ಕನ್ನಡ ಗ್ರಾಮ ಗೋ ಕುಟೀರದ ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ
ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ 36ನೇ ಸಂಸ್ಥಾಪನಾ ವರ್ಷಾಚರಣೆ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋ ಕುಟೀರದ ಕಾಮಗಾರಿಯ ಎರಡನೇ ಹಂತಕ್ಕೆ ಚಾಲನೆ ನೀಡಲಾಯಿತು. ಕಳೆದ ನವಂಬರ್‌ನಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದರ ಮೊದಲ ಹಂತ ಪೂರ್ಣಗೊಂಡಿದ್ದು, ದ್ವಿತೀಯ ಹಂತದ ಕಾಮಗಾರಗೆ ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ನಿನ್ನೆ ಚಾಲನೆ ನೀಡಿದರು. ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. …
Read more “ಕನ್ನಡ ಗ್ರಾಮ ಗೋ ಕುಟೀರದ ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ”