ಕರ್ನಾಟಕ ಎಸ್.ಆರ್.ಟಿ.ಸಿ ಬಸ್-ಕಾರು ಢಿಕ್ಕಿ :ಪೈಕ ನಿವಾಸಿ ದಾರುಣ ಮೃತ್ಯು; ಪುತ್ರ ಗಂಭೀರ

ಬದಿಯಡ್ಕ: ಕೆಳಗಿನ ನೆಲ್ಲಿಕಟ್ಟೆಯಲ್ಲಿ ಇಂದು ಮುಂಜಾನೆ ಕರ್ನಾಟಕ ಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು  ತಂದೆ ಸಾವನ್ನಪ್ಪಿ ಪುತ್ರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೆಳಗಿನ ನೆಲ್ಲಿಕಟ್ಟೆ ನಿವಾಸಿ ಹಾಗೂ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಶಂಸುದ್ದೀನ್ ಪೈಕ (68)  ಸಾವನ್ನಪ್ಪಿದ ವ್ಯಕ್ತಿ. ಈ ಅಪಘಾತದಲ್ಲಿ  ಅವರ ಪುತ್ರ ಸಲ್ಮಾನ್ ಫಾರೀಸ್ (22) ಗಂಭೀರ ಗಾಯಗೊಂಡಿದ್ದು ಅವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ವಿದ್ಯಾನಗರ-ಬದಿಯಡ್ಕ ಠಾಣೆಯ ಗಡಿಪ್ರದೇಶವಾದ ಕೆಳಗಿನ ನೆಲ್ಲಿಕಟ್ಟೆಯಲ್ಲಿ …

ಗರ್ಭಿಣಿ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲಿಲ್ಲ: ಪರಿಯಾರಂ ಮೆಡಿಕಲ್ ಕಾಲೇಜಿನ ಲೇಬರ್ ರೂಂ ಹೊಡೆದು ಹಾನಿಗೊಳಿಸಿದ ಯುವಕ

ಪರಿಯಾರಂ: ಗರ್ಭಿಣಿಯಾದ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲವೆಂಬ ನೌಕರರ  ನಿಲುವನ್ನು ಪ್ರತಿಭಟಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಲೇಬರ್ ರೂಂ ಹೊಡೆದು ನಾಶಪಡಿಸಲಾಗಿದೆ. ಘಟನೆಯಲ್ಲಿ ಕಾಞಂಗಾಡ್ ಒಳಿಂಞವಳಪ್ ನಿವಾಸಿ ರಾಶಿದ್ (24)ನನ್ನು ಪರಿಯಾರಂ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ರಾಶಿದ್‌ನ ಪತ್ನಿಯನ್ನು ಹೆರಿಗೆಗಾಗಿ ಲೇಬರ್ ಕೊಠಡಿಗೆ ಕೊಂಡೊಯ್ಯ ಲಾಗಿತ್ತು. ಈ ಮಧ್ಯೆ ತಲುಪಿದ ರಾಶಿದ್ ಪತ್ನಿಯನ್ನು ಕೂಡಲೇ ಡಿಸ್ಚಾರ್ಜ್ ಮಾಡಬೇಕೆಂದು ಆಗ್ರಹಿಸಿದ್ದನೆನ್ನ ಲಾಗಿದೆ. ಆದರೆ ಡಾಕ್ಟರ್‌ಗಳ ಅನುಮತಿ ಇಲ್ಲದೆ …

ಆರೋಗ್ಯ ಸಚಿವೆ ಮನೆ ಬಾಗಿಲಿಗೆ ಪುಷ್ಪಗುಚ್ಛವಿರಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು

ತಿರುವನಂತಪುರ: ಆಲಪ್ಪುಳ ವಂಡಾನಂ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಯುವತಿಯ ಹೊಟ್ಟೆಯಲ್ಲಿ ಕತ್ತರಿ ಮರೆತು ಹೋದ ಘಟನೆಯಲ್ಲಿ ಯೂತ್ ಕಾಂಗ್ರೆಸ್ ತೀವ್ರ ಪ್ರತಿಭಟನೆ ಮುಂದುವರಿಸುತ್ತಿದೆ. ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ಮನೆ ಮುಂಭಾಗದಲ್ಲಿ ಪುಷ್ಪಗುಚ್ಚ ಇರಿಸಿದರು. ಮಾಹಿತಿ ತಿಳಿದು ಪೊಲೀಸರು ತಲುಪಿ ಕಾರ್ಯಕರ್ತರನ್ನು ಬಂಧಿಸಿ ಪುಷ್ಪಗುಚ್ಚವನ್ನು ತೆರವುಗೊಳಿಸಿದರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಾಗಿ ತಲುಪುವಾಗ ಸಚಿವೆಯ ಮನೆ ಮುಂಭಾಗದಲ್ಲಿ ಮೂರು ಮಂದಿ ಪೊಲೀಸರು ಮಾತ್ರವಿದ್ದರು. ಇವರನ್ನು …

ಮಹಿಳೆಯ ಉದರದಲ್ಲಿ ಕತ್ತರಿ ಸಿಲುಕಿದ ಘಟನೆ: ಪ್ರಕರಣ ದಾಖಲಿಸಿದ್ದು ಓವೆ ವೈದ್ಯೆಯ ವಿರುದ್ಧ ಮಾತ್ರ; ಇಬ್ಬರ ಅಮಾನತು

ಆಲಪ್ಪುಳ: ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ೫ ವರ್ಷ ಗಳ ಹಿಂದೆ ಶಸ್ತ್ರಕ್ರಿಯೆಗೊಳಗಾದ ಅಂಬಲಪುಳದ ಉಷಾ ಜೋಸೆಫ್ (52)ರ ಉದರದಲ್ಲಿ ಕತ್ತರಿ ಸಿಲುಕಿಕೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಪ್ರಸ್ತುತ ವೈದ್ಯಕೀಯ ಕಾಲೇಜಿನಲ್ಲಿ ಅಂದು ಹೆರಿಗೆ  ವಿಭಾಗದ ಮುಖ್ಯಸ್ಥರಾಗಿದ್ದ ಡಾ| ಲಲಿತಾಂಬಿಕರ ಹೆಸರಲ್ಲಿ ಮಾತ್ರವೇ ಈ ಪ್ರಕರಣ ದಾಖಲಿಸಲಾಗಿದೆ.  ಉಷಾ ಜೋಸೆಫ್‌ರ ಸಂಬಂಧಿಕರು ನೀಡಿದ ದೂರಿನಂತೆ ಅಂಬಲಪುಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2021 ಮೇ 12ರಂದು ಉಷಾ ಜೋಸೆಫ್‌ರನ್ನು ಶಸ್ತ್ರಕ್ರಿಯೆಗೊಳಪಡಿಸ ಲಾಗಿತ್ತು. ಅಂದು ಡಾ| ಲಲಿತಾಂಬಿಕೆ …

ಅತ್ಯಾಧುನಿಕ ಸೌಕರ್ಯದ ಹೊಸ ಶವಾಗಾರ ಕಟ್ಟಡ ಉದ್ಘಾಟನೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಗಾಗಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿ ರುವ ಹೊಸ ಶವಾಗಾರ  ಕಟ್ಟಡವನ್ನು ಶಾಸಕ ಎನ್.ಎ ನೆಲ್ಲಿಕುನ್ನು   ಉದ್ಘಾಟಿಸಿದರು. ಎನ್.ಎ. ನೆಲ್ಲಿಕುನ್ನು ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 1.20 ಕೋಟಿ ರೂ. ವ್ಯಯಿಸಿ ಈ ಕಟ್ಟಡ ನಿರ್ಮಿಸಲಾಗಿದೆ. ಇದು ಆಧುನಿಕ ಸೌಕರ್ಯವನ್ನು ಹೊಂದಿದೆ. ಹೆಚ್ಚುವರಿ ಮೃತದೇಹಗಳನ್ನು ಸಂರಕ್ಷಿಸಿಡುವ  ಹೆಚ್ಚುವರಿ ಫ್ರೀಜರ್ ಸೌಕರ್ಯಗಳು, ಉನ್ನತ ಮಟ್ಟದ ಮರಣೋತ್ತರ ಪರೀಕ್ಷಾ ಸೌಕರ್ಯ, ಅದಕ್ಕೆ ಹೊಂದಿಕೊಂಡು ಪೀಠೋಪ ಕರಣ ಹಾಗೂ ಅಗತ್ಯದ ಕೊಠಡಿ ಸೌಕರ್ಯಗಳೂ ಇದರಲ್ಲಿ ಹೊಂ ದಿದೆ. ಮಾತ್ರವಲ್ಲ  …

