ನುಳ್ಳಿಪ್ಪಾಡಿಯಲ್ಲಿ ಲಿಫ್ಟ್ ಹೊಂಡದಲ್ಲಿ ಮೃತದೇಹ ಪತ್ತೆ ಪ್ರಕರಣ :ಯುವಕನ ಸಾವು ಕೊಲೆಯೆಂದು ಸಾಬೀತು; ಇಬ್ಬರು ಪೊಲೀಸ್ ಕಸ್ಟಡಿಗೆ
ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್ ನಿರ್ಮಿಸಲು ತೋಡಲಾದ ನೀರು ತುಂಬಿದ ಹೊಂಡದಲ್ಲಿ ಮೊನ್ನೆರಾತ್ರಿ ಪತ್ತೆಯಾದ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಲಭಿಸಿದ್ದು, ಇದರಲ್ಲಿ ವ್ಯಕ್ತಿಯ ಸಾವು ಕೊಲೆಯಾಗಿದೆ ಯೆಂದು ಸ್ಪಷ್ಟಗೊಂಡಿದೆ. ಮಾತ್ರವಲ್ಲ ಕೊಲೆಗೈಯ್ಯಲ್ಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮೃತ ವ್ಯಕ್ತಿ ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲಹೊಸೂರು ನಿವಾಸಿ ಚಂದ್ರಶೇಖರ್ ಸುರೇಶ್ ಪಟ್ಟಾಡ್ (38) ಎಂಬವರೆಂದು ಗುರುತಿಸಲಾಗಿದೆ. ಇವರು ವಲಸೆ ಕಾರ್ಮಿಕನಾಗಿದ್ದರು. …