ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ಅಡುಗೆ ಅನಿಲ ಬೆಲೆ ಹೆಚ್ಚಳ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಶಮನಗೊಳ್ಳದೆ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಭಾರತಕ್ಕೂ ಅದರ ಬಿಸಿ ತಟ್ಟಿದ್ದು, ಇದರ ಪರಿಣಾಮ ಅಡುಗೆ ಅನಿಲ ಬೆಲೆ ಇಂದು ಬೆಳಿಗ್ಗಿನಿಂದ ಗಗನಕ್ಕೇರಿದೆ.  ಮಧ್ಯಪ್ರಾಚ್ಯ ಯುದ್ದದ ಪರಿಸ್ಥಿತಿಯೇ ಬೆಲೆಯೇರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ತಲಾ 60 ರೂ.ನಂತೆ  ಇಂದಿನಿಂದ ಹೆಚ್ಚಿಸಲಾಗಿದೆ. ಇದರಿಂದಾಗಿ 14 ಕೆಜಿ ಸಿಲಿಂಡರೊಂದರ ಬೆಲೆ ಈಗ 915 ರೂ.ಗೇರಿದೆ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ ತರಲಾಗಿದೆ. ಇದರಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ …

ಜಸೀಲಾ ಆತ್ಮಹತ್ಯೆ ಪ್ರಕರಣ: ನೆರೆಮನೆ ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಚಿನ್ನ ಕಳವುಗೈದಿರುವುದಾಗಿ ಹೊರಿಸಲಾದ ಆರೋಪದಿಂದ ಮನನೊಂದು ಆಲಂಪಾಡಿ ನಾಲತ್ತಡ್ಕ ನಿವಾಸಿ ಜಸೀಲಾ (24) ಎಂಬಾಕೆ ವಿಷಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮನೆಯ ನೆರೆಮನೆ ನಿವಾಸಿಯಾದ ಮಹಿಳೆಯನ್ನು ಬಳಿಕ ವಿದ್ಯಾನಗರ  ಠಾಣೆಯ ಎಸ್‌ಐ ಸಫ್ವಾನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್ ಬೆಂಚ್‌ಕೋರ್ಟ್‌ಗೆ ಸಮೀಪದ ಆಯಿಷಾ (48) ಬಂಧಿತಳಾದ ಆರೋಪಿ. ನಂತರ ನ್ಯಾಯಾಲಯದ ಆದೇಶ ಪ್ರಕಾರ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ವಿಷಪ್ರಾಶನಗೈದ …

ಪೊಲೀಸರನ್ನು ಕಂಡು ಪರಾರಿಯಾಗಲೆತ್ನ ಎಂಡಿಎಂಎ ಸಹಿತ ಯುವಕ ಸೆರೆ

ಬದಿಯಡ್ಕ: 3.01 ಗ್ರಾಂ ಎಂಡಿಎಂಎ ಹಾಗೂ 16,700 ರೂಪಾಯಿ ಸಹಿತ ಯುವಕನನ್ನು  ಬಂಧಿಸಲಾಗಿದೆ. ಚೆಂಗಳ ರಹ್ಮತ್ ನಗರದ ಮನಿಯಡ್ಕಂ ನಿವಾಸಿ  ಸಿ.ಝೆಡ್. ನುಹ್‌ಮ (25) ಎಂಬಾತನನ್ನು ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್  ಅನೂಪ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ನೀರ್ಚಾಲು ಬಳಿಯ ಕನ್ಯೆಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. ಎಸ್‌ಐ ಪಿ. ರೂಪೇಶ್ ಹಾಗೂ  ಪೊಲೀಸರು ಪಟ್ರೋಲಿಂಗ್ ನಡೆಸುತ್ತಾ ಕನ್ಯೆಪ್ಪಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿದ್ದ ಯುವಕ ಪೊಲೀಸರನ್ನು ಕಂಡು  ಓಡಿ ಪರಾರಿಯಾಗಲು ಯತ್ನಿಸಿದ್ದನು. ಇದರಿಂದ ಸಂಶಯಗೊಂಡ …

