ಗೃಹಿಣಿಯನ್ನು ದೂಡಿ ಹಾಕಿ ಉಪಟಳ: ದೂರು ದಾಖಲು
ನೀಲೇಶ್ವರ: ಮನೆ ಹಿತ್ತಿಲಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಡೆದ ದ್ವೇಷದ ಹಿನ್ನೆಲೆಯಲ್ಲಿ ಅವಾಚ್ಯವಾಗಿ ಬೈದು ದೂಡಿರುವು ದಾಗಿ ದೂರಲಾಗಿದೆ. ಘಟನೆಯಲ್ಲಿ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಟಿಪೊಯಿಲ್ ಕಕ್ಕೋಡ್ ಕೆ. ರಾಘವನ್‌ರ ಪತ್ನಿ ಎಂ. ಕೌಸಲ್ಯ (57) ನೀಡಿದ ದೂರಿನಂತೆ ಕಿನಾನೂರು ಕಕ್ಕೋಟ್‌ನ ವಿನೋದ್‌ನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳವಾರ ಸಂಜೆ ೫ ಗಂಟೆ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ದೂರುದಾತೆಯ ಮನೆ ಹಿತ್ತಿಲಿನ ಮೂಲಕ ವಿನೋದ್ ನಡೆದುಕೊಂಡು ಹೋಗುತ್ತಿದ್ದಾಗ ತಡೆದಿದ್ದರೆನ್ನಲಾಗಿದೆ. ಈ ದೇವೇಷದಿಂದ ದೂರುದಾತೆಯನ್ನು ತಡೆದು …