ಕೇರಳದಲ್ಲಿ ಗಂಟೆಗೆ 160 ಕಿ.ಮೀ. ವೇಗದ ಏಳು ರೈಲು ಯೋಜನೆಗೆ ಅನುಮತಿ

ತಿರುವನಂತಪುರ: ಕೇರಳದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಏಳು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಇದರಂತೆ ಶೊರ್ನೂರು-ಮಂಗಳೂರು (307 ಕಿ.ಮೀ), ಕೊಯಂಬತ್ತೂರು-ಶೊರ್ನೂರು (99 ಕಿ.ಮೀ), ಶೊರ್ನೂರು-ಎರ್ನಾಕುಳಂ (106 ಕಿ.ಮೀ), ಎರ್ನಾಕುಳಂ-ಕಾಯಂಕುಳಂ (ಕೋಟ್ಟಯಂ ಮೂಲಕ 115 ಕಿ.ಮೀ), ಕಾಯಂಕುಳಂ-ತಿರುವನಂತಪುರ (105 ಕಿ.ಮೀ), ತಿರುವನಂತಪುರ-ನಾಗರ್‌ಕೋವಿಲ್  (76 ಕಿ.ಮೀ) ಮತ್ತು ಪೊದಾವೂರ್- ಅಂಬಲಪುಳ ಎಂಬೀ ರೈಲು ಅಭಿವೃದ್ಧಿ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸಲಾಗುದೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ …

2027ರಿಂದ ಒಂದನೇ ತರಗತಿ ಸೇರ್ಪಡೆ ಪ್ರಾಯಮಿತಿ ಆರು ವರ್ಷ

ತಿರುವನಂತಪುರ: 2027-28ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರ್ಪಡೆಗೊಳಿಸುವ ವಯೋಮಿತಿ ಯನ್ನು ಆರು ವರ್ಷವಾಗಿ ನಿಗದಿಪಡಿ ಸಲಾಗಿದೆ. ಇದರಂತೆ ಆರು ವರ್ಷ ಪೂರ್ತಿಯಾದ ಮಕ್ಕಳಿಗೆ ಮಾತ್ರವೇ ಇನ್ನು ಒಂದನೇ ತರಗತಿಗೆ ಪ್ರವೇಶ ಲಭಿಸಲಿದೆ. ಈ ಹೊಸ ಕ್ರಮ ಜ್ಯಾರಿಗೊಳ್ಳುವ ವೇಳೆ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾ ರ್ಥಿಗಳ ಸಂಖ್ಯೆಯಲ್ಲಿ  ಶೇ. ೪೫ರಷ್ಟು  ಕುಸಿತ ಉಂಟಾಗುವ ಸಾಧ್ಯತೆ ಇದೆಯೆಂದು  ಲೆಕ್ಕಹಾಕಲಾಗಿದೆ. ಮಾತ್ರವಲ್ಲ ಅಧ್ಯಾಪಕರ ಖಾಯಂ ನೇಮಕಾತಿಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದನೇ …

ಎಡರಂಗದ ಮಂಜೇಶ್ವರ ಮಂಡಲ ಅಭಿವೃದ್ಧಿ ಮುನ್ನಡೆ ಜಾಥಾ ಕಾಟುಕುಕ್ಕೆಯಿಂದ ಆರಂಭ

ಉಪ್ಪಳ: ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಅಭಿವೃದ್ದಿ ಮುನ್ನಡೆ ಜಾಥಾ ನಿನ್ನೆ ಸಂಜೆ ಕಾಟು ಕುಕ್ಕೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿ ದರು. ಜಾಥಾ ಇಂದು ಬೆಳಿಗ್ಗೆ ಪೆರ್ಲದಿಂದ ಆರಂಭಗೊAಡಿದ್ದು, ವಿವಿಧ ಕೇಂದ್ರಗಳಲ್ಲಿ ಪರ್ಯಟನೆ ನಡೆಸಿ ನಾಳೆ ಸಂಜೆ 6ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾರೋಪೆಗೊಳ್ಳಲಿದೆ. ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಸಮಾರೋಪ ಉದ್ಘಾಟಿಸುವರು. ಮುಖಂಡರಾದ ಕೆ.ಆರ್ ಜಯಾನಂದ, ಜಯರಾಮ ಬಲ್ಲಂಗುಡೇಲು, ಸಿ.ಎ ಝು ಬೈರ್, ಅಹಮ್ಮದ್ ನೇತೃತ್ವ ನೀಡುವರು.

