ಕೆ.ಎಸ್.ಯು ಪ್ರತಿಭಟನೆ ಮಧ್ಯೆ ಆರೋಗ್ಯ ಸಚಿವೆಗೆ ಗಾಯ: ಐವರು ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ಹತ್ಯೆಯತ್ನ ಪ್ರಕರಣ ದಾಖಲು, ನ್ಯಾಯಾಂಗ ಬಂಧನ; ಸಿಪಿಎಂನಿಂದ ವ್ಯಾಪಕ ಪ್ರತಿಭಟನೆ ಕಣ್ಣೂರಿನಲ್ಲಿ ಸಂಘರ್ಷಾವಸ್ಥೆ

ಕಣ್ಣೂರು: ಕಣ್ಣೂರು ರೈಲು ನಿಲ್ದಾಣ ದಲ್ಲಿ ಕೆಎಸ್‌ಯು ಕಾರ್ಯಕರ್ತರು ಕಪ್ಪು ಪತಾಕೆ ಬೀಸಿ ಪ್ರತಿಭಟಿಸುತ್ತಿದ್ದ ಮಧ್ಯೆ ಆರೋಗ್ಯ ಸಚಿವೆ ವೀಣಾ ಜೋರ್ಜ್ ಗಾಯಗೊಂಡ ಘಟನೆಗೆ ಸಂಬಂಧಿಸಿ ಕೆಎಸ್‌ಯುನ ಕಣ್ಣೂರು ಜಿಲ್ಲಾಧ್ಯಕ್ಷ ಎಂ.ಸಿ. ಅತುಲ್, ಜಿಲ್ಲಾ ಕೋಶಾಧಿಕಾರಿ ಅಕ್ಷಯ್ ಮಾಟ್ಟೂಲ್, ಸಿ.ಎಚ್. ಮುಬಾಸ್ ಬಿತುನ್ ಬಾಲನ್ ಮತ್ತು ಮೊಹಮ್ಮದ್ ಯಾಸಿನ್ ಎಂಬಿ ವರ ವಿರುದ್ದ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದು ಸಚಿವರನ್ನು ಹತ್ಯೆಗೈಯ್ಯಲು ನಡೆಸಿದ …

ಕಳೆದ ವಾರ ಗಲ್ಫ್‌ನಿಂದ ಊರಿಗೆ ಬಂದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಗಲ್ಫ್‌ನಿಂದ ಕಳೆದ ವಾರ ಊರಿಗೆ ಬಂದಿದ್ದ ವ್ಯಕ್ತಿ ಇಂದು ಬೆಳಿಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಡಿಯಡ್ಕ ದೇವಸ್ಥಾನ ಬಳಿಯ ನಿವಾಸಿ ವೆಂಕಟ್ರಮಣ ಆಚಾರ್ಯ (58) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದ ಇವರು ಇಂದು ಬೆಳಿಗ್ಗೆ ೫ ಗಂಟೆಗೆ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಮನೆ ಬಳಿಯ ಮರದಲ್ಲಿ ವೆಂಕಟ್ರಮಣ ಆಚಾರ್ಯ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಪಂಚನಾಮೆ ನಡೆಸಿದ …

ಹೊಸಂಗಡಿ ವಸತಿಗೃಹದಲ್ಲಿ ಯುವತಿ, ಯುವಕನನ್ನು ಬೆದರಿಸಿದ ತಂಡದ ಕೊಂಡಿ ಮಹಿಳಾ ಪೊಲೀಸ್‌ನ ಕೈ ಬೆರಳು ಮುರಿದು ಪರಾರಿಯಾದ ಆರೋಪಿ ಸೆರೆ

ಕಾಸರಗೋಡು: ಬಂಧಿಸಲಿರುವ ಯತ್ನದ ಮಧ್ಯೆ ಮಹಿಳಾ ಪೊಲೀಸ್‌ನ ಕೈಯ ಬೆರಳನ್ನು ಮುರಿದು ಪರಾರಿಯಾಗಲು ಯತ್ನಿಸಿದ ಆರೋಪಿ ಸೆರೆಯಾಗಿದ್ದಾನೆ. ಹೊಸಬೆಟ್ಟು ನಿವಾಸಿ ಮೊಯ್ದೀನ್ ಸಮಾನ್ (33)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಂಡ ಸೆರೆ ಹಿಡಿದಿದೆ. ಇಂದು ಮುಂಜಾನೆ ಮಂಗಳೂರು, ಕಲ್ಲಾಪು ತರಕಾರಿ ಮಾರುಕಟ್ಟೆಯಿಂದ ಸೆರೆ ಹಿಡಿಯಲಾಗಿದೆ. ಆರೋಪಿ ಮಾರುಕಟ್ಟೆಯಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಆಧಾರದಲ್ಲಿ ಪೊಲೀಸ್ ತಂಡ ತಲುಪಿ ಬಂಧಿಸಿದೆ. ಈತನ ಜೊತೆಗಿದ್ದ ಆರೋಪಿಗಳಾದ ಮಂಜೇಶ್ವರ ಪಿರಾರಮೂಲೆಯ ಕೆ.ಎ. ಹಾರಿಸ್ (40), ಬಡಾಜೆ ಕಾಜೂರ್ ಮಾಲಿ …

ಜಿಲ್ಲೆಯಲ್ಲಿ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ  ಕಳೆದದಿನ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವೆ ಪ್ರಿಯತಮನನ್ನು ಮದುವೆಯಾದ ಬಳಿಕ ಪೊಲೀಸ್ ಠಾಣೆಯಲ್ಲಿಹಾಜರಾಗಿದ್ದಾಳೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಂ ಅದಿರುಮಾವಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನಾ (19) ಪ್ರಿಯತಮನಾದ ರಂಜಿತನ ಜೊತೆ ಪರಾರಿಯಾಗಿ ಮದುವೆಯಾಗಿದ್ದಾಳೆ. ಮಂಗಳವಾರ ಸಂಜೆ ಬೀನಾ ನಾಪತ್ತೆಯಾಗಿದ್ದಳು. ತಂದೆ ನೀಡಿದ ದೂರಿನಂತೆ  ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ನಿನ್ನೆ ಮಧ್ಯಾಹ್ನ ಬೀನಾ ಪೊಲೀಸ್ ಠಾಣೆಗೆ ತಲುಪಿದ್ದಾಳೆ. ಜೊತೆಗೆ ಪ್ರಿಯತಮ ರಂಜಿತ್ …

ಧಾರ್ಮಿಕರಂಗದಲ್ಲಿ ಸಕ್ರಿಯನಾಗಿದ್ದ  ಉದಯಗಿರಿ ನಿವಾಸಿ ಮಹೇಶ್ ನಿಧನ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಉಪಾಧ್ಯಕ್ಷ ನಾಗಿ, ವಿದ್ಯಾನಗರ ಗ್ರಾಮಸಮಿತಿಯ ಸಕ್ರಿಯ ಕಾರ್ಯಕರ್ತ, ಕಲಾ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸು ತ್ತಿದ್ದ ಉದಯಗಿರಿ ನೆಲ್ಕಳಂ ನಿವಾಸಿ ಮಹೇಶ್ ಎನ್. ಅಲಿಯಾಸ್ ಮಣಿ (58) ನಿಧನ ಹೊಂ ದಿದರು. ದಿ| ರಾಮನ್ ಕೆ.ಎನ್‌ರ ಪುತ್ರನಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಲಲಿತ,  ಪತ್ನಿ ಬೇಬಿ ಕೆ.ಬಿ, ಮಕ್ಕಳಾದ ನಿಶಾ ಕಾಞಂಗಾಡ್, ನಿತಿನ್ ಉದಯಗಿರಿ, ನಿಖಿಲೇಶ್ ಉದಯಗಿರಿ, ಸಹೋದರರಾದ ವಿಜಯನ್ …

ಕಿರುಕುಳ ಪ್ರಕರಣ: ಮೂರು ದಶಕಗಳ ಬಳಿಕ  ಶರಣಾದ ಆರೋಪಿ

ಕಣ್ಣೂರು: ಪ್ರಾಯಪೂರ್ತಿಯಾ ಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮೂರು ದಶಕಗಳ ಬಳಿಕ ನ್ಯಾಯಾಲಯದಲ್ಲಿ ಶರಣಾಗಿ ದ್ದಾನೆ. ತಲಶ್ಶೇರಿ ನಿವಾಸಿ ಮುಹಮ್ಮದ್ ಶಕೀಲ್ (58) ನ್ಯಾಯಾಲಯದಲ್ಲಿ ಶರಣಾದ ಆರೋಪಿಯಾಗಿದ್ದಾನೆ. 1989 ರಲ್ಲಿ ಬಾಲಕಿಗೆ ಕಿರುಕುಳಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿ ದ್ದಾನೆ. ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸುವುದರೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದನು. ತಲಶ್ಶೇರಿ ಎಎಸ್‌ಪಿ ಡಾ. ನಂದಗೋಪನ್‌ರ ನಿರ್ದೇಶ ಪ್ರಕಾರ ರೂಪೀಕರಿಸಿದ ಪ್ರತ್ಯೇಕ ಸ್ಕ್ವಾಡ್ ಆರೋಪಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುವುದರೊಂದಿಗೆ ಈತ ಶರಣಾಗಿದ್ದಾನೆ.  ಕೇಸು ದಾಖಲಿಸಿದ ಬಳಿಕ …

ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ 10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಳು. ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಮೆಹಸಿನ್ (15) ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟವಳು. 3 ತಿಂಗಳ ಹಿಂದೆ ಹೊಟ್ಟೆನೋವು ತಗಲಿದ ಈಕೆಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ತಿರುವನಂತಪುರ ಸಹಿತದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯಗೊಳಿಸಲಾಯಿತಾದರೂ ರೋಗ ವಾಸಿಯಾಗಲಿಲ್ಲ. ಕುಣಿಯದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಜೀದ್- ರಸಿಯ ದಂಪತಿ  ಪುತ್ರಿಯಾಗಿದ್ದಾಳೆ. ಮೃತಳು ತಂದೆ, ತಾಯಿ, ಸಹೋದರ ಕೆ.ಎಂ. ಅಬ್ದುಲ್ ರಶೀದ್, ಸಹೋದರಿ ಕೆ.ಎಂ. …

ವಿಧಾನಸಭಾ ಚುನಾವಣೆ: ಉದುಮದಲ್ಲಿ ಸಿ.ಎಚ್. ಕುಂಞಂಬು, ತೃಕ್ಕರಿಪುರದಲ್ಲಿ ವಿ.ಪಿ.ಪಿ. ಮುಸ್ತಫ ಎಡರಂಗದ ಅಭ್ಯರ್ಥಿಗಳು; ಶಾನವಾಸ್ ಪಾದೂರು ಕಾಸರಗೋಡು ಅಥವಾ ಮಂಜೇಶ್ವರದಲ್ಲಿ ಸ್ಪರ್ಧೆ

ಕಾಸರಗೋಡು: ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಜ್ಯಾರಿಗೊಳ್ಳುವ ಮೊದಲೇ ಜಿಲ್ಲೆಯಲ್ಲಿ ಸಿಪಿಎಂ ತನ್ನ ಅಭ್ಯರ್ಥಿಗಳನ್ನು ಖಚಿತಪಡಿಸಿದೆ. ಇದರಂತೆ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಶಾಸಕ ಸಿ.ಎಚ್. ಕುಂಞಂಬುರನ್ನು ಮತ್ತೆ ಕಣಕ್ಕಿಳಿಸಲು ಸಿಪಿಎಂ ತೀರ್ಮಾನಿಸಿದ್ದು, ತೃಕ್ಕರಿಪುರ ಕ್ಷೇತ್ರದಲ್ಲಿ ನ್ಯಾಯವಾದಿ ವಿ.ಪಿ.ಪಿ. ಮುಸ್ತಫಾರನ್ನು ಅಭ್ಯರ್ಥಿಯ ನ್ನಾಗಿಸಲು ಪಕ್ಷ ನಿರ್ಧರಿಸಿದೆ. ಕಾಸರಗೋಡು ಜಿಲ್ಲಾ ಪಂಚಾ ಯತ್‌ನ ಈ ಹಿಂದಿನ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಕಾಸರ ಗೋಡು ಅಥವಾ ಮಂಜೇಶ್ವರದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಸಿಪಿಎಂ ಚಿಂತನೆ ನಡೆಸಿದೆ. ಸಿಪಿಎಂ ಕೇಂದ್ರ ಸಮಿತಿ ಸದಸ್ಯ …

ಮಾನ್ಯದ ಕೃಷಿಕ ನಿಧನ

ಮಾನ್ಯ: ಕಲ್ಲಕಟ್ಟ ನಿವಾಸಿ, ಕೃಷಿಕ ನಾರಾಯಣ ಭಟ್ (75) ನಿಧನ ಹೊಂದಿದರು. ಉತ್ತಮ ಕೃಷಿಕನಾಗಿದ್ದರು. ಮೃತರು ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಗಿರೀಶ್ ಕೆ.ಎನ್, ರೂಪರೇಖ, ರಶ್ಮಿ, ಅಳಿಯಂದಿರಾದ ಸುರೇಶ್, ಗಿರೀಶ್, ಸೊಸೆ ಶ್ವೇತ, ಸಹೋದರ- ಸಹೋದರಿಯರಾದ ಶ್ಯಾಂ ಭಟ್, ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್, ಲಕ್ಷ್ಮಿ, ವೆಂಕಟೇಶ್ವರಿ, ತಿರುಮಲೇಶ್ವರಿ, ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಟೋ ಚಾಲಕ ನೇಣುಬಿಗಿದು ಆತ್ಮಹತ್ಯೆ

ಹೊಸದುರ್ಗ: ನೀಲೇಶ್ವರದ ಆಟೋ ಚಾಲಕನಾದ ಯುವಕ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಾಯೋತ್ ಶಾಲೆಯ ಸಮೀಪದ ನಿವಾಸಿಯಾದ ದಿ| ಅಂಬುಞಿ- ನಾರಾಯಣಿ ದಂಪತಿಯ ಪುತ್ರ ಕಾರಂಗೋಡ್ ದಿನೇಶ್ (41) ಮನೆ ಸಮೀಪದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಯುವಕ. ನಿನ್ನೆ ಸಂಜೆ ಘಟನೆ ನಡೆದಿದೆ. ಅಸೌಖ್ಯ ತಗಲಿ ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಈ ಮನೋವೇದನೆಯಿಂದ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಅವಿವಾಹಿತನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಪ್ರಕಾಶನ್, ಶ್ರೀಧರನ್, ಸಹೋದರಿಯರಾದ ಲಲಿತ, …