ವೈದ್ಯರಿಗೆ ಹಲ್ಲೆ : ಇಬ್ಬರ ಸೆರೆ

ಉಪ್ಪಳ: ವೈದ್ಯರಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45), ಈತನ ಸಹೋದರ ಕೋಡಿಬೈಲು ಅಡ್ಕತ್ತೊಟ್ಟಿಯ ಹೈದರಾಲಿ (33) ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ.  ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್(೪೨)ರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸ ಲಾಗಿದೆ.  ಈ ತಿಂಗಳ 4ರಂದು ರಾತ್ರಿ 8.30ಕ್ಕೆ ಆಸ್ಪತ್ರೆ ಆವರಣ ದೊಳಗೆ ಆರೋಪಿಗಳು ವೈದ್ಯರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ನೇಂದ್ರ ಬಾಳೆಯನ್ನು ಕೈಬಿಟ್ಟ ಬೆಲೆಯೇರಿಕೆ: ರಂಜಾನ್ ಮಾಸದಲ್ಲೂ ದರ ಕುಸಿತದಿಂದ ಕೃಷಿಕರು ಕಂಗಾಲು

ಕಾಸರಗೋಡು: ನಿತ್ಯೋಪಯೋಗ ಸಾಮಗ್ರಿ, ಹಣ್ಣುಹಂಪಲುಗಳ ಬೆಲೆಯೇರಿಕೆ ಕಾಲವಾದ ರಂಜಾನ್ ಮಾಸದಲ್ಲಿ ಬೆಲೆಯೇರಿಕೆಯಾಗದ ಹಣ್ಣಾಗಿದೆ ನೇಂದ್ರ ಬಾಳೆಹಣ್ಣು. ಮೂರು ಕಿಲೋ ನೇಂದ್ರ ಹಣ್ಣಿಗೆ ಇತ್ತೀಚೆಗೆ 100 ರೂ. ಆಗಿತ್ತು ಬೆಲೆ. ಆದರೆ ವಿದೇಶ ಹಣ್ಣುಗಳಿಗೆ ಬೆಲೆ ಕಡಿತ ಕಂಡು ಬರುವುದಿಲ್ಲ. ವ್ಯಾಪಾರಿಗಳಿಗೆ ನಾಲ್ಕು ಕಿಲೋ ನೇಂದ್ರ ಬಾಳೆ ಹಣ್ಣು 100 ರೂ.ಗೆ ಲಭಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ. ರಂಜಾನ್ ಮಾಸಾರಂಭದಲ್ಲೇ ಮಾವಿನ ಹಣ್ಣಿಗೆ 180ರಿಂದ 300 ರೂ.ವರೆಗೆ ಬೆಲೆ ಏರಿಕೆಯಾಗಿತ್ತು. ಆಪಲ್‌ಗೂ ದರ ಹೆಚ್ಚಳವಿದೆ. ತುರ್ಕಿ, …

ಮುಳ್ಳೇರಿಯ ಕುಟುಂಬಾರೋಗ್ಯ ಕೇಂದ್ರ ಆವರಣದೊಳಗಿಂದ ಮರ ಸಾಗಾಟ: ಓರ್ವನ ವಿರುದ್ಧ ಕೇಸು

ಮುಳ್ಳೇರಿಯ: ಮುಳ್ಳೇರಿಯ ಕುಟುಂಬಾರೋಗ್ಯ ಕೇಂದ್ರದ ಆವರಣದೊಳಗೆ ಅತಿಕ್ರಮಿಸಿ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿ  ದೂರಲಾಗಿದೆ. ಈ ಬಗ್ಗೆ ನೌಕರನಾದ ಎಸ್.ಎಂ .ಸಾಜಿರ್ ನೀಡಿದ ದೂರಿ ನಂತೆ ಮುಳ್ಳೇರಿಯದ ಉದಯನ್ ಎಂಬಾತನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಳೆದ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆ ಮಧ್ಯೆ ಕುಟುಂಬಾರೋಗ್ಯ ಕೇಂದ್ರದ ಸ್ಥಳಕ್ಕೆ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿಯೂ ಇದರಿಂದ  15 ಸಾವಿರ ರೂ.ಗಳ ನಷ್ಟ ವುಂಟಾಗಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಆದೂರು ಶಾಲೆಯಲ್ಲಿ ನಡೆದ ರ‍್ಯಾಗಿಂಗ್ ವಿವಾದದ ಹೆಸರಲ್ಲಿ ಹೊಡೆದಾಟ: ಎರಡೂ ಪ್ರದೇಶಗಳ ಯುವಕರ ಮಧ್ಯೆ ಘರ್ಷಣೆಯತ್ತ

ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಹಿಂದೆ ನಡೆದ ರ‍್ಯಾಗಿಂಗ್‌ನ ಹೆಸರಲ್ಲಿ ವಿದ್ಯಾರ್ಥಿಗಳ ಮಧ್ಯೆ ಉಂಟಾದ ಹೊಡೆದಾಟ ಎರಡೂ ಪ್ರದೇಶಗಳ ಯುವಕರ ಮಧ್ಯೆ ಘರ್ಷಣೆಗೆ ಕಾರಣವಾಗಿದೆ.  ಮೊನ್ನೆ ಸಂಜೆ ಮುಳ್ಳೇರಿಯ ಜುಮಾ ಮಸೀದಿಯಲ್ಲಿ  ನಮಾಜು ನಿರ್ವಹಿಸಿದ ಬಳಿಕ ಮರಳುತ್ತಿದ್ದ ಮೂರು ಮಂದಿ ಮೇಲೆ ಹಲ್ಲೆ ನಡೆಯುವುದರೊಂದಿಗೆ ಸ್ಥಿತಿ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಲಿದೆಯೆಂಬ ಆತಂಕವುಂಟಾಗಿದೆ. ಆದೂರು ಸಿಎ ನಗರದ ಆಸಿಫ್ (28), ಪೂತಪಲದ ರಹೀಸ್ (18) ಸಹಿತ ಮೂರು ಮಂದಿ ಹಲ್ಲೆಯಿಂದ ಗಾಯಗೊಂಡಿದ್ದರು. ಈ ಪೈಕಿ …

ತಳಂಗರೆಯಲ್ಲಿ ಯುವತಿ, ಪುತ್ರ ನಾಪತ್ತೆ:   ರಾಜಪುರಂನಲ್ಲೂ ಯುವತಿ, ಪುತ್ರ ನಾಪತ್ತೆಯಾಗಿರುವುದಾಗಿ ದೂರು

ಕಾಸರಗೋಡು: ಯುವತಿ ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಳಂಗರೆ ಸಿರಾಮಿಕ್ಸ್ ರಸ್ತೆ  ಸಮೀಪದ ನಿಸಾಮುದ್ದೀನ್‌ರ ಪತ್ನಿ ಸಬಾನತ್(23) ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಬಳಿಕ ಈ ಇಬ್ಬರು ನಾಪತ್ತೆಯಾಗಿರುವುದಾಗಿ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ಇನ್ನೊಂದು ಪ್ರಕರಣದಲ್ಲಿ ರಾಜಪುರಂನಲ್ಲಿ ಅಂಗನವಾಡಿಗೆ ಹೋದ ಯುವತಿ ಹಾಗೂ ಮೂರು …

ಪೆರ್ಮುದೆ ಪೇಟೆಯಲ್ಲಿ ಬೀದಿನಾಯಿಗಳ ಹಿಂಡು: ಸ್ಥಳೀಯರಲ್ಲಿ ಭೀತಿ

ಬಂದ್ಯೋಡು: ಪೆರ್ಮುದೆ ಪೇಟೆಯಲ್ಲಿ ಬೀದಿ ನಾಯಿಗಳ ಹಿಂಡು ರಸ್ತೆಯಲ್ಲಿ ಅಲೆದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ಪೇಟೆಯಲ್ಲಿ ಸುಮಾರು 10ರಷ್ಟು ಬೀದಿ ನಾಯಿಗಳು ರಸ್ತೆಯಲ್ಲಿ, ಅಂಗಡಿ ಪರಿಸರಲ್ಲಿ ಕಚ್ಚಾಡಿಕೊಂಡು ಅಲೆದಾಡುತ್ತಿರುವುದು ಪಾದಚಾರಿಗಳಲ್ಲಿ ಆತಂಕ ಉಂಟುಮಾಡಿದೆ. ದಿನನಿತ್ಯ ಮಕ್ಕಳ ಸಹಿತ ಊರವರ ಸಂಚಾರಕ್ಕೆ ಹಾಗೂ ವಾಹನ ಸವಾರರಿಗೆ ಭೀತಿ ಉಂಟಾಗಿದೆ. ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸಂಬAಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು …

ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯವರಿಗೆ ಉಚಿತ ಸಂಚಾರ ನೀಡಲು ಬಿಜೆಪಿ ಮನವಿ

ಹೊಸಂಗಡಿ: ತಲಪಾಡಿ ಟೋಲ್ ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಸಂಚಾರ ಮಂಜೂರು ಮಾಡಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಕರ್ನಾಟಕ ಹೆದ್ದಾರಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್ ಗೇಟ್‌ನಲ್ಲಿ ತಲಪಾಡಿ ಗ್ರಾಮದವರಿಗೆ ಉಚಿತ ಸಂಚಾರವಿದ್ದು, ಅದೇ ರೀತಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯವರಿಗೂ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ. ಮನವಿ ನೀಡಿದ ತಂಡದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., …