ಯುವಕ-ಯುವತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣ: ಇನ್ನೋರ್ವ ಆರೋಪಿ ಕಸ್ಟಡಿಗೆ: ಪೊಲೀಸರ ಮೇಲೆ ತಂಡದಿಂದ ಕಲ್ಲೆಸೆತ, ಬೆದರಿಕೆ: 8 ಮಂದಿ ವಿರುದ್ಧ ಕೇಸು

ಉಪ್ಪಳ: ಹೊಸಂಗಡಿಯ  ವಸತಿಗೃಹದ ಕೊಠಡಿಗೆ ನುಗ್ಗಿ ಯುವಕ ಹಾಗೂ ಯುವತಿಯ ಅರೆನಗ್ನ ಫೋಟೋ, ವೀಡಿಯೋ ಚಿತ್ರೀಕರಿಸಿ  ಹಲ್ಲೆಗೈದು ಬೆದರಿಕೆಯೊಡ್ಡಿದ ಪ್ರಕರಣ ದಲ್ಲಿ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಇದೇ ವೇಳೆ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಹೋದ ಪೊಲೀಸರ ಮೇಲೆ ತಂಡವೊಂದು ಕಲ್ಲೆ ಸೆದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಕಲ್ಲೆಸೆತದಿಂದ ಇಬ್ಬರು ಪೊಲೀಸರು ಗಾಯಗೊಂ ಡಿದ್ದಾರೆ.  ಘಟನೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಹೈದರಾಲಿ ಎಂಬಾತನನ್ನು ಕಸ್ಟಡಿಗೆ ತೆಗೆದಿರುವುದಾಗಿ ಪೊಲೀ …

ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹ ಊರಿಗೆ

ಬದಿಯಡ್ಕ: ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹವನ್ನು ಇಂದು ಮುಂಜಾನೆ ಊರಿಗೆ ತಲುಪಿಸಲಾಯಿತು. ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40)ಯವರ ಮೃತದೇಹವನ್ನು ಇಂದು ಮುಂಜಾನೆ 3 ಗಂಟೆಗೆ ಮನೆಗೆ ತಲುಪಿಸಲಾಯಿತು. ಬಳಿಕ ಮಾನ್ಯ ಚುಕ್ಕಿನಡ್ಕದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಂಗಮಾಲಿ ಕರೆಯಂಪರಂಬ್‌ನ ಇಂಡ್ಯನ್ ಮಲ್ಟಿಪಲ್ ಕೋ-ಓಪರೇಟಿವ್ ಸೊಸೈಟಿಯ ಬ್ರಾಂಚ್‌ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಅಚ್ಯುತಾನಂದ ಶೆಣೈ ಮೊನ್ನೆ ಬೆಳಿಗ್ಗೆ …

ಡಾಮರೀಕರಣ ಬಳಿಕ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ರಸ್ತೆಯ ಡಾಮರು ನಾಶದತ್ತ

ಕುಂಬಳೆ: ರಸ್ತೆಗೆ ಡಾಮರೀಕರಣ ನಡೆಸಿ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು  ಎದ್ದು ರಸ್ತೆ ಮತ್ತೆ ಪೂರ್ವಸ್ಥಿತಿಗೆ ತಲುಪತೊಡಗಿದೆ.  ಕುಂಬಳೆ-ಮಾಟೆಂಗುಳಿಯ 400 ಮೀಟರ್ ರಸ್ತೆಗೆ ಇತ್ತೀಚೆಗೆ ಡಾಮರೀಕರಣ ನಡೆಸಲಾಗಿದೆ. ಕಾಮಗಾರಿಯ ಬಳಿಕ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು ಎದ್ದು ಮತ್ತೆ ರಸ್ತೆ ಹಾನಿಯಾಗುವ ಸ್ಥಿತಿಗೆ ತಲುಪತೊಡಗಿದೆ. ಡಾಮರು ಹಾಗೂ ಬೇಬಿ ಜಲ್ಲಿ ಉಪಯೋಗಿಸಿ ರಸ್ತೆಗೆ ನಡೆಸಿದ ಡಾಮರೀಕರಣದಲ್ಲಿ ಲೋಪವುಂಟಾಗಿರುವುದಾಗಿಯೂ ಇದುವೇ ರಸ್ತೆ ಮತ್ತೆ ಕಳಪೆಯಾಗಲು ಕಾರಣವಾಗಿದೆಯೆಂದು ನಾಗರಿಕರು ಹೇಳುತ್ತಿದ್ದಾರೆ. ಐದು ಲಕ್ಷ ರೂ.ವ್ಯಯಿಸಿ ನಡೆಸಿದ ಡಾಮರೀಕರ ಣದಿಂದ ನಾಡಿಗೆ …

ರಾಜ್ಯದಲ್ಲಿ ವಿದ್ಯುತ್ ನಿಯಂತ್ರಣ ಹೇರಿಕೆ ಇಲ್ಲ- ಸಚಿವ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಪವರ್ ಕಟ್ ಆಗಲೀ ಲೋಡ್ ಶೆಡ್ಡಿಂಗ್ ಆಗಲೀ ಏರ್ಪಡಿಸಲಾಗುವುದಿಲ್ಲವೆಂದು ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದಾರೆ. ರಾಜ್ಯ ತೀವ್ರ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದೆಯಾದರೂ ಅದರ ಹೆಸರಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ನಿಯಂತ್ರಣ ಹೇರಲಾಗುವುದಿಲ್ಲ. ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ರೀತಿಯ ಕ್ರಮ ಈ ವಿಷಯದಲ್ಲಿ ಸರಕಾರದ ವತಿಯಿಂದ ಉಂಟಾಗದು ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮ ದೇಶದಾದ್ಯಂತವಾಗಿ ಭಾರೀ …

ಮನೆ ಬೆಂಕಿಗಾಹುತಿ: ಲಕ್ಷಾಂತರ ರೂ.ಗಳ ನಾಶನಷ್ಟ

ಕಾಸರಗೋಡು: ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಮನೆಯೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಪಾಲಕುನ್ನು- ಆರಾಟುಕಡವು ರಸ್ತೆಯ ಕಣಿಯಂಬಾಡಿ ಎಂಬಲ್ಲಿನ ಕೆ. ಕುಂಞಿರಾಮನ್ ಎಂಬವರ ಜನವಾಸವಿಲ್ಲದ ಮನೆ ಬೆಂಕಿಗಾಹುತಿಯಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಘಟನೆ ಸಂಭವಿಸಿದೆ. ಕುಂಞಿರಾಮನ್ ಹಾಗೂ ಕುಟುಂಬ ಸಮೀಪದಲ್ಲೇ ಇರುವ ಬೇ ರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ರಾತ್ರಿ ಕುಂಞಿರಾಮನ್ ಹಾಗೂ ಕುಟುಂಬ ತೃಕ್ಕನ್ನಾಡ್ ಕ್ಷೇತ್ರಕ್ಕೆ ತೆರಳಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆ ಮರಳಿ ಬಂದಿದ್ದಾರೆ. ಆ ವೇಳೆ …

ಮಾಜಿ ಅನಿವಾಸಿಯ ಹಿತ್ತಿಲು ಹಾಗೂ ತಾರಸಿಯಲ್ಲಿ ತರಕಾರಿ ತೋಟ : ಹೊಸತನದ ಕೃಷಿಯಲ್ಲಿ ನೂರು ಶೇ. ಫಸಲು ಪಡೆದ ಎಂಜಿಎ ರಹ್ಮಾನ್

