ಪಾವೂರಿನಿಂದ ಮಧ್ಯವಯಸ್ಕನನ್ನು ಅಪಹರಣಗೈದ ನಾಲ್ಕು ಮಂದಿ ಬಂಧನ: ಎರಡು ಕಾರು ವಶ; ಇತರ ಆರೋಪಿಗಳಿಗಾಗಿ ಶೋಧ; ಅಪಹರಣಕ್ಕೀಡಾದ ವ್ಯಕ್ತಿ ಸುರಕ್ಷಿತ
ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರಿನಿಂದ ಅಪಹರಣಕ್ಕೀಡಾದ ಮಧ್ಯ ವಯಸ್ಕನನ್ನು ಪೊಲೀಸರು ಅತೀ ಸಾಹಸಿಕವಾಗಿ ರಕ್ಷಿಸಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದಲ್ಲಿ ಸೆರೆಹಿಡಿಯ ಲಾಗಿದೆ. ಅಪಹರಣಕ್ಕಾಗಿ ಬಳಸಿದ ಎರಡು ಕಾರುಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಂಜೇಶ್ವರ ಪಾವೂರು ನಿವಾಸಿಗಳಾದ ಅಬ್ದುಲ್ ಗಫೂರ್ (25), ಅಬ್ದುಲ್ ಅನಸ್ (27), ಮುಹಮ್ಮದ್ ಶಿಹಾಬ್ (40), ಮುಹಮ್ಮದ್ ರಫೀಕ್ (40) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಪಾವೂರು ಕೊಂಬಂಕುಳಿಯ ಸಾಮಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ …