ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್ ಕಾಮಗಾರಿ ಉದ್ಘಾಟನೆ
ದೇಲಂಪಾಡಿ: ದೇಲಂಪಾಡಿ ಪಂಚಾಯತ್‌ನ ಸಾಲತ್ತಡ್ಕ ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್‌ನ ಪುನರ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂರು ಮಾಡಿದ ಎರಡೂವರೆ ಕೋಟಿ ರೂ.ಗಳ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಸಿ.ಎಚ್. ಕುಂಞಂಬು ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು. ಮೈನರ್ ಇರಿಗೇಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನೂಪ್ ಕುಮಾರ್ ವರದಿ ಮಂಡಿಸಿದರು. ಪಂ. ಉಪಾಧ್ಯಕ್ಷೆ ಬಿ. ಶಾರದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಸೈರಾ ಎ.ಬಿ. ಬಶೀರ್, ಕಾರಡ್ಕ ಬ್ಲೋಕ್ ಪಂ. …