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 27.14 ಲಕ್ಷ ವಂಚನೆ ಬಗ್ಗೆ ದೂರು: ಕೇಸು ದಾಖಲು

ಬದಿಯಡ್ಕ: ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಭಾರೀ ಲಾಭ ನೀಡುವುದಾಗಿ ನಂಬಿಸಿ 27,14,000 ರೂ. ಪಡೆದು ವಂಚನೆಗೈದ ದೂರಿ ನಂತೆ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.  ಕುಂಬಳೆ ನಾಯ್ಕಾಪು ಅನಂತಪುರ ದೇವಸ್ಥಾನ  ರಸ್ತೆ ಬಳಿಯ ನಿವಾಸಿಯೋರ್ವರು   ಈ ಬಗ್ಗೆ ದೂರು ನೀಡಿದ್ದು, ಅದರಂತೆ ಸೈಬರ್ ಪೊಲೀಸರು ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರೇಡ್ ಗ್ರಿಪ್ ಎಂಬ ಟ್ರೇಡಿಂಗ್ ಕಂಪೆನಿ  ಹೆಸರಲ್ಲಿ ಎಐಯ ವಿವಿಧ ಕಂಪೆನಿಗಳಲ್ಲಿ ಠೇವಣಿ ಹೂಡಿದಲ್ಲಿ ಭಾರೀ ಲಾಭ ನೀಡಲಾಗುವುದೆಂದು ನಂಬಿಸಿ  ಆರೋಪಿಗಳು 2025 …

ನಾಯಮ್ಮಾರಮೂಲೆಯ ಸಾಫ್ಟ್ ಡ್ರಿಂಕ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಾಯಮ್ಮಾರಮೂಲೆಯಲ್ಲಿ  ಕಾರ್ಯವೆಸಗುತ್ತಿರುವ ಮುಹ್‌ಸಿನ್ (ಕಲ್ಪಕ ಹೌಸ್) ಎಂಬವರ   ಮಾಲಕತ್ವದಲ್ಲಿರುವ ಫಾಕಿಯಾ ಸಾಫ್ಟ್ ಡ್ರಿಂಕ್ಸ್ ಎಂಬ ಹೆಸರಿನ ಕಾರ್ಖಾನೆಗೆ ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆ ಬೆಂಕಿ ತಗಲಿ ಭಾರೀ ನಾಶನಷ್ಟವುಂಟಾಗಿದೆ. ಫ್ಯಾಕ್ಟರಿ  ಪರಿಸರದಲ್ಲಿ  ರಾಶಿ ಹಾಕಿದ್ದ  ತೆಂಗಿನ ಸಿಪ್ಪೆಗೆ ಮೊದಲು ಬೆಂಕಿ ತಗಲಿ   ಬಳಿಕ ಅದು ಫ್ಯಾಕ್ಟರಿಗೆ ಹಬ್ಬಿತೆನ್ನಲಾಗಿದೆ. ವಿಷಯ ತಿಳಿದ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಎ. ಜಾಫರ್‌ಖಾನ್, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಕು ಎಂಬವರ ನೇತೃತ್ವದ  ಕಾಸರಗೋಡು ಅಗ್ನಿಶಾಮಕದಳದ …

