ಪ್ರೇಮದಲ್ಲಿದ್ದಾಗಿನ ಫೋಟೋ ಇನ್‌ಸ್ಟಾಗ್ರಾಮ್ ಪ್ರೊಪೈಲ್‌ಗೆ ಬಳಕೆ: ಬೇರೊಬ್ಬನನ್ನು ಮದುವೆಯಾಗಲು ಬಿಡಲಾರೆನೆಂಬ ಬೆದರಿಕೆ ; ಪದವಿ ವಿದ್ಯಾರ್ಥಿ ದೂರಿನಂತೆ ಯುವಕ, ತಂದೆ ವಿರುದ್ಧ ಕೇಸು ದಾಖಲು
ಕಾಸರಗೋಡು: ಪ್ರೇಮದಲ್ಲಿದ್ದಾಗ ತೆಗೆದ ಫೋಟೋಗಳನ್ನು ಸೋಶ್ಯಲ್ ಮೀಡಿಯಾಗಳಲ್ಲಿ ಪ್ರಚಾರಮಾಡಿ, ಬೇರೊಬ್ಬನನ್ನು ಮದುವೆಯಾಗಲು ಬಿಡಲಾರೆನೆಂದು ಬೆದರಿಕೆಯೊಡ್ಡು ತ್ತಿರುವುದಾಗಿ ನೀಡಿದ ದೂರಿನಂತೆ ಬೇಕಲ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾದ 22ರ ಹರೆಯದ ಯುವತಿ ನೀಡಿದ ದೂರಿನಂತೆ ಚೆರ್ವತ್ತೂರು ಕಾಡಂಕೋಡ್‌ನ ಶೆರಿನ್ ಮೆರ್ಷಾದ್ (30), ಈತನ ತಂದೆ ಶಂಸುದ್ದೀನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಒಂದು ಮದುವೆ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ದೂರುದಾತೆ …