ಈಜುಕೊಳದ ಕೆಲಸದ ಮಧ್ಯೆ ಶಾಕ್ ತಗಲಿ ಪ್ಲಂಬರ್ ಯುವಕ ದಾರುಣ ಮೃತ್ಯು; ಮಧೂರು ಪಟ್ಲದಲ್ಲಿ ಸಂಭವಿಸಿದ ದುರಂತ ಗಂಟೆಗಳ ಬಳಿಕ ಗಮನಕ್ಕೆ
ಕಾಸರಗೋಡು: ಸ್ವಿಮ್ಮಿಂಗ್ ಪೂಲ್‌ನ ಕೆಲಸದ ಮಧ್ಯೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಯುವಕ ಶಾಕ್ ತಗಲಿ ದಾರುಣವಾಗಿ ಮೃತಪಟ್ಟ ಘಟನೆ ಜರಗಿದೆ. ಬೆಳ್ಳೂರು ಮುಕುಡಂಗೋಳಿ ನಿವಾಸಿ ಚಿಕ್ಕಪ್ಪ ರೈ- ರತ್ನಾವತಿ ದಂಪತಿ ಪುತ್ರ ಪ್ರಭಾಕರ ರೈ (39) ಮೃತಪಟ್ಟ ಯುವಕ. ಮಧೂರು, ಪಟ್ಲ ಸರಕಾರಿ ಶಾಲೆ ಸಮೀಪದ ಅಬ್ದುಲ್ಲ ಎಂಬವರ ಮನೆ ಅಂಗಳದ ಈಜು ಕೊಳದಲ್ಲಿ ದುರಂತ ಸಂಭವಿಸಿದೆ. ನಿನ್ನೆ ಸಂಜೆ 4 ಗಂಟೆಗೆ ಸಂಭವಿಸಿದ ದುರಂತದ ಬಗ್ಗೆ ಗಮನಕ್ಕೆ ಬಂದದ್ದು ರಾತ್ರಿಯಲ್ಲಾಗಿದೆ. ಅಗ್ನಿಶಾಮಕ ದಳ ತಲುಪಿ ಪ್ರಭಾಕರ್ …