ಯುವಕನನ್ನು ಕೊಲೆಗೈದು ಮೃತದೇಹವನ್ನು ಲಿಫ್ಟ್‌ನ ಹೊಂಡದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ವಲಸೆ ಕಾರ್ಮಿಕನೋರ್ವ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್‌ನಲ್ಲಿ  ಲಿಫ್ಟ್ ನಿರ್ಮಾಣಕ್ಕೆಂದು ತೋಡಲಾದ ಹೊಂಡದಲ್ಲಿ ನಿನ್ನೆ ರಾತ್ರಿ ಸುಮಾರು 11.30ರ ವೇಳೆ  ಮೃತದೇಹ ಕಂಡುಬಂದಿದೆ. ಆ ಬಗ್ಗೆ ಪ್ರಸ್ತುತ ಕಟ್ಟಡದ  ಮಾಲಕನ ಪುತ್ರ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ನಿವೃತ್ತ ಎಸ್‌ಐ ನಿಧನ

ನೀರ್ಚಾಲು: ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಬೇಳ ಚರ್ಚ್ ಬಳಿಯ ನಿವಾಸಿ ಪ್ರಭಾಕರನ್ ಬಿ (70) ನಿಧನಹೊಂದಿದರು. ಇವರು ಬೇಡಗಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್‌ರಾಜ್, ವಿವೇಕ್‌ರಾಜ್ (ಗಲ್ಫ್ ಉದ್ಯೋಗಿಗಳು), ಶ್ವೇತಪ್ರಭ, ಅಳಿಯ ಪ್ರದೀಪ್‌ಕೃಷ್ಣ (ಕುಂಬಳೆ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿ), ಸೊಸೆಯಂದಿರಾದ ರಮ್ಯ, ಅಸ್ತಿಕ, ಸಹೋದರರಾದ ನಾರಾಯಣನ್, ಸುಭಾಷ್, ಜಯಕರ, ಸಹೋದರಿ ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ  ಸೂರ್ಯಕುಮಾರ್, ಹರಿಶ್ಚಂದ್ರ, …

ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನ

ತಿರುವನಂತಪುರ: ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ ಕೇರಳದಲ್ಲಿ  ಜ್ಯಾರಿಗೊಳಿಸಿರುವ ಒಟ್ಟು 10,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಅಪರಾಹ್ನ ನೆರವೇರಿಸಲಿರುವಂತೆಯೇ ಆ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ತಲಪ್ಪಾಡಿ-ಚೆಂಗಳ ಹಾಗೂ ಕಲ್ಲಿಕೋಟೆ ಬೈಪಾಸ್ ವೆಂಙಳಂ-ರಾಮನಾಟ್ಟುಕರೆ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ,  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಕಾರ ಕೇರಳದಲ್ಲಿ ನಿರ್ಮಿಸಲಾಗಿರುವ 23 ರಸ್ತೆಗಳ ಉದ್ಘಾಟನೆ, ಅಮೃತ್ ಭಾರತ್ ಸ್ಟೇಶನ್ ಯೋಜನೆ ಪ್ರಕಾರ ಶೊರ್ನೂರು ಜಂಕ್ಷನ್, …

ತಲಪ್ಪಾಡಿ-ಚೆಂಗಳ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಪ್ರಧಾನಮಂತ್ರಿಯಿಂದ ಇಂದು ಲೋಕಾರ್ಪಣೆ

ಕಾಸರಗೋಡು: ತಲಪ್ಪಾಡಿಯಿಂದ ಚೆಂಗಳ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಪರಾಹ್ನ ಲೋಕಾರ್ಪಣೆಗೈಯ್ಯುವರು. ಕೇರಳದಲ್ಲಿ ಲೋಕಾರ್ಪಣೆಗೈಯ್ಯುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಥಮ ರೀಚ್ ಎಂಬ ವಿಶೇಷತೆಯೂ ಇದು ಹೊಂದಿದೆ. ತಲಪ್ಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ 66 ಒಟ್ಟು 39 ಕಿ.ಮೀ. ಹೊಂದಿದೆ. ಇದರಲ್ಲಿ ನಗರದ ಕರಂದಕ್ಕಾಡ್‌ನಿಂದ ಆರಂಭಗೊಂಡು ನುಳ್ಳಿಪ್ಪಾಡಿ ತನಕದ 29 ಸ್ಪ್ಯಾನ್‌ಗಳು ಹೊಂದಿರುವ 1.13 ಕಿ.ಮೀ ತನಕದ ಫ್ಲೈಓವರ್ ಕೂಡಾ ಒಳಗೊಂಡಿದೆ. ಏಕಕಂಬದಿಂದ ನಿರ್ಮಿಸಲಾದ ಫ್ಲೈಓವರ್ ಎಂಬ ವಿಶೇಷತೆಯೂ …

ಕಾರಿನಲ್ಲಿ ಎಂಡಿಎಂಎ ಸಹಿತ ಸಂಚರಿಸುತ್ತಿದ್ದ ಇಬ್ಬರ ಬಂಧನ

ಮಂಜೇಶ್ವರ: ಕಾರಿನಲ್ಲಿ ಮಾರಕ ಮಾದಕವಸ್ತುವಾದ ಎಂಡಿಎಂಎ  ಸಹಿತ   ಪ್ರಯಾಣಿಸುತ್ತಿದ್ದ ಇಬ್ಬರನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಬಳಿಯ ಚರ್ಲಡ್ಕ ರಫಾ ಮಂ ಜಿಲ್‌ನ ಅಬೂಬಕ್ಕರ್ ಸಿದ್ದಿಕ್ (38), ತೆಕ್ಕಿಲ್ ಚಟ್ಟಂಚಾಲ್ ಕುನ್ನಾರು ನಿವಾಸಿ ಹಾರಿಸ್ ಪಿ (42) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ  3.21 ಗ್ರಾಂ ಎಂಡಿಎಂಎ, ಒಂದು ಇ ಸಿಗರೇಟ್, 12 ಪ್ಯಾಕೆಟ್ ಪಾನ್ ಮಸಲೆ ವಶಪಡಿಸಲಾಗಿದೆ. ಆರೋಪಿಗಳು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಸಂಜೆ 6.30ರ ವೇಳೆ ತಲಪ್ಪಾಡಿಯಲ್ಲಿ …

ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಅಧ್ಯಾಪಿಕೆ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮುಸಾಫರ್ ನಗರ್ ಮೆಹ್ಲಾಕಿಯ ಲೋಕೇಶ್ ಕುಮಾರ್ ಎಂಬವರ ಪುತ್ರಿ ಸುರಭಿಪಾಲ್ (29) ಮೃತ ಅಧ್ಯಾಪಿಕೆ. ನಿನ್ನೆ ರಾತ್ರಿ 9 ಗಂಟೆಗೆ ಕುಂಞಿಮಂಗಲಂ ಎಡಾಟ್‌ನ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. 2023 ಡಿ. 13ರಂದು ಸುರಭಿಪಾಲ್ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ನೇಮಕಗೊಂಡಿದ್ದರು. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತದೇಹವನ್ನು …

ಕುಂಬಳೆ ಬಳಿ ಕಾರು-ಬಸ್ ಢಿಕ್ಕಿ: ಹಲವರಿಗೆ : ಗಾಯ; ನಾಲ್ಕು ಮಂದಿಗೆ ಗಂಭೀರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ  ಇಂದು ಬೆಳಿಗ್ಗೆ ವಾಹನ ಅಪಘಾತ ಸಂಭವಿದ್ದು ಹಲವರು ಗಾಯಗೊಂಡಿದ್ದಾರೆ.  ಕಾರು ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ  ಕಾರು ಪ್ರಯಾಣಿಕರಾದ  ನಾಲ್ಕು ಮಂದಿ  ಗಂಭೀರ ಗಾಯಗೊಂಡಿದ್ದಾರೆ.  ಅಲ್ಲದೆ ಮಹಿಳೆ ಯರ ಸಹಿತ ಬಸ್ ಪ್ರಯಾಣಿಕರಾದ ಹಲವರಿಗೆ ಗಾಯಗಳಾಗಿವೆ. ಇಂದು ಬೆಳಿಗ್ಗೆ 8.30ರ ವೇಳೆ ಶಾಂತಿಪಳ್ಳ ಅಬಕಾರಿ ಕಚೇರಿ ಸಮೀಪ ಅಪಘಾತವುಂಟಾಗಿದೆ. ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು  ಹಾಗೂ ಕುಂಬಳೆಗೆ ಬರುತ್ತಿದ್ದ  ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂ ಟಾಗಿದೆ. …

ಕೆಂಪುಕಲ್ಲು ಕ್ವಾರೆಯ ಧೂಳಿನಿಂದ ಸ್ಥಳೀಯರಿಗೆ ಸಂಕಷ್ಟ: ಕುಂಬಳೆ ಬದ್ರಿಯ ನಗರದಲ್ಲಿ ಹಲವಾರು ಮಂದಿಗೆ ಗಂಭೀರ ರೋಗ

ಕುಂಬಳೆ: ಪಂಚಾಯತ್‌ನ ಬದ್ರಿಯನಗರದಲ್ಲಿ ಕಾನೂನು ವಿರುದ್ಧವಾಗಿ ಕಾರ್ಯಾಚರಿಸುವ ಕೆಂಪುಕಲ್ಲು ಕ್ವಾರೆಯ ಧಳಿನಿಂದಾಗಿ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಕೆಮ್ಮು, ತುರಿಕೆಯಿಂದ ಬಳಲು ತ್ತಿರುವುದಾಗಿ ದೂರಿದ್ದಾರೆ. ಈ ಬಗ್ಗೆ ಯಾರಲ್ಲಿ ಪ್ರಶ್ನಿಸಬೇಕೆಂದರಿಯದೆ ಸ್ಥಳೀಯರು ತಮ್ಮ ವಿಧಿ ಎಂದು ಸಮಾಧಾನಹೊಂದಿರುವುದಾಗಿ ಹೇಳಲಾಗುತ್ತಿದೆ. ಅಂಗನವಾಡಿ ರಸ್ತೆ ಪರಿಸರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕ್ವಾರೆಯಿಂದಿರುವ ಕೆಂಪುಕಲ್ಲಿನ ಧೂಳಿನಿಂದಾಗಿ ೨೦ರಷ್ಟು ಕುಟುಂಬಗಳು ರೋಗಕ್ಕೆ ತುತ್ತಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ವರ್ಷಗಳಿಂದ ಜನವಾಸ ಕೇಂದ್ರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕೆಂಪುಕಲ್ಲು ಕ್ವಾರೆಗಳು ಸ್ಥಳೀಯರಿಗೆ ಬೆದರಿಕೆ ಸೃಷ್ಟಿಸಿದೆ ಎಂದು ದೂರಲಾಗಿದೆ. ಧೂಳು ಮಕ್ಕಳು ಹಾಗೂ …

ಮಂಜೇಶ್ವರದಲ್ಲಿ ವೈಭವಪೂರ್ಣ ಹಿಂದೂ ಸಂಗಮ

ಮಂಜೇಶ್ವರ: ಆರ್‌ಎಸ್‌ಎಸ್ ಶತಾಬ್ದಿ ಹಿನ್ನೆಲೆಯಲ್ಲಿ ಮಂಜೇಶ್ವರ ಹಿಂದೂ ಸಂಗಮ ಆಯೋಜನಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಮಂಜೇಶ್ವರ ಹಿಂದೂ ಸಂಗಮದ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖ ರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಗೈದು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಹನಾ ಕುಂದರ್ ಸೂಡ ದಿಕ್ಸೂಚಿ ಭಾಷಣ ಮಾಡಿದರು.ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ನೌಕಾದಳ ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ …

ಬಿಜೆಪಿ ಹಲ್ಲೆ ಆರೋಪಿಸಿ ಎಂಎಸ್‌ಎಫ್ ಪ್ರತಿಭಟನೆ

ಕಾಸರಗೋಡು: ಬದಿಯಡ್ಕ ಪೇಟೆಯಲ್ಲಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಪ್ರಧಾನ ಕಾರ್ಯದರ್ಶಿ ಸಿರಾಜ್ ಬದಿಯಡ್ಕ ಸಹಿತವಿರುವ ನಾಲ್ಕು ಎಂಎಸ್‌ಎಫ್ ಕಾರ್ಯಕರ್ತರನ್ನು ಬಿಜೆಪಿ ತಂಡ ವಿನಾಕಾರಣ ಹಲ್ಲೆಗೈದಿದೆ ಎಂದು ಆರೋಪಿಸಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯ ಉಪಾಧ್ಯಕ್ಷ ಅನಸ್ ಎದುರ್ತೋಡು, ಸಲಾಂ ಬೆಳಿಂಜ, ಅಲ್ತಾಫ್ ಪೊವ್ವಲ್, ಶಾನಿಫ್ ನೆಲ್ಲಿಕಟ್ಟೆ, ಯೂಸುಫ್ ದಾರಿಮಿ, ಹಾಶಿರ್ ಮೊಯ್ದೀನ್, ಹಮೀದ್ ಕೆಡೆಂಜಿ, ಅರ್ಫಾತ್ ಕಂಬಾರ್, ಜಸಿಲ್ ತುರುತ್ತಿ, ಮುನ್ವರ್ ಫೈರೂಸ್, ರಾದಿನ್ ಅನ್ವಫ್ ನೇತೃತ್ವ ನೀಡಿದರು.