದ್ದಾರೆ.  ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಐದು ದಿನಕ್ಕೆ ತನಿಖಾ ಅನ್ವಯ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ …

ಉದ್ಯಮಿ, ಬಿಜೆಪಿ ಮುಖಂಡ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ: ಸ್ಫೋಟದಿಂದ ಕಾರಿಗೆ ಹಾನಿ

ಕುಂಬಳೆ: ಬಿಜೆಪಿ ಮುಖಂಡ ಹಾಗೂ ಉದ್ಯಮಿ ಆಗಿರುವ ಕುಂಬಳೆಯ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ಘಟನೆ ನಡೆದಿದೆ. ವಿಕ್ರಮ್ ಪೈಯ ಪೊಸತ್ತಡ್ಕದಲ್ಲಿರುವ ಆಗ್ರೋ ಡೈರಿ ಫಾರ್ಮ್‌ಗಿರುವ ಕಾಂಕ್ರೀಟ್ ರಸ್ತೆಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯುಂಟಾಗಿದೆ. ಟಯರ್ ನಾಶವಾಗಿದೆ. ಕಾರಿನ ಅಡಿ ಭಾಗ ನಜ್ಜುಗುಜ್ಜಾಗಿದೆ. ಬೆಳಿಗ್ಗೆ ಮನೆಯಿಂದ ಫಾರ್ಮ್‌ಗಿರುವ ಪ್ರಯಾಣ ಮಧ್ಯೆ ಫಾರ್ಮ್‌ನ ಬಳಿಗೆ ತಲುಪುವಾಗ ಕಾರಿನ ಚಕ್ರ ಹತ್ತಿದಾಗ ಸ್ಫೋಟ ಸಂಭವಿ ಸಿರುವುದಾಗಿ  ಹೇಳಲಾಗುತ್ತಿದೆ. ಅತ್ಯುಘ್ರ ಶಬ್ದದಿಂದ ಒಡಗೂಡಿ ಸ್ಫೋಟ ಸಂಭವಿಸಿದ್ದು, ಪರಿಸರವಾಸಿಗಳು ಓಡಿ ಬಂದಾಗ …

ಪರಸ್ಪರ ಜಗಳ ಮೂರು ಮಂದಿ ಸೆರೆ

ಕುಂಬಳೆ: ಕಯ್ಯಾರು ಗ್ರಾಮದ ಚೇವಾರು ಎಂಬಲ್ಲಿ ನಿನ್ನೆ ಪರಸ್ಪರ ಜಗಳವಾಡುತ್ತಿದ್ದ ಏಳು ಮಂದಿ ಪೈಕಿ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬಂಬ್ರಾಣ ಬಾಯಿಕಟ್ಟೆ ಹೌಸ್‌ನ ಮೊಹಮ್ಮದ್ ಜಾಸಿಂ ಸಿ.ಎ (20), ಬಂಬ್ರಾಣ ಬತ್ತೇರಿಯ ಹಮೀದ್ ಅಲಿ ತಾಹಿರ್ (22) ಮತ್ತು  ಬಂಬ್ರಾಣ ಉಳುವಾರಿನ ಅಬ್ದುಲ್ ಜಲೀಲ್ (19) ಎಂಬಿವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತೀವ ಭದ್ರತೆ ಹೊಂದಿದ ಸೇನಾ ಶಿಬಿರದಿಂದ 2 ಕೋಟಿ ರೂ. ಮೌಲ್ಯದ ಆನೆ ದಂತ ಕಳವು

ತಿರುವನಂತಪುರ: ಅತೀವ ಭದ್ರತೆ ಹೊಂದಿರುವ ತಿರುವನಂತಪುರದ ಪಾಂಙೋಟ್ ಸೇನಾ ಶಿಬಿರದಿಂದ ಸುಮಾರು 2 ಕೋಟಿ ರೂ. ಮೌಲ್ಯವಿರುವ ಆನೆ ದಂತಗಳನ್ನು ಕಳವುಗೈದ ಘಟನೆ ನಡೆದಿದೆ. ಪ್ರಸ್ತುತ ಸೇನಾ ಶಿಬಿರದ ಆಫೀಸರ್ಸ್ ಕ್ಲಬ್‌ನಲ್ಲಿ ಈ ಎರಡು ಆನೆದಂತಗಳನ್ನು ಭದ್ರತಾ ಕೊಠಡಿಯಲ್ಲಿರಿಸಲಾಗಿತ್ತು. 1929 ರಲ್ಲಿ ಭಾರತೀಯ ಸೇನಾ ಪಡೆಗೆ ಹಸ್ತಾಂತರಿಸಿದ ಆನೆ ದಂತ ಇದಾಗಿತ್ತು.  ಇದೂ ಸೇರಿದಂತೆ ಹಲವು ಭಾರೀ ಮೌಲ್ಯದ ಸಾಮಗ್ರಿಗಳನ್ನು  ಪ್ರಸ್ತುತ ಶಿಬಿರದ ಸ್ಟ್ರಾಂಗ್ ರೂಂನಲ್ಲಿರಿಸಲಾಗಿತ್ತು. ಮೊನ್ನೆ ರಾತ್ರಿ ಈ ಶಿಬಿರದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊ ಳ್ಳಲಾಗಿತ್ತು. ಇದರಲ್ಲಿ …

ವಿದ್ಯುತ್ ತಂತಿಗೆ ಕಬ್ಬಿಣದ ಸರಳು ತಾಗಿ ಯುವಕನಿಗೆ ಶಾಕ್; ಆಸ್ಪತ್ರೆಯಲ್ಲಿ

ಕಾಸರಗೋಡು: ಕಾಲ್ಚೆಂಡಾಟ ಸ್ಪರ್ಧೆ ಮುಗಿದ ಬಳಿಕ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂಚರಿಸುವ ಮಧ್ಯೆ ಕಬ್ಬಿಣದ ಸರಳು ಹೈಟೆನ್ಶನ್ ವಿದ್ಯುತ್ ತಂತಿಗೆ ತಾಗಿ ಓರ್ವನಿಗೆ ಶಾಕ್ ತಗಲಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊವ್ವಲ್‌ನ ಫಯಾಸ್ (18)ಗೆ ಶಾಕ್ ತಗಲಿದ್ದು, ಆಸ್ಟರ್ ಮಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ದುರಂತ ಸಂಭವಿಸಿದೆ. ಚೆಟ್ಟಂಗುಳಿಯಲ್ಲಿ ಕಳೆದ ವಾರ ಕಾಲ್ಚೆಂಡಾಟ ಸ್ಪರ್ಧೆ ಇತ್ತೆನ್ನಲಾಗಿದೆ. ಸ್ಪರ್ಧೆಯಂಗವಾಗಿ ಸ್ಥಾಪಿಸಿದ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂತರಿಸುವ …

ಪುಳ್ಕೂರು ಆರೋಗ್ಯಕೇಂದ್ರದಿಂದ ಕೋಪರ್ ಟಿ, ಸ್ಟೆಥೋಸ್ಕೋಪ್ ಕಳವು

ಮಧೂರು: ಪುಳ್ಕೂರು ಆರೋಗ್ಯ ಕೇಂದ್ರದಿಂದ ಕಳವು ನಡೆಸಲಾಗಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕೋಪರ್ ಟಿ, ಸ್ಟೆಥೋಸ್ಕೋಪ್, ಇಂಡಕ್ಷನ್ ಕುಕ್ಕರ್ ಮೊದಲಾದ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ಆರೋಗ್ಯ ಕೇಂದ್ರ ನೌಕರ ಎಸ್.ಎಲ್. ಅಜೀಶ್‌ಖಾನ್ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫೆಬ್ರವರಿ 9ರಂದು ರಾತ್ರಿ 8 ಗಂಟೆ ಮತ್ತು ಫೆ. 10ರಂದು ಬೆಳಿಗ್ಗೆ 9 ಗಂಟೆ ಮಧ್ಯೆ ಕಳವು ನಡೆದಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಕೋಪರ್ ಟಿ ಹಾಗೂ ಸ್ಟೆಥೋಸ್ಕೋಪ್ ಕಳವು ನಡೆಸಿರುವುದು ಪೊಲೀಸ್ …

ವೃದ್ದೆ ವಿರುದ್ಧ ಕೊಲೆ ಬೆದರಿಕೆ : ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಸೆರೆ

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಮನೆಗೆ ನುಗ್ಗಿ ಬೆದರಿಸಿರುವುದಾಗಿ ವೃದ್ದೆಯಾದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೈವಳಿಕೆ ಕಳಾಯಿ ನಿವಾಸಿ ಬಾಲಕಬೇಬಿ(82) ನೀಡಿದ ದೂರಿನಂತೆ ಪುತ್ರ ಜಯ ಕೆ. ಅಲಿಯಾಸ್ ಜಯರಾಂ ನೋಂಡ (54)ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬೇಬಿಯ ಇನ್ನೋರ್ವ ಪುತ್ರ ಪದ್ಮನಾಭ ಎಂಬವರನ್ನು  ಕೊಲೆಗೈದ ಪ್ರಕರಣದಲ್ಲಿ ಜಯರಾಮ್ ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಸಾಕ್ಷಿಯಾದ ತಾಯಿ ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿ ಹೇಳಬೇಕೆಂದೂ, ಇಲ್ಲದಿದ್ದರೆ ಕೊಲೆಗೈಯ್ಯುವುದಾಗಿಯೂ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರ ಜೊತೆ ಸೊತ್ತಿನಲ್ಲಿ ಪಾಲು …

ಮಂಜೇಶ್ವರದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಬೃಹತ್ ಗಾಂಜಾ ಬೇಟೆ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗ್ರಾಂ ಗಾಂಜಾ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಮಹಾರಾಷ್ಟ್ರ ನಿವಾಸಿಯಾದ ರಾಕೇಶ್ ಪ್ರಕಾಶ್ ಡೋಗ್ರಾ (37)ನನ್ನು ಸೆರೆ ಹಿಡಿಯಲಾಗಿದ್ದು, ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈತ ಪ್ರಯಾಣಿಸುತ್ತಿದ್ದನು. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಗಾಂಜಾ  ವಶಪಡಿಸಲಾಗಿದೆ.  ಅಬಕಾರಿ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿನ್ ಕುಮಾರ್ ಹಾಗೂ ತಂಡ ನಡೆಸಿದ ತಪಾಸಣೆಯಲ್ಲಿ ಟ್ರೋಲಿ ಬ್ಯಾಗ್‌ನಲ್ಲಿ ಸಾಗಿಸಿದ …

ಕಂಚಿಕಟ್ಟೆ-ಕೊಡ್ಯಮ್ಮೆ ಸೇತುವೆ ಪುನರ್‌ನಿರ್ಮಾಣ: ನಬಾರ್ಡ್ ತಂಡದಿಂದ ಸ್ಥಳ ಸಂದರ್ಶನ

ಕುಂಬಳೆ: ಜೀರ್ಣಗೊಂಡು ಹಾನಿಯಾದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಸಂಚಾರ ನಿಷೇಧಿಸಿದ ಕುಂಬಳೆ ಪಂಚಾಯತ್‌ನ ಕಂಚಿಕಟ್ಟೆ – ಕೊಡ್ಯಮ್ಮೆ ಸೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ನಬಾರ್ಡ್‌ನ ಜಿಲ್ಲೆಯ ಹಿರಿಯ ಅಧಿಕಾರಿ ಶರಣ್, ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಮೈನರ್ ಇರಿಗೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಜುನನ್ ಇ.ಕೆ., ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲನ್ ಟಿ., ಅಸಿಸ್ಟೆಂಟ್ ಇಂಜಿನಿಯರ್ ರಾಘವನ್ ಕೆ. ಮೊದಲಾದವರು ಸ್ಥಳ ಸಂದರ್ಶಿಸಿದರು. ಈ ವೇಳೆ ಬ್ಲೋಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಶೆಟ್ಟಿ, ನಸೀಮ ಕುಂಬಳೆ, ಪಂಚಾಯತ್ ಉಪಾಧ್ಯಕ್ಷ …

ಅಸೌಖ್ಯ: ನಿಧನ

ಬೇಳ: ಮೂಲತಃ ಅಣಂಗೂರು ನಿವಾಸಿಯಾಗಿದ್ದು, ಪ್ರಸ್ತುತ ಬೇಳ ದರ್ಭೆತ್ತಡ್ಕದಲ್ಲಿ ವಾಸವಾಗಿದ್ದ ಮೋಹನ ಕೆ. (61) ನಿಧನ ಹೊಂದಿದರು. ಇವರು ಈ ಮೊದಲು  ಕಾಸರಗೋಡಿನಲ್ಲಿ ಆಟೋ ಚಾಲಕನಾಗಿದ್ದರು. ಬಳಿಕ ಲಾಟರಿ ಮಾರಾಟ ಕೆಲಸ ನಡೆಸಿಕೊಂಡಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಸವಿತ, ಮಕ್ಕಳಾದ ಅಮಿತ್, ಸುಮಿತ್, ಅಂಜಿತ, ಸಹೋದರರಾದ ಸುಬ್ಬ ಕೆ, ನಾಗೇಶ, ಸತೀಶ್, ಸಹೋದರಿಯರಾದ ಲೀಲ, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.