ಭಾಸ್ಕರನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ  ಕುಂಬಳೆ ಭಾಸ್ಕರನಗರ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್, ನವೋದಯ ವುಮೆನ್ಸ್ ವಿಂಗ್ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಪ್ರೊ| ಮುಬೀನ ಫರ್ವೀನ್ ತಾಜ್ ಮಹಿಳಾ ದಿನಾಚರಣೆಯ ಥೀಮ್ ಬಣ್ಣಗಳ ಮಹತ್ವವನ್ನು ವಿವರಿಸಿದರು. ಅಂತಾರಾಷ್ಟ್ರೀಯ ಜಾದು ಪ್ರಶಸ್ತಿ ವಿಜೇತೆ ಕಲಾಸೃಷ್ಠಿ ತಂಡದ ನಿರ್ದೇಶಕಿ ಶಮಾ ಪರ್ವೀನ್ ತಾಜ್ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವ ಎಂದು ತಿಳಿಸಿದರು. …