ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಉತ್ಸವ: ಕರಂದಕ್ಕಾಡ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ  ವಾರ್ಷಿಕ ಉತ್ಸವದಂಗವಾಗಿ ಕರಂದಕ್ಕಾಡ್ ಬೆಡಿಕಟ್ಟೆ ಸೇವಾ ಸಮಿತಿ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಕರಂದಕ್ಕಾಡ್ ಅಧ್ಯಕ್ಷತೆ ವಹಿಸಿದರು. ಈ ವೇಳೆ ಸಾಧಕರಾದ ಜಗಜೀವನ್ ರಾವ್, ರಾಜಶೇಖರ್, ಅಭಿಜ್ಞಾ ಹರೀಶ್, ಗಿರಿಧರ್ ಸಾಲ್ಯಾನ್, ರಾಮನ್, ಹರೀಶ್ ಕೆ.ಆರ್ ರನ್ನು ಗೌರವಿಸಲಾ ಯಿತು. ಕೋಶಾಧಿಕಾರಿ ಗಣೇಶ್ ಎ, ಕೇಶವ, ವೀರ ಹನುಮಾನ್ ಮಂದಿರದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ರಾಧಾಕೃಷ್ಣ ಸೂರ್ಲು ನಿರೂಪಿಸಿ, ಹರೀಶ್ ಕೆ.ಆರ್ ಸ್ವಾಗತಿಸಿದರು. ಹರೀಶ್ …

ಕ್ಷಯಮುಕ್ತ ಚಟುವಟಿಕೆ ಬೆಳ್ಳೂರು ಪಂಚಾಯತ್‌ಗೆ ಚಿನ್ನದ ಪದಕ

ಬೆಳ್ಳೂರು: 2023ರಿಂದ ಜ್ಯಾರಿಗೆ ತಂದ ಕ್ಷಯಮುಕ್ತ ಚಟುವಟಿಕೆಗ ಳಿಗಾಗಿ ಪಂಚಾಯತ್‌ಗೆ ಚಿನ್ನದ ಪದಕ ಲಭಿಸಿದೆ.  ವಿಶ್ವ ಕ್ಷಯರೋಗ ದಿನವಾದ ನಾಳೆ ಜಿಲ್ಲಾಧಿಕಾರಿ ಈ ಪ್ರಶಸ್ತಿ ಪ್ರದಾನ ಮಾಡುವರು. 2023ರಲ್ಲಿ ‘ಬೆಳ್ಳೂರಿನಲ್ಲಿ ಸೂರ್ಯೋದಯ’ ಎಂಬ ಹೆಸರಲ್ಲಿ ಕ್ಷಯಮುಕ್ತ ಭಾರತ್ ಯೋಜನೆ ಆರಂಭಿಸಲಾಗಿತ್ತು.ಇದರಂಗವಾಗಿ ಆರೋಗ್ಯ ಪಡೆಯನ್ನು ರಚಿಸಿ ತರಬೇತಿ ನೀಡಲಾಗಿತ್ತು. ಇವರು ಹಾಗೂ ಆರೋಗ್ಯ ಕಾರ್ಯಕರ್ತರು ಪಂಚಾಯತ್  ವ್ಯಾಪ್ತಿಯ ಮನೆಗಳಿಗೆ ತೆರಳಿ  ರೋಗ ತಪಾಸಣೆಗಾಗಿ ಸಹಕರಿ ಸಿದ್ದರು. ಜಿಲ್ಲೆಯಲ್ಲಿ ಕ್ಷಯಮುಕ್ತ ಚಟುವಟಿಕೆಗಳನ್ನು ಆರಂಭಿಸಿದ ಪಂಚಾಯತ್‌ಗಳಲ್ಲಿ  ಪ್ರಥಮ ಪಂಚಾಯತ್  ಬೆಳ್ಳೂರಾಗಿದೆ. ಇದರ …

ಎಂಡಿಎಂಎ ಸಹಿತ ಮೂವರ ಬಂಧನ: ಓರ್ವ ಪರಾರಿ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 1.26 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಓರ್ವ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ದ್ದಾನೆ. ನೋರ್ತ್ ತೃಕರಿಪುರ ಮಿಲಿಯೇಟ್‌ನ ಎಂ.ಟಿ.ಪಿ. ಮರ್ಶಾದ್ (24), ಉದಿನೂರು ನಡಕ್ಕಾವಿನ ಮುಹಮ್ಮದ್ ಸಫ್ವಾನ್ (28) ಮತ್ತು ನೋರ್ತ್ ತೃಕರಿಪುರದ ಅಯಿಟ್ಟಿ ನಿವಾಸಿ ಮುಹಮ್ಮದ್ ಶಿಯಾಸ್ (31) ಬಂಧಿತರಾದ ಆರೋಪಿಗಳು. ವಲಿಯಪರಂಬದಲ್ಲಿ ರಾತ್ರಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಆರೋಪಿಗಳು ಬಂದ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಎಂಡಿಎಂಎ ಪತ್ತೆಯಾಗಿದೆ …