ಗಾಂಜಾ ಪ್ರಕರಣದ ಆರೋಪಿಗೆ ಶಿಕ್ಷೆ

ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ) ನ್ಯಾಯಾಧೀಶರಾದ ರಾಮು ರಮೇಶ್ಚಂದ್ರ ಭಾನು ಒಂದು ವರ್ಷ ಕಠಿಣ ಸಜೆ ಹಾಗೂ 2೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಡಂಬಾರು  ಪತ್ತನಾಡಿ ಸಂತಡ್ಕದ ಅಬ್ದುಲ್ ರಹ್ಮಾನ್ (49) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ  ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. 2021 ಮಾರ್ಚ್ 19ರಂದು ಇಚ್ಲಂಗೋಡು ಜಂಕ್ಷನ್‌ನಲ್ಲಿ ಅಂದು ಕುಂಬಳೆ  ಠಾಣೆ ಎಸ್‌ಐ ಆಗಿದ್ದ …

ಪೆರ್ವೋಡಿ ಕುಳಿಯಾರ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಿಗೆ ಸಮಸ್ಯೆ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ 7 ವಾರ್ಡ್ ಪೆರ್ವೋಡಿ ಕುಳಿಯಾರ್ ಪರಿಸರದಲ್ಲಿ ತ್ಯಾಜ ವಸ್ತುಗಳನ್ನು ನಿರ್ಜನ ಪ್ರದೇಶದಲ್ಲಿ ತಂದು ಹಾಕಿ ಬೆಂಕಿ ಹಚ್ಚಿರುವುದಾಗಿ ದೂರಲಾಗಿದೆ. ತ್ಯಾಜ್ಯ ರೋಗಗಳನ್ನು ಕೈ ಬೀಸಿ ಕರೆಯುತ್ತಿದೆ. ಈ ಪರಿಸರದಲ್ಲೇ ರೋಗಿಯಾದ ಮಹಿಳೆಯೊಬ್ಬರು ವಾಸವಾಗಿದ್ದು, ಆತಂಕದ ವಾತಾವರಣ ಉಂಟಾಗಿದೆ. ತ್ಯಾಜ್ಯವನ್ನು ಜನವಾಸವಿರುವ ಪ್ರರ್ದೇಶದಲ್ಲಿ ಉಪೇಕ್ಷಿಸಿ ಉರಿಸುವುದರಿಂದ ಪರಿಸರ ನಿವಾಸಿಗಳು ಸಮಸ್ಯೆಗೀಡಾಗಿದ್ದಾರೆ. ನಿನ್ನೆ ಈ ಪ್ರದೇಶಕ್ಕೆ ವಾರ್ಡ್ ಪ್ರತಿನಿದಿ ರಾಮ ಏದಾರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು …

ಚುನಾವಣೆ: ‘ವೋಟ್‌ವಂಡಿ’ ಪ್ರಯಾಣ ಆರಂಭ

ಕಾಸರಗೋಡು: ವಿಧಾನಸಭಾ ಚುನಾವಣೆಗಿರುವ ಔಪಚಾರಿಕ ಸಿದ್ಧತೆ ಜಿಲ್ಲೆಯಲ್ಲಿ ಸಕ್ರಿಯವಾಯಿತು. ಜಿಲ್ಲಾ ಆಡಳಿತ ಕೂಟದ ಚುನಾವಣೆ ಪ್ರಚಾರ ಕಾರ್ಯಕ್ರಮದ ಕಾಲೇಜು ಮಟ್ಟದ ಪ್ರಯಾಣ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಉದ್ಘಾಟಿಸಿ ದರು. 18 ವರ್ಷ ಪೂರ್ತಿಗೊಂಡ, ಚುನಾವಣೆಯ ಗುರುತು ಚೀಟಿ ಕೈವಶವಿರುವ ಎಲ್ಲಾ ಪೌರರು ಮದತಾನದ ಹಕ್ಕನ್ನು ವಿನಿಯೋಗಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ವೇಳೆ ಕರೆ ನೀಡಿದರು. ಚುನಾವಣೆಯ ಪೂರ್ವ ಭಾವಿಯಾಗಿ ಮೊದಲ ಮತದಾರರಿಗೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ, ಇಲೆಕ್ಟ್ರೋನಿಕ್ ವೋಟರ್ ಮಿಷನ್ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ …