ಮನೆಯವರು ಉತ್ಸವಕ್ಕೆ ಹೋದ ಸಂದರ್ಭ 25 ಪವನ್ ಚಿನ್ನ ಕಳವು: ಇಬ್ಬರ ಬಂಧನ ; 22 ಪವನ್ ಚಿನ್ನ ಪತ್ತೆ

ಕಾಸರಗೋಡು: ಮನೆಯವರು  ಉತ್ಸವಕ್ಕೆ ಹೋದ ಸಂದರ್ಭದಲ್ಲಿ ೨೫ ಪವನ್ ಚಿನಾಭರಣ ಕಳವುಗೈದ ಕುಖ್ಯಾತ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕ, ಚೆರುಂಬಾ ಅಹದ್ ಮಂಜಿಲ್‌ನ ಎ.ಎಚ್. ಹಾಶಿಂ (45), ಕಾಸರಗೋಡು ವಿದ್ಯಾನಗರದ ಮನೋಜ್ (49) ಎಂಬಿವರನ್ನು ಪಟ್ಟಾಂಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಶೋರ್ನೂರು ಕುಟ್ಟನಾಡು ತೊಳುಕ್ಕಾಡ್  ಹರಿ ಭವನ್‌ನ ಸುಧೀರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ನಡೆದಿದೆ.  ಸುಧೀರ್ ಹಾಗೂ ಕುಟುಂಬ ಆಮಕ್ಕಾವ್ ಕ್ಷೇತ್ರಕ್ಕೆ ಉತ್ಸವಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ …

ವ್ಯಕ್ತಿಪಲ್ಲಟ ನಡೆಸಿ ಪ್ಲಸ್‌ಟು ಪರೀಕ್ಷೆಗೆ ಹಾಜರಾದ ಯುವಕ ಬಂಧನ ; ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲು

ಕುಂಬಳೆ: ವ್ಯಕ್ತಿಪಲ್ಲಟ ನಡೆಸಿ ಯುವಕನೋರ್ವ ಪ್ಲಸ್‌ಟು ಪರೀಕ್ಷೆ ಬರೆದಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿ.ಎಸ್. ಬಿನು ನೀಡಿದ ದೂರಿನಂತೆ  ಕೇಸು ದಾಖಲಿಸಿ ಕೊಂಡ ಕುಂಬಳೆ ಪೊಲೀಸರು ವ್ಯಕ್ತಿ ಪಲ್ಲಟ ನಡೆಸಿದಾತನನ್ನು ಬಂಧಿಸಿ ದ್ದಾರೆ. ಬಂಬ್ರಾಣ ಅಂಡಿತ್ತಡ್ಕದ ಮುಹಮ್ಮದ್ ಮುಕ್ತಾರ್ (20) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್.ಐ ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ.  ಘಟನೆಗೆ ಸಂಬಂಧಿಸಿ ಪ್ಲಸ್‌ಟು  ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲಿಸಲಾಗಿದೆ. …

ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಯುವತಿ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಯುವತಿ ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಬಂಬ್ರಾಣ ಕೊಟ್ಯದ ಮನೆ ನಿವಾಸಿಯೂ ಕಾಸರಗೋಡಿ ನಲ್ಲಿ ಲಾಟರಿ ಮಾರಾಟಗಾರನಾದ ಉದಯ ಪೂಜಾರಿಯವರ ಪತ್ನಿ ಆರ್. ವಿಜಯ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪ್ರಸ್ತುತ ಇವರು ಕಾಸರಗೋಡು ಉಮಾ ನರ್ಸಿಂಗ್ ಹೋಂ ಬಳಿಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಆರ್. ವಿಜಯ ಕಾಸರಗೋಡು ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿಯ ಅಧೀನದಲ್ಲಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮೀಪ ದಲ್ಲಿರುವ …

ಕಾಸರಗೋಡು ಮಂಡಲದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಸಮಸ್ಯೆ: ಜಿಲ್ಲಾ ಪದಾಧಿಕಾರಿಗಳು, ಎನ್.ಎ ನೆಲ್ಲಿಕುನ್ನು ಪಾಣಕ್ಕಾಡ್‌ಗೆ

ಕಾಸರಗೋಡು: ಕಾಸರಗೋಡು ಮಂಡಲದ ಮುಸ್ಲಿಂ ಲೀಗ್ ಅಭ್ಯರ್ಥಿ  ನಿರ್ಣಯ ಸಮಸ್ಯೆಯನ್ನು  ಪರಿಹರಿಸಲು  ಮುಸ್ಲಿಂ ಲೀಗ್ ಜಿಲ್ಲಾ ಪದಾಧಿಕಾರಿಗಳನ್ನು ಹಾಗೂ ಶಾಸಕ ಎನ್.ಎ. ನೆಲ್ಲಿಕುನ್ನು ಅವರನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ  ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್‌ಗೆ ಕರೆಸಿದ್ದಾರೆ.  ಇದರಂತೆ ನೇತಾರರು ಶೀಘ್ರ ಪಾಣಕ್ಕಾಡ್‌ಗೆ ತೆರಳಲಿದ್ದಾರೆ.    ಮುಸ್ಲಿಂ ಲೀಗ್‌ನ ಪರಂಪರಾಗತ ಮಂಡಲವಾದ ಕಾಸರಗೋಡಿನಲ್ಲಿ  ಸ್ಪರ್ಧಿಸುವ ಬಗ್ಗೆ   ಮಂಡಲ ಹಾಗೂ ಜಿಲ್ಲೆಯ ಹೊರಗಿನವರಾದ  ಲೀಗ್ ನೇತಾರ  ಕೆ.ಎಂ. ಶಾಜಿ ಈ ಮೊದಲು ಆಸಕ್ತಿ ಹೊಂದಿದ್ದರು. ಮೊದಲ ಹಂತದಲ್ಲಿ ಈ ಬಗ್ಗೆ …

ಕೇರಳದಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿಯಾಗಲಿದೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಪ್ಪಳ: ಕೇರಳದಲ್ಲಿ ಈ ಬಾರಿ ಬಿಜೆಪಿ ನಿರ್ಣಾಯಕ ರಾಜ್ಯಕೀಯ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರ ಸಚಿವೆ, ಕೇರಳ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ನುಡಿದರು. ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲ್‌ನಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ ದರು. ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾ ರರು ಸಿದ್ಧರಾಗಿದ್ದಾರೆ ಎಂದು ಸಚಿವೆ ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅಧ್ಯಕ್ಷತೆ ವಹಿಸಿದರು. ಅಭ್ಯರ್ಥಿ ಕೆ. ಸುರೇಂದ್ರನ್, ದ.ಕ. ಜಿಲ್ಲೆಯ …

ಮುಂಡೋಳು ಕ್ಷೇತ್ರದ ನೂತನ ಧ್ವಜಸ್ತಂಭ ಶೋಭಾಯಾತ್ರೆ ಮೂಲಕ ಸನ್ನಿಧಿಗೆ

ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು, ದುರ್ಗಾಪರಮೇಶ್ವರಿ, ಶಾಸ್ತಾರ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಿರುವ ನೂತನ ಧ್ವಜಸ್ತಂಭದ ಶೋಭಾಯಾತ್ರೆ ನಿನ್ನೆ ನಡೆಯಿತು. ಬೆಳಿಗ್ಗೆ ಪಿಲಾಂಕಟ್ಟೆ ಬಳಿಯ ಕೋಳಾರಿಯಿಂದ ಮಾವಿನಕಟ್ಟೆ ನಾರಂಪಾಡಿ ಮೂಲಕ ಕ್ಷೇತ್ರಕ್ಕೆ ಧ್ವಜಸ್ತಂಭದ ಮರವನ್ನು ಶೋಭಾಯಾತ್ರೆ ಮೂಲಕ ತರಲಾಯಿತು. ಸಂಜೆ ವೇಳೆಗೆ ಶೋಭಾಯಾತ್ರೆ ಕ್ಷೇತ್ರಕ್ಕೆ ತಲುಪಿದೆ. ಹಲವಾರು ಮಂದಿ ಭಾಗವಹಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯುವ ನಿರೀಕ್ಷೆ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧ್ವಜಸ್ತಂಭದ ಪ್ರತಿಷ್ಠೆ ನಡೆಯಲಿದೆ.

ಕುಂಟಾರಿನಲ್ಲಿ ಯಶಸ್ವಿಗೊಂಡ ಸಾಹಿತ್ಯೋತ್ಸವ

ಮುಳ್ಳೇರಿಯ: ಕುಂಟಾರು ಎ.ಯು.ಪಿ ಶಾಲೆ ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕ, ಹಳೆವಿದ್ಯಾರ್ಥಿಗಳ ಸಂಘ ಎ.ಯು.ಪಿ.ಶಾಲೆ ಕುಂಟಾರು ಇವರ ಸಹಕಾರದೊಂದಿಗೆ ಕುಂಟಾರು ಸಾಹಿತ್ಯೋತ್ಸವ ಕುಂಟಾರು ಶಾಲೆಯಲ್ಲಿ ನಡೆಯಿತು.ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಸಾಹಿತ್ಯೋತ್ಸವ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿ ದರು. ಸಾಹಿತ್ಯ ಗ್ರಾಮೀಣ ಪ್ರದೇಶದ ಜನರ ಹೃದಯ ಮುಟ್ಟುವಲ್ಲಿ ಕುಂಟಾರು ಸಾಹಿತ್ಯೋತ್ಸವದಂತಹ ಕಾರ್ಯಕ್ರಮ ದಿಂದ ಸಾಧ್ಯ ಎಂದು ಅವರು ಹೇಳಿದರು. ಕನ್ನಡದಲ್ಲಿ …

ರೈಲು ಪ್ರಯಾಣ ಮಧ್ಯೆ ಮಾದಕ ಬಿಸ್ಕೆಟ್ ನೀಡಿ ಯುವಕನ ಚಿನ್ನ, ನಗದು ಕಳವು: 3 ಮಂದಿ ಸೆರೆ

ಕಲ್ಲಿಕೋಟೆ: ರೈಲು ಪ್ರಯಾಣ ಮಧ್ಯೆ ಮಾದಕ ಬಿಸ್ಕೆಟ್ ನೀಡಿ ಪ್ರಜ್ಞಾಹೀನ ಗೊಳಿಸಿ ಯುವಕನ ಚಿನ್ನ ಹಾಗೂ ಲ್ಯಾಪ್‌ಟಾಪ್ ಕಳವು ಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ನಡೆದ 24 ಗಂಟೆಗಳೊಳಗೆ ಕಲ್ಲಿಕೋಟೆಯಿಂದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ. ವಡಗರ ಪುದುಪಣಂ ನಿವಾಸಿ ವಿ.ಪಿ. ಸರೀನ್‌ರ ಚಿನ್ನ ಹಾಗೂ ಹಣ ಒಳಗೊಂಡ ಬ್ಯಾಗನ್ನು ಕಳವುಗೈಯ್ಯ ಲಾಗಿತ್ತು. ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ರೈಲ್ವೇ ಪೊಲೀಸರು ಹಾಗೂ ಆರ್‌ಪಿಎಫ್ ಜಂಟಿಯಾಗಿ ಪ್ರತ್ಯೇಕ ತಂಡ …

ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ- ಕೆ. ಸುರೇಂದ್ರನ್

ಕುಂಜತ್ತೂರು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರಿಗೆ ಬಿಜೆಪಿ ಮಂಜೇಶ್ವರ ಪಂ. ಸಮಿತಿ ವತಿಯಿಂದ ತೂಮಿ ನಾಡುನಲ್ಲಿ ಸ್ವಾಗತ ನೀಡಲಾಯಿತು. ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಹೊರ ಬಂದ ಬಳಿಕ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ವೇಳೆ ನಡೆದ ಸಭೆಯಲ್ಲಿ ಕೆ. ಸುರೇಂದ್ರನ್ ಮಾತನಾಡಿ, ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಕಳೆದ ೪೦ ವರ್ಷಗಳಿಂದ ಇಲ್ಲಿ ಗೆಲ್ಲುತ್ತಿರುವ ಪಕ್ಷಗಳು ಮಂಜೇಶ್ವರವನ್ನು ಹಿಂದುಳಿದ ಪ್ರದೇಶವನ್ನಾಗಿ ಮಾಡಿರುವುದಾಗಿ ಅವರು ಆರೋಪಿಸಿದರು. ಬಿಜೆಪಿ ಮಂಜೇಶ್ವರ ಮಂಡಲ …