ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪುಳಿಕುತ್ತಿ ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಅಗರ್ತಿಮೂಲೆಯಲ್ಲಿ ಸ್ಥಳೀಯರಾದ ಇಕ್ಬಾಲ್ ಹಾಗೂ ರಾಧಾಕೃಷ್ಣರಿಗೆ ಬೀದಿನಾಯಿ ಕಚ್ಚಿದ್ದು, ಇವರು ಚಿಕಿತ್ಸೆ ಪಡೆದಿದ್ದಾರೆ. ಬಳಿಕ ನಾಯಿಯನ್ನು ಹಿಡಿದು ಸ್ಥಳೀಯರು ಕಟ್ಟಿಹಾಕಿದ್ದಾರೆ. ಪುಳಿಕುತ್ತಿ, ಪ್ರತಾಪ ನಗರ, ಅಗರ್ತಿ ಮೂಲೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ವ್ಯಾಪಕಗೊಂ ಡಿದ್ದು, ವಾಹನ ಸಂಚಾರದ ವೇಳೆಯೂ ಬೆನ್ನಟ್ಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀದಿನಾಯಿ ಗಳ ನಿಯಂತ್ರಣಕ್ಕೆ ಅಗತ್ಯ …

ವಿಷಾಹಾರ: ಇಬ್ಬರು ಮೃತ್ಯು; ಹೋಟೆಲ್‌ಗೆ ಬೀಗ

ತಿರುವನಂತಪುರ: ವಿಳಿಂಞದ ಹೋಟೆಲ್‌ನಿಂದ ಆಹಾರ ಸೇವಿಸಿದ ಇಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂ, ನಿಲಾಮೇಲ್ ನಿವಾಸಿಗಳಾದ ರಶೀದ ಬೀವಿ, ಅಳಿಯ ಶಾಜಿ ಎಂಬಿವರು ಮೃತಪಟ್ಟವರು. ವಿಷಾಹಾರ ಮರಣಕ್ಕೆ ಕಾರಣವೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ವಿಳಿಂಞದ ಹೋಟೆಲ್‌ನಿಂದ ರಶೀದ ಬೀವಿ ಹಾಗೂ ಶಾಜಿ ಸಹಿತದ ಆರು ಮಂದಿ ಆಹಾರ ಸೇವಿಸಿದ್ದರು. ಇವರಲ್ಲಿ ನಾಲ್ಕು ಮಂದಿಗೆ ದೈಹಿಕ ಅಸ್ವಸ್ಥತೆಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ರಶೀದ ಬೀವಿ ಹಾಗೂ ಶಾಜಿಯವರ ಜೀವ ಉಳಿಸ ಲು ಸಾಧ್ಯವಾಗಲಿಲ್ಲ. ಶಾಜಿಯ ವರ ಪತ್ನಿ ಸಜಿನ …