ಪ್ರಯಾಣಿಕರೆಲ್ಲ ಇಳಿದರೂ 10 ತಿಂಗಳ ಹಿಂದೆ ಜೈಲಿನಿಂದ ಹೊರ ಬಂದ ವ್ಯಕ್ತಿ ಮಾತ್ರ ಬಾಕಿ: ಕುಂಡಂಗುಳಿಯಲ್ಲಿ ದುರಂತ ಘಟನೆ
ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ವೃದ್ದ ಕುಸಿದು ಬಿದ್ದು ಮೃತಪಟ್ಟರು. ಮೂನಾಡ್ ಪೇತಾಳಂಕಯದಲ್ಲಿ ವಾಸಿಸುವ ಎಂ.ಕೆ. ರವೀಂದ್ರನ್ (65) ಕುಸಿದು ಬಿದ್ದು ಮೃತಪಟ್ಟವರು. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಪೊಯಿನಾಚಿಯಿಂದ ಕುಂಡಂಗುಳಿಗಿರುವ ಖಾಸಗಿ ಬಸ್‌ನಲ್ಲಿ ಪೆರ್ಲಡ್ಕ ಬಸ್ ನಿಲ್ದಾಣದಿಂದ ರವೀಂದ್ರನ್ ಬಸ್‌ಗೇರಿದ್ದರು. ಕೊನೆಯ ಸ್ಟೋಪ್ ಆದ ಕುಂಡಂಗುಳಿಗೆ ಬಸ್ ತಲುಪಿದಾಗ ಇತರ ಪ್ರಯಾಣಿಕರೆಲ್ಲ ಇಳಿದು ಹೋದರೂ ಇವರು ಮಾತ್ರ ಇಳಿದಿರಲಿಲ್ಲ. ಸೀಟಿನಲ್ಲಿ ಕುಳಿತಿದ್ದ ಇವರನ್ನು ನಿರ್ವಾಹಕ ತಟ್ಟಿ ಕರೆದರು. ಆದರೂ ಮಿಸುಕಾಡಲಿಲ್ಲ. ಶಂಕೆ ತೋರಿ …