ಕೊನೆಯಾಗದ ಕೆಂಪುಕಲ್ಲು, ಮರ ಸಾಗಾಟ ಅಂತ್ಯ ಹಾಡಲು ಕೇಶವ ನಾಯಕ್ ವಿಧಾನಸಭೆಗೆ ಸ್ಪರ್ಧೆ

ಕುಂಬಳೆ: ನಿರಂತರ ಆಗ್ರಹಿಸಿದರೂ, ಅಧಿಕಾರಿಗಳಿಗೆ ತಿಳಿಸಿದರೂ ಮಂಜೇಶ್ವರ ಮಂಡಲದ ವಿವಿಧ ಭಾಗಗಳಲ್ಲಿ ಕೆಂಪು ಕಲ್ಲು, ಮರಗಳನ್ನು ಸಾಗಿಸುತ್ತಿರುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯಕ್ ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅನಂತಪುರ, ಬಾಯಾರು, ಪಾದೆಕಲ್ಲು ಎಂಬೆಡೆಗಳಿಂದ ಕೆಂಪು ಕಲ್ಲುಗಳನ್ನು ಹಾಗೂ ಹಲವು ಕಡೆಗಳಿಂದ ಮರಗಳನ್ನು ಕಡಿದು ಕರ್ನಾಟಕ, ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೆಂಪು ಕಲ್ಲು ಕಡಿಯುವುದನ್ನು ಸರಕಾರ ನಿಷೇದಿಸಿದೆ. ಆದರೆ ಕರ್ನಾಟಕದ ಪಾಸ್ ಉಪಯೋಗಿಸಿ ಕೇರಳದಿಂದ ಕರ್ನಾಟಕಕ್ಕೆ ಕಲ್ಲುಗಳನ್ನು ಸಾಗಿಸಲಾಗುತ್ತಿದ್ದು, ಈ …

ಶೋಚನೀಯಗೊಂಡ ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ : ಸಂಚಾರ ಸಮಸ್ಯೆ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಹಲವು ವರ್ಷಗಳಿಂದ ಶೋಚನೀಯÁವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉಪ್ಪಳ ಪೇಟೆಯಿಂದ ರೈಲ್ವೇ ನಿಲ್ದಾಣ ತನಕದ ಸುಮಾರು ಒಂದು ಕಿಲೋ ಮೀಟರ್ ಕಾಂಕ್ರೀಟ್ ಹಾಗೂ ಡಾಮರು ರಸ್ತೆ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯತ್ ಹಾಗೂ ರೈಲ್ವೇ ಇಲಾಖೆಗೆ ಸೇರಿದ ರಸ್ತೆಯಾಗಿದೆ ಇದು. ಇತ್ತೀಚೆಗೆ ರಸ್ತೆ ಉದ್ದಕ್ಕೂ ಚರಂಡಿಯನ್ನು ಅಭಿವೃದ್ದಿಗೊಳಿಸ ಲಾಗಿದೆ. ಈ ಪ್ರದೇಶದಲ್ಲಿ ಅಯ್ಯಪ್ಪ ಮಂದಿರ, ನೂರಾರು ಮನೆಗಳು, ವ್ಯಾಪಾರ ಸಂಸ್ಥೆಗಳು ಇದ್ದು, …

ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಪೈವಳಿಕೆ: ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಿಫ್‌ಬಿ ನಿಧಿಯಿಂದ 3.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮೂರು ಮಹಡಿಗಳಲ್ಲಾಗಿ ಒಟ್ಟು 13 ತರಗತಿ ಕೊಠಡಿಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿದೆ. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಪಂಚಾಯತ್ ಅಧ್ಯಕ್ಷೆ ಬದ್ರುನ್ನೀಸ ಸಲೀಂ ಕಳಾಯಿ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ರೈ, ಪಿಟಿಎ …

ಶೇಡಿಗದ್ದೆ-ನಾರಾಯಣಮಂಗಲ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕುಂಬಳೆ: ಶೇಡಿಗದ್ದೆ ಮುಂಗಿಲ ನಾರಾಯಣಮಂಗಲ ಕಾಂಕ್ರೀಟ್ ರಸ್ತೆಯನ್ನು ನಾಡಿಗೆ ಸಮರ್ಪಿಸ ಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ನವೀಕರಿಸಿದ ಕುಂಬಳೆ ಪಂಚಾಯತ್ ವ್ಯಾಪ್ತಿಯ ಈ ರಸ್ತೆಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ನಾಡಿಗೆ ಸಮರ್ಪಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದರು. ಬ್ಲೋಕ್‌ನ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸ್ವಾಗತಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ಪಿ. ಅಬ್ದುಲ್ ಖಾದರ್ , ಜಿಲ್ಲಾ ಪಂ. ಸದಸ್ಯ ಅಸೀಸ್ ಕಳತ್ತೂರು, ಮಂಜೇಶ್ವರ ಬ್ಲೋಕ್ …