ಮೊಗ್ರಾಲ್: ಸುಮ್ಮನೆ ಮನೆಯಲ್ಲಿ ಕುಳಿತಿರುವಾಗ ಉದಾಸೀನತೆ ಉಂಟಾದ ಅನಿವಾಸಿ ಮನೆ ಹಾಗೂ ಮನೆಯ ತಾರಸಿಯಲ್ಲಿ ಕೃಷಿ ಕೈಗೊಂಡದ್ದು ಫಲ ನೀಡಿತು. ಇವರ ಶ್ರಮಕ್ಕೆ 100 ಶೇಕಡಾ ಫಲಿತಾಂಶ ಲಭಿಸಿದೆ. ಮೊಗ್ರಾಲ್‌ನ ಅನಿವಾಸಿ, ಸಾಮಾಜಿಕ ಕಾರ್ಯಕರ್ತನಾದ ಎಂ.ಜಿ.ಎ. ರಹ್ಮಾನ್‌ರ ಈ ಕಾರ್ಯವನ್ನು ಕಂಡು ಸ್ಥಳೀಯರು ಮೂಗಿಗೆ ಬೆರಳಿಟ್ಟರು. ಕಳೆದ ಮೂರು ದಶಕಗಳಿಂದ ದುಬಾಯಿಯ  ಪ್ರವಾಸಿ ಬದುಕು ಕೊನೆಗೊಳಿಸಿದ ಎಂಜಿಎ ರಹ್ಮಾನ್ ಊರಿಗೆ ಹಿಂತಿರುಗಿದಾಗ ಮನೆಯಲ್ಲಿ ವಿಶ್ರಾಂತಿ ವೇಳೆ ಏನಾದರೂ ಕೆಲಸ ಬೇಕಲ್ಲ ಎಂಬ ಆಲೋಚನೆಯಲ್ಲಿ ತರಕಾರಿ ತೋಟ ಮಾಡಿದರೆ …

ಸೋಂಕಾಲ್‌ನಲ್ಲಿ ಎನ್‌ಡಿಎ ಚುನಾವಣಾ ಕಚೇರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಂದ ಉದ್ಘಾಟನೆ 16ರಂದು

ಮಂಗಲ್ಪಾಡಿ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟನೆ ಈ ತಿಂಗಳ 16ರಂದು ಬೆಳಿಗ್ಗೆ 10.30ಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲ್‌ನಲ್ಲಿ ನಡೆಯಲಿದೆ. ಕೇಂದ್ರ ಕಾರ್ಮಿಕ, ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವೆ ಹಾಗೂ ಕೇರಳ ವಿಧಾನಸಭಾ ಚುನಾವಣಾ ರಾಜ್ಯ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಕರ್ನಾಟಕ, ಕೇರಳ ರಾಜ್ಯದ ಬಿಜೆಪಿ ಮುಖಂಡರು, ಜಿಲ್ಲಾ ಮಂಡಲ ಪಂಚಾಯತ್ ಮಟ್ಟದ ಮುಖಂಡರು ಭಾಗವಹಿಸುವರು. ಉದ್ಘಾಟನೆಯ ಬಳಿಕ ವಿಧಾನಸಭಾ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ …

ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 7ನೇ ಪ್ರತಿಷ್ಠಾ ವಾರ್ಷಿಕ ಉತ್ಸವ ನಿನ್ನೆ ರುಧ್ರಾಭಿಷೇಕ, ಕ್ಷೀರಾಭಿಷೇಕ, ನವಕಾಭಿಷೇಕ, ವಿಶೇಷ ಮಹಾಪೂಜೆ ಜರಗಿತು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನಿರ್ದೇಶ ನೀಡಿದರು. ಸಂಜೆ ದೀಪಾರಾಧನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ಹಾಗೂ ಕುಣಿತ ಭಜನೆ, ಮಹಾಪೂಜೆ ಜರಗಿತು.ಕ್ಷೇತ್ರದ ಮುಖ್ಯ ಅರ್ಚಕ ಶಿವಶಂಕರ ಅಡಿಗ ಪ್ರಾರ್ಥನೆಗೈದರು. ಈ ಸಂಧರ್ಭದಲ್ಲಿ ಬಾಲ ಗೋಕುಲದ ಅಧ್ಯಾಪಿಕೆ ಶ್ರೀಲತಾ ಟೀಚರ್, ಪ್ರಮುಖರಾದ ಎಕ್ಸ್ ಟ್ರಸ್ಟೀ ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, …

ಜ್ಯೂನಿಯರ್ ನ್ಯಾಯವಾದಿಗಳಿಗೆ ಸ್ಟೈಫಂಡ್ ಕೂಡಲೇ ನೀಡಬೇಕು- ಅಭಿಭಾಷಕ ಪರಿಷತ್

ಕಾಸರಗೋಡು: ಜ್ಯೂನಿಯರ್ ನ್ಯಾಯವಾದಿಗಳಿಗೆ ಘೋಷಿಸಿದ 5000 ರೂ. ಪ್ರತೀ ತಿಂಗಳ ಸ್ಟೈಫಂಡ್ ಕೂಡಲೇ ನೀಡಲು ಆರಂಭಿಸಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮ್ಮೇಳನ ಠರಾವಿನಲ್ಲಿ ಆಗ್ರಹಿಸಿದೆ. ವಕಾಲತ್‌ಗಳಿಗೆ ೨೫ ರೂ.ಗಳ ಸ್ಟೈಫಂಡ್ ಸ್ಟಾಂಪ್ ಕಡ್ಡಾಯಗೊಳಿಸಿ, ವೆಲ್ಫೇರ್ ಫಂಡ್ ಸ್ಟಾಂಪ್ ೨೫ ರೂ.ನಿಂದ 100 ರೂ. ಆಗಿ ಹೆಚ್ಚಿಸಿ ನ್ಯಾಯವಾದಿಗಳ ಹೊರೆ ಹೆಚ್ಚಿಸಲಾಗಿದೆ. ಲೀಗಲ್ ಬೆನಿಫಿಟ್ ಫಂಡ್ ಸ್ಟಾಂಪ್ ರೂಪದಲ್ಲಿ ಲಭಿಸುವ ಬೃಹತ್ ಮೊತ್ತ ಸರಕಾರದ ಟ್ರಷರಿ ಅಕೌಂಟ್‌ಗೆ ಬಡ್ಡಿರಹಿತವಾಗಿ ಬದಲಿಸಲಾಗುತ್ತಿದೆ. ಪ್ರಸ್ತುತ ಮೊತ್ತಕ್ಕೆ ಸರಿಯಾದ ಬಡ್ಡಿ ನೀಡಲು …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ರಿಸ್ಕ್ ಫಂಡ್, ಸದಸ್ಯರ ಕ್ಷೇಮನಿಧಿ ವಿತರಣೆ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ರಿಸ್ಕ್ ಫಂಡ್, ಸದಸ್ಯರ ಕ್ಷೇಮ ನಿಧಿ ಯೋಜನೆ ಫಲಾ ನುಭವಿಗಳಿಗೆ ಬ್ಯಾಂಕ್ ವತಿಯಿಂದ ಕೇರಳ ಸರಕಾರದಿಂದ ಕೊಡಲ್ಪಡುವ ರಿಸ್ಕ್ ಫಂಡ್, ಕ್ಷೇಮ ನಿಧಿಯನ್ನು ಸಹಕಾರಿ ಇಲಾಖೆಯ ನೂತನ ಪರಿ ಶೋಧಕ ಜಯರಾಮ್ ಮತ್ತು ಬ್ಯಾಂಕಿನ ಅಧ್ಯಕ್ಷ ಮೊಹಮ್ಮದ್ ಹನೀಫ್ ವಿತರಿಸಿದರು. ಉಪಾಧ್ಯಕ್ಷ ಸತ್ಯನಾರಾ ಯಣ ಭಟ್, ನಿರ್ದೇಶಕರಾದ ರಾಬಿಯಾ, ನಿಕೋಲಸ್ ಮೊಂತೇರೊ, ವಿನೋದ್ ಕುಮಾರ್, ಸುನಿತಾ ಡಿ ಸೋಜಾ, ಪ್ರವೀಣ ಕೆ, ಜಗದೀಶ್ ಚೆಂಡ್ಲ, ತುಳಸಿ ಕುಮಾರಿ, ಉಪಸ್ಥಿತರಿದ್ಧರು. ಕಾರ್ಯದರ್ಶಿ …