ತೀರ್ಥದಂತ ನೀರು ಮಲಿನ ಆರೋಪ: ಕಣ್ವತೀರ್ಥದಲ್ಲಿ ಮೀನು ಕಾರ್ಖಾನೆ ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ

ಮಂಜೇಶ್ವರ: ತೀರ್ಥ ಸಮಾನ ವಾದ ನೀರನ್ನು ಕಲುಷಿತಗೊಳಿಸಿ ಜನರಿಗೆ ಕುಡಿಯಲು ಕೂಡಾ ಸಾಧ್ಯವಾ ಗದ ಸ್ಥಿತಿಗೆ ತಲುಪಿಸುತ್ತಿರುವ ಸ್ಥಳೀಯ ಕಂಪೆನಿಯೊಂದರ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 8 ವರ್ಷಗಳಿಂದ ಇಲ್ಲಿ ಕಾರ್ಯಾಚರಿಸು ತ್ತಿರುವ ಯುನೈಟೆಡ್ ಸೀ ಫುಡ್ ಕಾರ್ಖಾನೆ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದಾರೆ. ನಿರಂತರ ವಾಯು, ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಜನವಾಸ ಈ ಸ್ಥಳದಲ್ಲಿ ಅಪಾಯಕಾರಿಯಾಗಿ ಬದಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸೂಕ್ತ ಕಾನೂನು ಕ್ರಮಗಳನ್ನು ಪಾಲಿಸದೆ ಮೀನಿನ ತ್ಯಾಜ್ಯವನ್ನು ಹಾಗೂ ಮಲಿನ ಜಲವನ್ನು ಬಹಿರಂಗವಾಗಿ …

ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಮಹೋತ್ಸವ

ಕಾಸರಗೋಡು: ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆಯಂಗವಾಗಿ ಭಜನಾ ಮಹೋತ್ಸವ ಜರಗಿತು. ಗಣಪತಿ ಹೋಮ, ದೀಪ ಪ್ರತಿಷ್ಠೆ ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಇದೇ ವೇಳೆ ಗುಡ್ಡೆ ಶ್ರೀ ಮಹಾಲಿಂಗೇಶ್ವರ ಸನಾತನ ಧರ್ಮ ಪಾಠ ಶಾಲೆ ಮಕ್ಕಳ ನೃತ್ಯ ಭಜನೆ ಜರಗಿತು. ಕ್ಷೇತ್ರದಲ್ಲಿ ನಾಗತಂಬಿಲ, ಮಹಾಪೂಜೆ, ತುಲಾಭಾರ, ದೀಪಾರಾಧನೆ ನಡೆಯಿತು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ಹೊರೆಕಾಣಿಕೆ ಸಮರ್ಪಣೆ ಜರಗಿತು.

ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ

ಕಾಸರಗೋಡು: ಪುಸ್ತಕವೆಂಬ ಜ್ಞಾನದ ಬೆಳಕನ್ನು ಪಸರಿಸುವ ಮೂಲಕವೇ ಉದ್ಘಾಟನೆಗೊಂಡ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದು  ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡಿನಲ್ಲಿ ಶುದ್ಧವಾದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದು ಅವರು ನುಡಿದರು. ಇದೇ ವೇಳೆ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಎನ್. ಚನಿಯಪ್ಪ ನಾಯ್ಕ್‌ರನ್ನು …

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ: ಬ್ರಹ್ಮಕಲಶೋತ್ಸವ ಸಮಿತಿ ಸಭೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲ ಶೋತ್ಸವ ಸಮಿತಿ ಸಭೆ ನಿನ್ನೆ ಕ್ಷೇತ್ರ ಪರಿಸರದಲ್ಲಿ ಜರಗಿತು. ಬ್ರಹ್ಮಕಲಶೊ ತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣನ್ ಚೆನ್ನಿಕ್ಕೆರೆ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಗಣೇಶ್ ಅಮೈ ಮುಂದೆ ನಡೆಯಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷ ರಾಮನ್ ಚೆನ್ನಿಕೆರೆ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಅರವಿಂದ ನಾಯ್ಕ್, ಶಿಲ್ಪ ವರಪ್ರಸಾದ್ ಮಾತನಾಡಿದರು. ಗುರುಸ್ವಾಮಿಗಳಾದ ಗೋಪಾಲ, ನಾರಾಯಣ, ಮಹಿಳಾ …

ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸಿ ಮಾದರಿಯಾದ ನವೋದಯ ಫ್ರೆಂಡ್ಸ್ ಕ್ಲಬ್

ಕುಂಬಳೆ:  ಶಾಂತಿಪಳ್ಳದಿಂದ ಭಾಸ್ಕರ ನಗರ ವರೆಗೆ ರಸ್ತೆ ಬದಿಗಳಲ್ಲಿ  ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು  ಭಾಸ್ಕರನಗರದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯ ಕರ್ತರು ತೆರವುಗೊಳಿಸಿ ಶುಚೀಕರಣ ನಡೆಸಿ ಮಾದರಿಯಾಗಿದ್ದಾರೆ. ಶುಚೀ ಕರಣ ಕಾರ್ಯದಲ್ಲಿ ನಾಗರಿಕರೂ ಪಾಲ್ಗೊಂಡರು. ಇದೇ ರೀತಿಯಲ್ಲಿ ನಾಡಿನ ಎಲ್ಲಾ ಕ್ಲಬ್‌ಗಳು  ಶುಚೀ ಕರಣಕ್ಕೆ ಮುಂದಾದರೆ ವಿವಿಧೆಡೆ ಎಸೆಯಲಾದ ತ್ಯಾಜ್ಯಗಳು ಪೂರ್ಣವಾಗಿ ತೆರವುಗೊಂಡು ನಾಡು ನೆಮ್ಮದಿಪಡಲಿ ದೆಯೆಂದು ಕ್ಲಬ್‌ನ ಕಾರ್ಯಕರ್ತರು ತಿಳಿಸಿದ್ದಾರೆ. ಕ್ಲಬ್‌ನ ಕಾರ್ಯಕರ್ತರು ನಡೆಸಿದ ಈ ಮಾದರಿ ಕಾರ್ಯವನ್ನು ಪಂಚಾಯತ್ ಅಧ್ಯಕ್ಷ …