ಬಿಜೆಪಿ ವಿರುದ್ಧ ಐಕ್ಯರಂಗದಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ವಿಧಾನಸಭಾ ಮಂಡಲದಲ್ಲಿ ಬಿಜೆಪಿ ಕೆಲವು ಅಧಿಕಾರಿಗಳ ಜೊತೆ ಸೇರಿಕೊಂಡು ಒಂದು ಸಮುದಾಯದ ಮತಗಳನ್ನು ವ್ಯಾಪಕವಾಗಿ ತಿರಸ್ಕರಿಸುತ್ತಿದೆ ಎಂದು ಶಾಸಕ ಎಕೆಎಂ ಅಶ್ರಫ್ ಆರೋಪಿಸಿ ದ್ದಾರೆ. ಫಾರ್ಮ್ 7 ದುರುಪಯೋಗ ಮಾಡಿ  ನಕಲಿ ದೂರು ನೀಡುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಸ್ವೀಕರಿಸಬೇಕೆಂದು ಆಗ್ರಹಿಸಿ ಯುಡಿಎಫ್ ವಿಧಾನಸಭಾ ಮಂಡಲ ಸಮಿತಿ ಇಲೆಕ್ಟ್ರಲ್ ರಿಜಿಸ್ಟ್ರೇ ಶನ್ ಆಫೀಸರ್‌ಗೆ ದೂರು ನೀಡಿದೆ.

ಮಂಜೇಶ್ವರದಲ್ಲಿ ವ್ಯಾಪಕ ಮುಸ್ಲಿಂ ಲೀಗ್ ನಕಲಿ ಮತ ಸೇರ್ಪಡೆ ಬಗ್ಗೆ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದಲ್ಲಿ ಮತದಾರರ ಯಾದಿಗೆ ನಕಲಿ ಮತಗಳನ್ನು ಸೇರಿಸಲಾಗುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಮತದಾರರ ಯಾದಿಯಲ್ಲಿ ಮುಸ್ಲಿಂ ಲೀಗ್ ನಕಲಿ ಮತಗಳನ್ನು ವ್ಯಾಪಕವಾಗಿ ಸೇರ್ಪಡೆಗೊಳಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 23 ವರ್ಷದಿಂದ ಮೇಲಿನ ಎಲ್ಲಾ ಹೊಸ ಮತದಾರರನ್ನು ಸರಿಯಾದ ದಾಖಲೆಗಳಿಲ್ಲದೆ ಸೇರಿಸಲಾಗುತ್ತಿದ್ದು, ಇತರ ರಾಜ್ಯಗಳ ಜನರನ್ನು ಕೂಡಾ ನಕಲಿ ದಾಖಲೆಗಳ ಮೂಲಕ ಸೇರಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.  ಈಬಗ್ಗೆ ಸೂಕ್ತ ತನಿಖೆ ನಡೆಸಲು ಬಿಎಲ್‌ಒಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು …

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಯಾವುದೇ ಒಕ್ಕೂಟಕ್ಕೂ ಬೆಂಬಲ ಘೋಷಿಸಿಲ್ಲ- ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಘೋಷಿತ ನಿಲುವುಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಸನ್ನಿವೇಶ ಈಗ ಇಲ್ಲ ಎಂದು, ಸಂಘಟನೆ ನಿಷ್ಪಕ್ಷ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲಲು ಕೆವಿವಿಇಎಸ್ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ತೀರ್ಮಾನಿಸಿದೆ. ಎಲ್ಲಾ ಧರ್ಮಗಳಲ್ಲೂ, ಜಾತಿಯಲ್ಲೂ, ರಾಜಕೀಯಕ್ಕೊಳಪಟ್ಟವರು ಸಂಘಟನೆಯ ಸದಸ್ಯರಾಗಿದ್ದಾರೆ. ಸಂಘಟನೆ ರೂಪೀಕೃತಗೊಂಡ ಕಾಲದಿಂದ ಆರಂಭಿಸಿ ಇದುವರೆಗೆ ಸ್ವತಂತ್ರವಾದ ರಾಜಕೀಯ ನಿಲುವುಗಳನ್ನು ಸಂಘಟನೆ ಸ್ವೀಕರಿಸಿದೆ. ಚುನಾವಣೆಗಳಲ್ಲಿ ಸದಸ್ಯರಿಗೆ ಅವರವರ ರಾಜಕೀಯ ನಿಲುವುಗಳನ್ನು ಹೊಂದಬ ಹುದು. ಅದರ ಜೊತೆಗೆ ಸಂಘಟನೆಯ ಸಾರ್ವಜನಿಕ ನಿಲುವು, ಐಕ್ಯವನ್ನು …