ಮುಳ್ಳೇರಿಯ: ಡಾ| ಮನೋಹರ್ ದಂಪತಿಗೆ ಐಡಿಎ ಎಕ್ಸಲೆನ್ಸ್ ಅವಾರ್ಡ್

ಮುಳ್ಳೇರಿಯ: ಮುಳ್ಳೇರಿಯದ ಖ್ಯಾತ ದಂತ ವೈದ್ಯರಾದ ಡಾ|ಮನೋಹರ್ ಮುಳ್ಳಂಕೊಚ್ಚಿ ಮತ್ತು ಡಾ| ಅನುಪಮಾ ಮನೋಹರ್ ದಂಪತಿಗೆ ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕೇರಳ ರಾಜ್ಯ ಘಟಕ ನೀಡುವ ಪ್ರತಿಷ್ಠಿತ  ಐಡಿಎ ಎಕ್ಸಲೆನ್ಸ್  ಅವಾರ್ಡ್ 2026 ಪ್ರದಾನ ಮಾಡಲಾಯಿತು. ವೈದ್ಯಕೀಯ ರಂಗದಲ್ಲಿ ಈ ದಂಪತಿ ನಡೆಸುತ್ತಿರುವ ಸ್ತುತ್ಯರ್ಹ ಸೇವೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಕಲ್ಲಿಕೋಟೆಯ ಆಸ್ಟಿನ್  ಕೋರ್ಟ್ ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿರಿಯ ಕ್ಯಾನ್ಸರ್ ತಜ್ಞ ಡಾ| ವಿ.ಪಿ. ಗಂಗಾಧರನ್ ಮತ್ತು …

ಬಜಕೂಡ್ಲು: ಕ್ಲಬ್ ಮಹಾಸಭೆ, ಜಾತ್ರೆ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಧಾರ

ಪೆರ್ಲ: ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ ಅಮ್ಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು ಮುಖ್ಯ ಅತಿಥಿಯಾಗಿದ್ದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು.ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಸಂದರ್ಭ ಕ್ಲಬ್‌ನ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.ಈ ಸಂದರ್ಭ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಪದಾದಿsಕಾರಿಗಳಾಗಿ ಪದ್ಮನಾಭ ಸುವರ್ಣ (ಗೌರವಾಧ್ಯಕ್ಷ), ಚಂದ್ರ ಅಮೆಕ್ಕಳ (ಅಧ್ಯಕ್ಷ), ಮಹೇಶ್ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಜಾತ್ರೆ ನಾಳೆಯಿಂದ

ಕಾಸರಗೋಡು: ಕಾಸರಗೋಡು ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಾಳೆಯಿಂದ 23ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ನಾಳೆ ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, 9ಕ್ಕೆ ಬಳ್ಳಪದವು ವೀಣಾ ವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, 10.45ರ ನಂತರದ ಮುಹೂರ್ತದಲ್ಲಿ ಪ್ರಾರ್ಥನೆ, ಧ್ವಜಾರೋಹಣ, ಮಧ್ಯಾಹ್ನ 12.05ರಿಂದ ಮಹಾಪೂಜೆ, ಉತ್ಸವ ಬಲಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30ರಿಂದ ಭರತನಾಟ್ಯ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ …